ಬೆಳ್ತಂಗಡಿ; ಎಸ್.ಎಂ ವೈ.ಎಂ ಧರ್ಮಸ್ಥಳ ಹಾಗೂ ಬಂಗಾಡಿ ಇದರ ಸಹಕಾರದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಇಂಟರ್ ಪ್ಯಾರಿಷ್ ಫುಟ್ಬಾಲ್ ಪಂದ್ಯಾಟ ಡಿ. 4 ಶನಿವಾರ ಉಜಿರೆಯ ಎಸ್.ಡಿ.ಎಂ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ.
ಫುಟ್ಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಉಡುಪಿ ಹಾಗೂ ಕೊಡಗು ಜಿಲ್ಲೆಯ 20ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಪಂದ್ಯಾಟ ಆರಂಭಗೊಳ್ಳಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ನೆರವೇರಿಸಲಿದ್ದಾರೆ.ಮೂಡಬಿದ್ರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸಂದೇಶ್ ಪಿ ಜಿ ಅವರು ಮುಖ್ಯ ಅತಿಧಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಬಂಗಾಡಿ ಚರ್ಚಿನ ಧರ್ಮ ಗುರುಗಳಾದ ಫಾ. ಸೆಬಾಸ್ಟಿಯನ್ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಚರ್ಚಿನ ಸಹಾಯಕ ಧರ್ಮಗುರುಗಳಾದ ಫಾ. ಕ್ರಿಸ್ಟಿನ್ , ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಟಿ.ವಿ ದೇವಸ್ಯ, ಕನ್ನಡ ಚಲನಚಿತ್ರ ನಿರ್ದೇಶಕರಾದ ಸುಕೇಶ್ ಶೆಟ್ಟಿ, ಮುಂಡಾಜೆಯ ಉದ್ಯಮಿಗಳಾದ ಸೆಬಾಸ್ಟಿಯನ್ ಪಿ.ಸಿ, ಉಜಿರೆ ಎಸ್.ಡಿ.ಎಂ ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಅವರು ಹಾಗೂ ಇತರ ಮುಖಂಡರುಗಳು ಭಾಗವಹಿಸಲಿದ್ದಾರೆ.
ಎಂದು ಎಸ್.ಎಂ ವೈ.ಎಂ ಧರ್ಮಸ್ಥಳ ಅಧ್ಯಕ್ಷರಾದ ನಿಖಿಲ್ ಜೋಸ್ ಹಾಗೂ ಬಂಗಾಡಿಯ ಅಧ್ಯಕ್ಷ ಸಜಿತ್ ಸಾಬು ತಿಳಿಸಿದ್ದಾರೆ
