ಬೆಳ್ತಂಗಡಿ: ಪುಂಜಾಲಕಟ್ಟೆ ಮತ್ತು ಚಾರ್ಮಾಡಿ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯ ಭಾಗವಾಗಿ, ಕಕ್ಕಿಂಜೆಯಲ್ಲಿ ರಸ್ತೆ ಬೈಪಾಸ್ ಮಾರ್ಗದ ತಿರುಗಿಸಲು ಪ್ರಸ್ತಾವಿಸಲಾಗಿದೆ. ಈ ತಿರುಗುವಿಕೆಯು ಕಕ್ಕಿಂಜೆ ಪಟ್ಟಣದ ಬೆಳವಣಿಗೆ ಮತ್ತು ಸ್ಥಳೀಯ ವ್ಯಾಪಾರಿಗಳ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಮತ್ತು ಬೈಪಾಸ್ ಮೂಲಕ ರಸ್ತೆ ತಿರುಗಿಸುವುದರಿಂದ ಪಟ್ಟಣದ ಮೂಲಕ ಸಾಗುವ ಸಂಚಾರವು ಕಡಿಮೆಯಾಗುತ್ತದೆ, ಕಕ್ಕಿಂಜೆ ಪೇಟೆಯ ಮುಲಕ ಪ್ರಯಾಣೊಸುವ ಸ್ಥಳೀಯ ಜಮರಿಗೂ ವಿದ್ಯಾರ್ಥಿಗಳಿಗು ಸಮಸ್ಯೆಯಾಗಾಗುತ್ತದೆ, ಇದರಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ವ್ಯಾಪಾರಕ್ಕೆ ಅವಲಂಬಿತರಾಗಿರುವವರು ಆರ್ಥಿಕ ಹಾನಿಯನ್ನು ಅನುಭವಿಸಬೇಕಾಗುತ್ತದೆ ಎಂದು ಆಶ್ರಫ್ ಕಕ್ಕಿಂಜೆ ಹೇಳಿದರು.
ಅವರು ಜ.2ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದರು.
ಈ ಬದಲಾವಣೆ ಕಕ್ಕಿಂಜೆ ಪಟ್ಟಣದ ಭವಿಷ್ಯದ ಬೆಳವಣಿಗೆಗೆ ಅಡ್ಡಿ ತರುವ ಸಾಧ್ಯತೆ ಇದೆ. ರಸ್ತೆಯ ಈಗಿನ ಸ್ಥಿತಿಯನ್ನು ಉಳಿಸುವುದು ಪಟ್ಟಣದ ಆರ್ಥಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಪಾಡಲು ಅತೀ ಅಗತ್ಯವಾಗಿದೆ. ಆದ್ದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ಕಾಮಗಾರಿಯನ್ನು ಪ್ರಸ್ತಾವಿತ ಬೈಪಾಸ್ ಮಾರ್ಗವನ್ನು ತಪ್ಪಿಸಿ, ಈಗಿರುವ ರಸ್ತೆಯ ಮೂಲಕ ಮುಂದುವರಿಸಬೇಕೆಂದು ಗುತ್ತಿಗೆದಾರರು ಸಂಸ್ಥೆಗೆ ಸೂಚನೆ ನೀಡುವಂತೆ ಒತ್ತಾಯಿಸಿದರು. ಈ ಕ್ರಮವು ಪಟ್ಟಣದ ಜನರ ಮತ್ತು ವ್ಯಾಪಾರಿಗಳ ಹಿತಾಶಕ್ತಿಯನ್ನು ಕಾಪಾಡುವಂತೆ ಮಾಡುತ್ತದೆ ಎಂದು ಒತ್ತಾಯಿಸಿದರು. ಪೇಟೆ ಮೂಲಕ ಹೋಗಲು ಅಂಗಡಿ ಹೊಂದಿರುವವರು, ಪೇಟೆಯಲ್ಲಿ ಜಾಗ ಹೊಂದಿರುವವರು ಬೆಂಬಲ ನೀಡಿದ್ದಾರೆ.
ಈ ವಿಷಯದ ಕುರಿತು ಶಾಸಕರು ಸಂಸದರು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕಕ್ಕಿಂಜೆ ಮತ್ತು ಇಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಬೆಂಬಲ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಈ ಭಾಗದ ನಾಗರಿಕರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ರಹೀಂ, ತಾ.ಪಂ. ಮಾಜಿ ಸದಸ್ಯ ಪಿ.ಟಿ. ಸೆಬಾಸ್ಟಿನ್, ಇಲ್ಯಾಸ್, ಜಬೈದ್ ಭಂಡಸಾಲೆ, ಸಂಶುದ್ಧೀನ್ ಬೀಟಿಗೆ, ಸಿದ್ಧಿಕ್ ಅರೆಕ್ಕಲ್, ಹರೀಶ್ ಬಾಬಾ, ತೌಸಿಫ್, ಮಹಮ್ಮದ್ ಶಬೀರ್ ಉಪಸ್ಥಿತರಿದ್ದರು.
