ಬೆಳ್ತಂಗಡಿ: ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರದಲ್ಲಿ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ವೇಣೂರು ಸಜ್ಜಾಗಿದ್ದು ಫೆ 22ರಿಂದ ಮಾ1ರವರೆಗೆ ಮಹಾಮಸ್ತಕಾಭಿಷೇಕ ಸಂಭ್ರಮದಿಂದನಡೆಯಲಿದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರು,ಮಹಾ ಮಸ್ತಾಕಾಭಿಷೇಕದ ಕಾರ್ಯಾಧ್ಯಕ್ಷರು ಆದ ಡಾ.ಪದ್ಮಪ್ರಸಾದ ಅಜಿಲರು ಹೇಳಿದರು.
ಅವರು ಫೆ.19 ರಂದು ವೇಣೂರುನಲ್ಲಿ ಮಹಾ ಮಸ್ತಕಾಭಿಷೇಕದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿ

ವೇಣೂರಿನ ಫಲ್ಗುನಿ ನದಿ ತೀರದಲ್ಲಿ ಕ್ರಿ.ಶ. 1604 ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಅಜಿಲರಸರಾದ ತಿಮ್ಮಣ್ಣಾಜಿಲರು ಪ್ರತಿಷ್ಟಾಪಿಸಿ, ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಿಸಿದರು. ಬಳಿಕ ಲಭ್ಯ ದಾಖಲೆಗಳ ಪ್ರಕಾರ 1928,1856,2000, 2012 ರಲ್ಲಿ ಜರಗಿವೆ.ಇದೀಗ 2024 ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಫೆ 22 ನೇ ಗುರುವಾರ ಆರಂಭಗೊಂಡು ಮಾ.1ರ ವರೆಗೆ ನಡೆಯಲಿದೆ. ಇಲ್ಲಿಯ ತೀರ್ಥಕ್ಷೇತ್ರ ಸಮಿತಿ ಆಶ್ರಯದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ಮಹಾ ಮಸ್ತಕಾಭಿಷೇಕ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರತಿದಿನ ಸಂಜೆ 5.30ಕ್ಕೆ ಮಹಾಮಸ್ತಕಾಭಿಷೇಕ ಆರಂಭಗೊಳ್ಳುತ್ತದೆ. ಅಗ್ರೋದಕ ಮೆರವಣಿಗೆ, ಜಲ,ಕಷಾಯ,ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಚಂದನ,ಅಷ್ಟಗಂಧ, ಹಾಲು,ಎಳನೀರು, ಕೇಸರಿ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿ ಪುಷ್ಪವೃಷ್ಟಿ, ಮಹಾಮಂಗಳಾರತಿ, ಶಾಂತಿಮಂತ್ರದೊಂದಿಗೆ ಸಂಪನ್ನಗೊಳ್ಳಲಿದೆ.
ಮಹಾ ಮಸ್ತಕಾಭಿಷೇಕ ಸಂದರ್ಭ ದಿಗಂಬರ ಯುಗಳ ಮುನಿಶ್ರೀಗಳಾದ 108 ಅಮೋಘಕೀರ್ತಿ ಮಹರಾಜ್ ಮತ್ತು 108 ಅಮರಕೀರ್ತಿ ಮಹರಾಜ್ ಭಾಗವಹಿಸಿ ಆಶೀರ್ವಚಿಸಲಿರುವರುರಾಜ್ಯದ ಜೈನಪರಂಪರೆಯ ಎಲ್ಲಾ ಮಠಾಧೀಶರು ಹಾಗೂ ಜೈನ ಆರ್ಯಿಕೆಯರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.

ಫೆ 22ರಂದು ರಾಜ್ಯ ಸರಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಡಾಮಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡುರಾವ್, ಸಂಸದರು, ಶಾಸಕರು ಹಾಗೂ ಇತರ ಗಣ್ಯರು ಭಾಗಿಗಳಾಗಲಿದ್ದಾರೆ. ಪ್ರತಿದಿನ ಧಾರ್ಮಿಕ ಸಾಬಾ ಕಾರ್ಯಕ್ರಮ ನಡೆಯಲಿದ್ದು ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್, ಸಚಿವರಾದ ಜಮೀರ್ ಅಹಮ್ಮದ್ ಖಾನ್, ಎನ್.ಎಸ್ ಬೋಸರಾಜ್,ಡಿ ಸುಧಾಕರ್ ಮಾಜಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಂ ವೀರಪ್ಪ ಮೊಯಿಲಿ, ಮೈಸೂರು ಅರಮನೆಯ ಯದುವೀರ್ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಾಲಿ ಹಾಗೂ ಮಾಜಿ ಶಾಸಕರುಗಳು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.
ಮಾ.1ರಂದು ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್, ಮುಖ್ಯ ಅತಿಧಿಗಳಾಗಿ ಭಾಗವಹಿಸಲಿದ್ದು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆರು.
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಪ್ರತಿದಿನ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸಂಸ್ಜೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪ್ರತಿದಿನವೂ ಅನ್ನದಾಸೋಹ ನಡೆಯಲಿದ್ದು 10 ರಿಂದ 20 ಸಾವಿರ ಜನರ ಭಾಗಿಗಳಾಗುವ ನೀರೀಕ್ಷೆಯಿದೆ. ಇದಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಾಣವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನಸ್ತೋಮದ ಸಹಾಯಕ್ಕೆ ಸ್ವಯಂಸೇವಕರ ತಂಡವೇ ತಯಾರಾಗಿದೆ ಎಂದು ಅವರು ತಿಳಿಸಿದರು.
ಮಹಾಮಸ್ತಕಾಭಿಷೇಕದ ಈ ಸಂದರ್ಭ ಬಹಳಷ್ಟು ಭಕ್ತಾದಿಗಳು, ವೀಕ್ಷಕರು ಆಗಮಿಸಲಿದ್ದು ಇಲ್ಲಿಯ ಮೂಲಸೌಕರ್ಯಗಳನ್ನು ಸರಕಾರದ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಒಂದು ಕೋಟಿ ಅನುದಾನ ಲಭಿಸಿದೆ. ಸರಕಾರದ ಅನುದಾನದ ನೆರವಿನಿಂದ ಕ್ಷೇತ್ರದ ಸುತ್ತಲಿನ ಸುತ್ತು ರಸ್ತೆಯನ್ನು ಡಾಮರೀಕರಣಗೊಳಿಸಲಾಗಿದೆ. ಶೌಚಾಲಯಗಳ ನಿರ್ಮಾಣವಾಗಿದೆ. ವಿಶೇಷ ಅನುದಾನದ ನೆರವಿನಿಂದ ಬೆಟ್ಟದ ಒಳಗಿನ ಅಂಗಣಕ್ಕೆ ಕಲ್ಲು ಹಾಸು ಮಾಡಲಾಗಿದೆ. ವಿದ್ಯುತ್ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಕುಡಿಯುವ ನೀರಿನ ಸರಬರಾಜು ಗಮನದಲ್ಲಿಟ್ಟು ಹೊಸ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ತೀರ್ಥಕ್ಷೇತ್ರ ಸಮಿತಿ ತನ್ನ ಸ್ವಂತ ಸಂಪನ್ಮೂಲದಿಂದ ಬೆಟ್ಟದೊಳಗಿನ ಅಕ್ಕ,ಪಕ್ಕದ ಬಸದಿಗಳನ್ನು ಜೀರ್ಣೋದ್ಧಾರಗೊಳಿಸಿ ಪಂಚಕಲ್ಯಾಣ ವಿಧಿ ನೆರವೇರಿಸಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತಾದಿಗಳ ಸಂಖ್ಯೆಯನ್ನು ಗಮನಿಸಿ ಸುರಕ್ಷತೆಗಾಗಿ ಈ ಬಾರಿ ಅಟ್ಟಳಿಗೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ ಭಧ್ರತೆಯನ್ನು ಹೆಚ್ಚಿಸಿದೆ. ಸಾಕಷ್ಟು ವಿದ್ಯುತ್ ಬೆಳಕು ಇರುವಂತೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಂಡಿದೆ.
ಕ್ಷೇತ್ರದ ಎಲ್ಲಾ ಕಾಮಗಾರಿಗಳ ಮೇಲುಸ್ತುವಾರಿ ಮತ್ತು ವ್ಯವಸ್ಥೆಗಳ ಪರಿಶೀಲನೆ ಈಗಾಗಲೇ ಹಲವು ಸುತ್ತುಗಳಲ್ಲಿ ನಡೆದಿದ್ದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಲವು ಸಭೆಗಳನ್ನು ನಡೆಸಿ ಮಾರ್ಗಾದರ್ಶನ ನೀಡಿದ್ದಾರೆ, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ,ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಗಮಿಸಿ ಸೂಕ್ತ ವ್ಯವಸ್ಥೆ ಏರ್ಪಡಿಸಿರುತ್ತಾರೆ.ಈಗಾಗಲೇ ಸರಕಾರ ಮತ್ತು ಕ್ಷೇತ್ರದ ಸಂಪರ್ಕಕ್ಕಾಗಿ ನೋಡೆಲ್ ಅಧಿಕಾರಿಗಳ ನೇಮಕಾತಿ ಮಾಡಿದ್ದು ಅವರು ಸರಕಾರದ ವತಿಯಿಂದ ಕ್ಷೇತ್ರದೊಂದಿಗೆ ಸಂಪರ್ಕದಲ್ಲಿದ್ದು ಸಹಕರಿಸುತಿದ್ದಾರೆ. ವೇಣೂರು ಗ್ರಾಮ ಪಂಚಾಯತಿನಿಂದಲೂ ಎಲ್ಲರೀತಿಯ ಸಹಕಾರ ಬೆಂಬಲ ನೀಡಲಾಗುತ್ತಿದೆ ಎಂದರು.

ದೂರದಿಂದ ಬರುವ ಯಾತ್ರಿಕರಿಗೆ ತಂಗಲು ಸ್ಥಳೀಯ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ವೇಣೂರಿನ ಶಾಲೆಗಳಿಗೆ ವಿಶೇಷ ರಜೆ ನೀಡಲಾಗಿದೆ. ವೇಣೂರಿಗೆ ಒಂದು ಯಾತ್ರೀ ನಿವಾಸದ ಅಗತ್ಯವಿದ್ದು ಅದರ ಬಗ್ಗೆ ಸರಕಾರದ ಗಮನಸಳೆಯಾಗಿದೆ ಮುಖ್ಯಮಂತ್ರಿ ಅವರು ವಿಶೇಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
ಪತ್ರಿಗೋಷ್ಠಿಯಲ್ಲಿ ಮಹಾ ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ್ ಕಂಬ್ಲಿ ಉಪಸ್ಥಿತರಿದ್ದರು.