
ಬೆಳ್ತಂಗಡಿ : ಇಳಂತಿಲ ಗ್ರಾಮ ಪಂಚಾಯತ್ ನ 1ನೇ ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯೆ ರೇಖಾ ರವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನವಂಬರ್ 23 ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಈಶ್ವರ ಗೌಡ ರವರ ಪತ್ನಿ ಕುಸುಮ ಈಶ್ವರ ಗೌಡ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರ ಭಟ್, ಮಾಯಿಲತೋಡಿ, ಪುತ್ತೂರು ವಿಟ್ಲ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ ಬಿ, ಉಪ ಚುನಾವಣೆಯ ಪಕ್ಷದ ಉಸ್ತುವಾರಿಗಳಾದ ಜಯವಿಕ್ರಮ್, ಕಲ್ಲಾಪು, ಸಹ ಉಸ್ತುವಾರಿ, ಗ್ರಾಮ ಪಂಚಾಯತ್ ಸದಸ್ಯ ಯು ಕೆ ಇಸುಬು, ಹಿರಿಯರಾದ ಜಿನ್ನಪ್ಪ ಪೂಜಾರಿ, ಆಟಾಲು,ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಈಶ್ವರ ಗೌಡ, ಬಾರಿಕೆ, ಸವಿತಾ ಮೋಹನ ನಾಯ್ಕ, ಕಾಂಗ್ರೇಸ್ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ, ನೂಜಿ, ಮಾಜಿ ಅಧ್ಯಕ್ಷ ನಾರಾಯಣ ಗೌಡ, ಇಳಂತಿಲ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅಬ್ದುಲ್ ಲತೀಫ್, ಕನ್ಯಾರಕೋಡಿ, ಡೋನ್ ಬೋಸ್ಕೊ ಲೋಬೋ, ಗ್ರೇಸಿ ಲೋಬೋ ಮುಂತಾದವರು ಉಪಸ್ಥಿತರಿದ್ದರು.
