Home ರಾಷ್ಟ್ರ/ರಾಜ್ಯ ಎಸ್.ಎಸ್.ಎಫ್. ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಿಗೆ ಗೇರುಕಟ್ಟೆಯಲ್ಲಿ ಅಭಿನಂದನೆ

ಎಸ್.ಎಸ್.ಎಫ್. ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ವಿಜೇತರಿಗೆ ಗೇರುಕಟ್ಟೆಯಲ್ಲಿ ಅಭಿನಂದನೆ

199
0

ಗೇರುಕಟ್ಟೆ : ಆಂಧ್ರಪ್ರದೇಶದಲ್ಲಿ ನಡೆದ ಎಸ್.ಎಸ್.ಎಫ್ ನ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ದ ಕವಾಲಿಯಲ್ಲಿ ಪ್ರಥಮ ಸ್ಥಾನ ಹಾಗೂ ಅರೇಬಿಕ್
ನಶೀದಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಜುನೈದ್ ಪರಪ್ಪು, ಅನ್ವರ್ ಸಾದಾತ್ ಪರಪ್ಪು, ಹಾಗೂ ಉರ್ದು ಹಮ್ಡ್ ಸ್ಪರ್ಧೆಯಲ್ಲಿ ಸೈಫುಲ್ಲಾ ಪರಪ್ಪು ಪ್ರಥಮ ಸ್ಥಾನ ಪಡೆದು ವಿಜೇತರಾದ ಪರಪ್ಪು ಯೂನಿಟ್ ನ ಎಸ್.ಎಸ್.ಎಫ್ ನ ಸದಸ್ಯರನ್ನು ಗೇರುಕಟ್ಟೆಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.
ಈ ಸ್ಪರ್ಧೆಯಲ್ಲಿ ದೇಶದ ಹಲವಾರು ರಾಜ್ಯಗಳು ಭಾಗವಹಿಸಿ ಕರ್ನಾಟಕ ರಾಜ್ಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತರನ್ನು ತೆರೆದ ವಾಹನದಲ್ಲಿ ಗೇರುಕಟ್ಟೆಯಿಂದ ಪರಪ್ಪು ಜಾರಿಗೆಬೈಲು ಸುಣ್ಣ ಲಡ್ಡ ಮುಳ್ಳಗುಡ್ಡೆ
ಬಟ್ಟೆಮಾರುವರೇಗೆ ವಾಹನ ಜಾಥಾ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಖತೀಬರಾದ ತಾಜುದ್ದಿನ್ ಸಖಾಫಿ,ಅಬೂಬಕ್ಕರ್ ಹಾಜಿ, ಸಿದ್ದೀಕ್ ಮುಈನಿ,ಹಸೈನಾರ್ ಸಅದಿ, ಅಬ್ಬಾಸ್ ಹಿಶಮಿ, ಮುಸ್ತಫ ಹಿಮಮಿ,ಸಂಶೀರ್ ಸಖಾಫಿ,ಇಕ್ಬಾಲ್ ಮರ್ಜೂಕಿ, ಅಬ್ದುಲ್ ಕರೀಮ್, ಬಿ.ಎಂ. ಆದಂ ಹಾಜಿ, ಎನ್.ಎನ್ ಮಹಮ್ಮದ್,ಸಿದ್ದೀಕ್ ಜಿ ಎಚ್, ಫಯಾಜ್,ರಹಿಮಾನ್ ಮಾಸ್ಟರ್, ಹಾಗೂ ಜಮಾಅತರು,ಎಸ್ಎಸ್ಎಫ್ ನ ಸದಸ್ಯರು,ಎಸ್ ವೈ ಎಸ್, ಕೆ.ಎಮ್.ಜೆ ಯ ಪದಾಧಿಕಾರಿಗಳು,ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೊನೆಯಲ್ಲಿ ಪರಪ್ಪು ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here