ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರಿನಲ್ಲಿ ಹಳೆಯ ದ್ವೇಷಕ್ಕೆ ಹೊಡೆದಾಟ ನಡೆದಿದ್ದು ಇದೀಗ ಎರಡೂ ತಂಡದ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಚಾರು ನಿವಾಸಿ ಅಶ್ವಥ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಜೂ.2 ರಂದು ಸಂಜೆಯ ವೇಳೆ ಉಜಿರೆ ಗ್ರಾಮದ ಮೇಲಿನ ಮಾಚಾರು ಎಂಬಲ್ಲಿದ್ದಾಗ ಅಲ್ಲಿಗೆ ಬಂದ ಆರೋಪಿಗಳಾದ ಕರುಣಾಕರಗೌಡ, ನಿತಿನ್ ಹಾಗೂ ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕರುಣಾಕರ ಗೌಡ ಈ ಸಂದರ್ಭದಲ್ಲಿ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಮೂವರು ಸೇರಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದ ಅಶ್ವಥ್ ಬೆಳ್ತಂಗಡಿ ಆಸ್ಲಿ ದಾಖಲಾಗಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಕರುಣಾಕರ ಗೌಡ ಅವರ ತಾಯಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ತನ್ನ ಮಗನ ಮೇಲೆ ಆರೋಪಿಗಳಾದ ಅಶ್ವಥ್ ಮತ್ತು ಪ್ರಮೋದ್ ಎಂಬವರು ಹಲ್ಕೆ ನಡೆಸಿದ್ದು ಅದನ್ನು ನೋಡಿ ಮಗನನ್ನು ರಕ್ಷಿಸಲು ಅಲ್ಲಿಗೆ ಹೋದ ತನ್ನಮೇಲೆ ಹಲ್ಲೆ ನಡೆಸಿರುವುದಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
