ಬೆಳ್ತಂಗಡಿ; ನಿಡ್ಲೆ ಗ್ರಾಮದ ನಿವಾಸಿ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ
ಮೃತ ವ್ಯಕ್ತಿ ನಿಡ್ಲೆ ಗ್ರಾಮದ ಪನ್ನಾಜೆ ಮನೆ ನಿವಾಸಿ ದರ್ಣಪ್ಪ ಗೌಡ ಎಂಬವರೇ ಮೃತ ವ್ಯಕ್ತಿಯಾಗಿದ್ದಾರೆ.
ವಿಪರೀತ ಮದ್ಯಸೇವಿಸುವ ಚಟ ಹೊಂದಿದ್ದ ಇವರು ಪಾರ್ಶ್ವ ವಾಯು ಪೀಡಿತರಾಗಿ ಮನೆಯಲ್ಲಿಯೇ ಇದ್ದರು ಇದರಿಂದ ಮನನೊಂದು ಫೆ. 12 ರಂದು ಇವರು ಮನೆಯಲ್ಲಿ ವಿಷಸೇವಿಸಿದ್ದಾರೆ ಮನೆಯವರು ಇವರನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.