Home ಬ್ರೇಕಿಂಗ್‌ ನ್ಯೂಸ್ ಹಿರಿಯ ಸಾಹಿತಿ ಕೆ‌.ಟಿ ಗಟ್ಟಿ ನಿಧನ

ಹಿರಿಯ ಸಾಹಿತಿ ಕೆ‌.ಟಿ ಗಟ್ಟಿ ನಿಧನ

179
0

ಬೆಳ್ತಂಗಡಿ; ಕನ್ನಡದ ಹಿರಿಯ ಕಾದಂಬರಿಕಾರ ಕೆ.ಟಿ ಗಟ್ಟಿ ಅವರು ಸೋಮವಾರ ನಿಧನರಾಗಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ನೂರಕ್ಕೂ ಅಧಿಕ ಕೃತಿಗಳನ್ನು ಬರೆದಿರುವ ಕೆ.ಟಿ ಗಟ್ಟಿ ಅವರು 50 ಕ್ಕೂ ಆಧಿಕ ಕಾದಂಬರಿಗಳನ್ನು ರಚಿಸಿದ್ದಾರೆ. ನಾಟಕಗಳು, ಪ್ರವಾಸಿ ಕದನಗಳು, ಮಕ್ಕಳಿಗಾಗಿ ಪೋಷಕರಿಗಾಗಿ ಅವರು ಬರೆದಿರುವ ಪುಸ್ತಕಗಳು ಕನ್ನಡದಲ್ಲಿ ಜನಪ್ರಿಯವಾಗಿದೆ.ಭಾಷಾ ತಜ್ಞರಾಗಿರುವ ಇವರು ಭಾಷಾ ಶಾಸ್ತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಇವರಿಗರ ರಾಜ್ಯೋತ್ಸವ ಪ್ರಶಸ್ತಿಯೂ ಪಡೆದಿದ್ದಾರೆ. ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು.
ಕಾಸರಗೋಡು ಸಮೀಪ ಕೂಡ್ಲುವಿನಲ್ಲಿ 1938ರಲ್ಲಿ ಜನಿಸಿದ ಕೆ.ಟಿ ಗಟ್ಟಿ ಅವರು ಹಲವು ಭಾಷೆಗಳಲ್ಲಿ ಪರಿಣತರಾಗಿದ್ದರು.

LEAVE A REPLY

Please enter your comment!
Please enter your name here