ಬೆಳ್ತಂಗಡಿ; ಕೇಂದ್ರ ಸರಕಾರ ಬೆಳ್ತಂಗಡಿ ತಾಲೂಕಿನ ಎರಡು ಪ್ರಮುಖ ರಾಷ್ಟ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದು ಇದೀಗ ಶಂಕುಸ್ಥಾಪನೆ ಫೆ22ರಂದು ನಡೆಯಲಿದೆ. ಬಹುನಿರೀಕ್ಷೆಯ ಚಾರ್ಮಾಡಿ ಘಾಟಿ ರಸ್ತೆ ಹಾಗೂ ಉಜಿರೆ- ಧರ್ಮಸ್ಥಳ- ಪೆರಿಯಶಾಂತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರಸರಕಾರದ ರಸ್ತೆ,ಸಾರಿಗೆ, ಹಾಗೂ ಹೆದ್ದಾರಿ ಸಚಿಚರಾದ ನಿತಿನ್ ಗಡ್ಕರಿ ಅವರು ಫೆ.22 ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ,

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವರುಗಳು, ಸಂಸದರುಗಳು, ಶಾಸಕರುಗಳು ಭಾಗಿಗಳಾಗಲಿದ್ದಾರೆ.
ಈ ಸಂದರ್ಭದಲ್ಲಿ ಉಜಿರೆ- ಧರ್ಮಸ್ಥಳ- ಪೆರಿಯಶಾಂತಿ ರಸ್ತೆ 28.50ಕಿ.ಮೀ ರಸ್ತೆಯನ್ನು 614ಕೋಟಿ ವೆಚ್ಚದಲ್ಲಿ ದ್ವಿಪದ ರಸ್ತೆಯಾಗಿ ಅಭಿವೃದ್ಧಿಹೊಂದಲಿದೆ, ಚಾರ್ಮಾಡಿ ಘಾಟಿಯಲ್ಲಿ ಚಾರ್ಮಾಡಿಯಿಂದ ದ.ಕ ಜಿಲ್ಲೆಯ ಗಡಿಯವರೆಗೆ 11ಕಿ.ಮೀ ರಸ್ತೆ 344ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯಾಗಲಿದೆ. ಇದರೊಂದಿಗೆ ಇದೇ ಹೆದ್ದಾರಿಯ ಮೂಡಿಗೆರೆಯಿಂದ ಚಿಕ್ಕಮಗಳೂರಿನ ವರೆಗೆ 27ಕಿ.ಮೀ ರಸ್ತೆ 400ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಇದಲ್ಲದೆ ರಾಜ್ಯದ ಒಟ್ಟು 300ಕಿ.ಮೀ ರಸ್ತೆ 6,200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯಾಗಲಿದೆ. ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯ ಶಿವಮೊಗ್ಗದಲ್ಲಿ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಪಾಲಿಗೆ ಇದು ಅತ್ಯಂತ ಮಹತ್ವದ ಎರಡು ರಸ್ತೆಗಳಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿರುವ ರಸ್ತೆಗಳು ಇದಾಗಿದ್ದು ಇದು ಬಹು ಬೇಗ ಈಡೇರಿದಂತಾಗಿದೆ.