

ಬೆಳ್ತಂಗಡಿ; ವಾಲಿಬಾಲ್ ಬಹಳ ಪ್ರಮುಖವಾದ ಕ್ರೀಡೆ ಆಟಗಾರರು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ಆಟಗಾರನಾಗಲು ಸಾಧ್ಯ, ನಿರಂತರವಾದ ತಲ್ಲೀನತೆ, ತೊಡಗಿಸಿಕೊಳ್ಳುವಿಕೆ ಅಗತ್ಯವಾಗಿದೆ, ಆಟ ಕೇವಲ ಒಂದು ದಿನಕ್ಕಾಗಿ ಆಗಬಾರದು ಸ್ಥಳೀಯ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ
ಸ್ಪೆಕ್ಟ್ರಮ್ ಧರ್ಮಸ್ಥಳ ಇದರ ವತಿಯಿಂದ ಧರ್ಮಸ್ಥಳ ದಲ್ಲಿ ನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ವಹಿಸಿ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಧರ್ಮಸ್ಥಳ ಸೇವಾಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರೀತಂ, ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅರುಣ್ ಕುಮಾರ್ ಉಜಿರೆ, ಶಾಲಾ ಮುಖ್ಯೋ ಪಾಧ್ಯಾಯಿನಿ ಜಯಶ್ರೀ ಜೈನ್, ಲಯನ್ಸ್ ಬೆಳ್ತಂಗಡಿ ಅಧ್ಯಕ್ಷ ದೇವದಾಸ ಶೆಟ್ಟಿ, ಚಂದ್ರ ರಾಜ್ ಜೈನ್, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೆಟ್ಟಿ,
ರತ್ನರಾಜ್ ಜೈನ್, ಸುಧಾಕರ ಗೌಡ, ಪ್ರವೀಣ್, ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಶಂಕರ ಶೆಟ್ಟಿ, ಗ್ರಾ.ಪಂ ಅಧ್ಯಕ್ಷೆ ವಿಮಲ,ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಕಿರಣ್ ಕುಮಾರ್,
ಹಾಗೂ ಇತರರು ಇದ್ದರು.


ಸಾಧಕರಿಗೆ ಸನ್ಮಾನ;
ನಾಲ್ಕು ಮಂದಿ ಸಾಧಕರ ಸನ್ಮಾನ
ನಿವೃತ್ತ ಶಿಕ್ಷಕರಾದ ನರೇಂದ್ರ ಕುಮಾರ್, ಹಿರಿಯ ವಾಲಿಬಾಲ್ ಆಟಗಾರ ತೋಮಸ್, ಎಸ್.ಡಿ.ಎಂ ಕಾಲೇಜಿನ ಪಿ.ಡಿ ರಮೇಶ್, ವಾಲಿಬಾಲ್ ಸಂಘಟಕ ಗಣೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ಎರಡು ದಿನಗಳ ಕಾಲ ನಡೆಯುವ ಈ
ಪಂದ್ಯಾಟದಲ್ಲಿ ಕೇರಳ ತಮಿಳುನಾಡು ಹಾಗೂ ಕರ್ನಾಟಕದ ತಂಡಗಳು ಭಾಗವಹಿಸುತ್ತಿದೆ.ಸ
ಸ್ಪೆಕ್ಟ್ರಮ್ ತಡದ ವಿಕ್ರಂ ಹಾಗೂ ಇತರರು ಗಣ್ಯರನ್ನು ಸ್ವಾಗತಿಸಿದರು.

