Home ರಾಜಕೀಯ ಸಮಾಚಾರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಿಜೆಪಿ ಗೆಲುವ; ಬೆಳ್ತಂಗಡಿ  ಬಿಜೆಪಿ ಕಾರ್ಯಕರ್ತರಿಂದ ಗೆಲುವಿನ ಸಂಭ್ರಮಾಚರಣೆ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಿಜೆಪಿ ಗೆಲುವ; ಬೆಳ್ತಂಗಡಿ  ಬಿಜೆಪಿ ಕಾರ್ಯಕರ್ತರಿಂದ ಗೆಲುವಿನ ಸಂಭ್ರಮಾಚರಣೆ

1
0

ಬೆಳ್ತಂಗಡಿ : ಮೇ 04 ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿ,ಬಿಜೆಪಿ ಆಡಳಿತ ಚುಕ್ಕಾಣಿ ಪಡೆದು ಇತಿಹಾಸ ನಿರ್ಮಾಣ ಮಾಡಿದ ಪ್ರಯುಕ್ತ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಪಕ್ಷದ ಕಚೇರಿ ಮುಂಭಾಗದಲ್ಲಿ ಸಿಡಿಮದ್ದು ಸಿಡಿಸಿ, ಜೈ ಕಾರ ಘೋಷಣೆ ಮೊಳಗಿಸುವ ಮೂಲಕ, ಸಿಹಿತಿಂಡಿ ಹಂಚಿಕೊಂಡು ಗೆಲುವಿನ ಸಂಭ್ರಮಾಚರಣೆ ಮಾಡಲಾಯಿತು. ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ್ ರಾವ್ ಮಾತಾಡಿ ಪಂಚ ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ, ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದನೆಯ 15 ವರ್ಷದ ಆಡಳಿತವನ್ನು ಮತದಾರರು ತಿರಸ್ಕಾರ ಮಾಡಿ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದೀಜಿ ನಾಯಕತ್ವವನ್ನು ಮೆಚ್ಚಿ 200 ಸ್ಥಾನದಲ್ಲಿ ಅವಿಸ್ಮರಣೀಯ ಐತಿಹಾಸಿಕ ಗೆಲುವು ಸಾಧಸಿದೆ, ಅದೇ ರೀತಿ ಅಸ್ಸಾಂ,ಪುದುಚೇರಿ, ರಾಜ್ಯದಲ್ಲಿ ಬಿಜೆಪಿ ಬಹುಮತ ಆಡಳಿತ ಚುಕ್ಕಾಣಿ ಪಡೆದಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೆಯವನ್ನು ಸ್ವೀಕರಿಸಿದ ಮತದಾರರು ನಾಯಕತ್ವ ವಿಶ್ವಕ್ಕೆ ಮಾದರಿಯಾಗಿದೆ, ಐದು ರಾಜ್ಯದಲ್ಲಿ 3 ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದಿದೆ.ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಸಾದ್ ಕುಮಾರ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮನ್ ಕೀ ಬಾತ್ ಜಿಲ್ಲಾ ಪ್ರಭಾರಿ ಸೀತಾರಾಮ್ ಬೆಳಾಲು, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್,ಮಂಡಲ ಯುವಮೋರ್ಚಾ ಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಲಾಯಿಲ, ಕಾರ್ಯದರ್ಶಿ ಜಗದೀಶ್ ಕನ್ನಾಜೆ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ ,ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಶರತ್, ಗಿರೀಶ್ ಡೋಂಗ್ರೆ ಲಾಯಿಲ , ಸುಧಾಕರ್ ಬಿ. ಎಲ್,ವಿಠಲ್ ಗುರುವಾಯನಕೆರೆ, ಮಹೇಶ್,ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here