ಮುಂಡಾಜೆಯಲ್ಲಿ ಆಟಿಡೊಂಜಿ ದಿನ; ಭಾಷೆಯಿಂದ ಆಚಾರ ವಿಚಾರ ಸಂಸ್ಕ್ರತಿ ಉಳಿಯಲು ಸಾಧ್ಯ
ಬೆಳ್ತಂಗಡಿ: ತುಳುವರ ಸಂಸ್ಕ್ರತಿ ಆಚಾರ ವಿಚಾರ,ಆಹಾರ ಪದ್ದತಿ ವಿಭಿನ್ನವಾದದ್ದು, ತುಳು ಭಾಷೆ ಉಳಿದರೆ ಮಾತ್ರ ಇದೆಲ್ಲ ಉಳಿಯಲು ಸಾಧ್ಯ ಅದ್ದರಿಂದ ಈ ಕಾಲಘಟ್ಟದಲ್ಲಿ ತುಳು ನಾಡಿನ ತುಳು ಭಾಷೆಯ ಮಹತ್ವವನ್ನು ಯುವ ಜನರಿಗೆ ತಿಳಿಸುವ ಅವಶ್ಯಕತೆ ಹಿರಿಯರಾದ ನಮಗಿದೆ. ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಅಭಿಪ್ರಾಯ ಪಟ್ಟರು. ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ,ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟವತಿಯಿಂದ ಅ 03 ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ...
ಉಜಿರೆಯಲ್ಲಿ ತಡೆಗೋಡೆ ಮೇಲೆ ಏರಿದ ಕಾರು
ಬೆಳ್ತಂಗಡಿ; ಉಜಿರೆ ಪೇಟೆಯ ಮುಖ್ಯರಸ್ತೆಯ ಹೋಟೆಲ್ ಒಂದರ ಮುಂಭಾಗ ಕಾರೊಂದು ತಡೆಗೋಡೆ ದಾಟಿ ಬಂದ ಪ್ರಸಂಗ ಭಾನುವಾರ ನಡೆದಿದೆ.ಕಾರು ಅದೃಷ್ಟವಶಾತ್ ತಡೆಗೋಡೆಯಲ್ಲಿ ಸಿಲುಕಿಕೊಂಡ ಕಾರಣಕ್ಕೆ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆಗೆ ಧಕ್ಕೆಯುಂಟು ಮಾಡುವ ಸಂದೇಶ; ಪ್ರಕರಣ ದಾಖಲು
ಬೆಳ್ತಂಗಡಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದ ತೆಗೆ ಧಕ್ಕೆಯಾಗುವ ವಿಭಿನ್ನ ಕೊಮುಗಳ ನಡುವೆ ವೈಷಮ್ಯ ಸೃಷ್ಟಿಸುವ ಸಂದೇಶ ಹಾಕಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ನಿವಾಸಿ ಪುತ್ತುಮೋನು ಎಂಬವರು ಈ ಬಗ್ಗೆ ದೂರು ನೀಡಿದ್ದು ಫೇಸ್ ಬುಕ್ ನ ಕುಲುಮೆ ಎಂಬ ಗ್ರೂಪ್ ನಲ್ಲಿ ಅಯಿಶು ಅಯುಶಾ (AyshuAysha) ಎಂಬ ಖಾತೆಯಿಂದ ವಿಭಿನ್ನ ಕೋಮುಗಳ ನಡುವೆ ವೈಶಮ್ಯ ಉಂಟುಮಾಡುವ ಸುಳ್ಳು ವದಂತಿಗಳಿರುವ ವರದಿಯನ್ನು ಪ್ರಸಾರ ಮಾಡಿದ್ದ ಬಗ್ಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ
ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ಮಹಾಸಭೆಯು ಜಮೀಯತುಲ್ ಫಲಾಹ್ ಸಭಾ ಭವನದಲ್ಲಿ ಬಿ. ಶೇಕುಂಞ್ಞ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಪ್ರಧಾನ ಕಾರ್ಯದರ್ಶಿ ಗಳಾದ ಆಲಿಯಬ್ಬಾ ಪುಲಾಬೆ ವಾರ್ಷಿಕ ವರದಿ ಮಂದಿಸಿದರು. ನಂತರ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಜಿಲ್ಲಾ ವೀಕ್ಷಕರಾದ ಎಮ್.ಎಚ್. ಇಕ್ಬಾಲ್ ರವರ ನೇತೃತ್ವದಲ್ಲಿ ನೂತನ ಸಮಿತಿಯ ನ್ನು ರಚಿಸಲಾಯಿತು. 2025-26ನೇ ಸಾಲಿನ ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ, ಉಪಾಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಖಾಸಿಂ ಪದ್ಮುಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಉಮರ್...
ಕಾಶೀಪಟ್ಣ ಪಂಜಲಗುಡ್ಡೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ಪ್ರಕರಣ ದಾಖಲು
ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಂಜಲಗುಡ್ಡೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕಾ ಕೇಂದ್ರಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಪತ್ತೆ ಹಚ್ಚಿದ್ದು ಶೇಖರಿಸಿಡಲಾಗಿದ್ದ ಕಲ್ಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ರಮೇಶ್ ಬೋವಿ ಎಂಬಾತನು ಇಲ್ಲಿನಪಂಜಲಗುಡ್ಡೆ ಎಂಬಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ವೇಣೂರು ಪೊಲೀಸರು ಜು31ರಂದು ಇಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ. ಸ್ಥಳದಲ್ಲಿ ರಮೇಶ್ ಬೋವಿ ಎಂಬಾತನು ಗುಡ್ಡೆ ಜಮೀನಿನಲ್ಲಿ ಯಾವುದೋ ಸ್ಪೋಟಕ ವಸ್ತುವನ್ನು ಉಪಯೋಗಿಸಿ...
9ನೆಯ ಸ್ಥಳದಲ್ಲಿಯು ಸಿಗದ ಅವಶೇಷಗಳು
ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರ ತೋರಿಸಿದ 9ನೆಯ ಸ್ಥಳದಲ್ಲಿ ಅಗೆಯುವ ಕಾರ್ಯವನ್ನು ನಡೆಸಲಾಗಿದ್ದು ಈ ಸ್ಥಳದಲ್ಲಿ ಯಾವುದೇ ಅವಶೇಷಗಳು ಲಭಿಸಿಲ್ಲ ಎಂದು ತಿಳಿದುವಬಂದಿದೆ. ಐದನೆ ದಿನದ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದೆ. ಇಂದು ಒಂದಕ್ಕಿತ ಹೆಚ್ಚು ಜಾಗಗಳನ್ನು ಅಗೆಯುವ ಸಿದ್ದತೆಯೊಂದಿಗೆ ತಂಡ ಆಗಮಿಸಿತ್ತು. ಒಂಬತ್ತರ ಕಾರ್ಯಾಚರಣೆ ಪೂರ್ಣ ಗೊಂಡಿದ್ದು ಮಧ್ಯಾಹ್ನದ ಬಳಿಕ ಹತ್ತನೆಯ ಸ್ಥಳದಲ್ಲಿ ಅಗೆಯುವ ಕಾರ್ಯ ನಡೆಯಲಿದೆ
ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆಯಾಗುವಂತಹ ಸಂದೇಶ ಪ್ರಸಾರ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ:ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆಯಾಗುವಂತಹ ಸಂದೇಶ ಪ್ರಸಾರದ ವ್ಯಕ್ತಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಪ್ರಕರಣದ ಆರೋಪಿತ ರಕ್ಷಿತ್ ಶೆಟ್ಟಿ ಎಂಬಾತನು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಧರ್ಮಧರ್ಮಗಳ ನಡುವೆ ವೈಮನಸ್ಯ ಉಂಟಾಗುವಂತೆ ಹಾಗೂ ಭೀತಿಯನ್ನು ಹುಟ್ಟಿಸುವಂತಹ ಸಂದೇಶವನ್ನು ಹಾಕಿದ್ದು, ಸದರಿ ಮಾಹಿತಿ ದಿನಾಂಕ:31-07-2025 ರಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿದುಬಂದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 69/2025, ಕಲಂ:353(1)(ಬಿ), 353(2) ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುತ್ತಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ
ಮೃತದೇಹ ಹೂತು ಹಾಕಿದ ಪ್ರಕರಣ; ಗ್ರಾ.ಪಂ ನಿಂದ ದಾಖಲೆಪಡೆದ ಎಸ್.ಐ.ಟಿ ತಂಡ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಆಗಸ್ಟ್1 ರಂದು ಸಂಜೆ ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಆಗಮಿಸಿ 1995 ರಿಂದ 2014 ರ ವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಎಂಟನೆ ಸ್ಥಳದಲ್ಲಿಯೂ ಸಿಗದ ಅವಶೇಷಗಳು
ಬೆಳ್ತಂಗಡಿ; ಶುಕ್ರವಾರ ನೇತ್ರಾವತಿ ಸ್ನಾನಘಟ್ಟದಲ್ಲಿ ಅಗೆದ ಎರಡನೆಯ ಸ್ಥಳದಲ್ಲಿಯೂ ಯಾವುದೆ ಅವಶೇಷಗಳು ಪತ್ತೆಯಾಗಿರುವುದಿಲ್ಲ ಎಂದು ತಿಳಿದು ಬಂದಿದೆ.ಸುಮಾರು ಎರಡು ಗಂಟೆಗಳ ಕಾಲ ಇಲ್ಲಿ ಕಾರ್ಯಾಚರಣೆ ನಡೆಅಇ ಹುಡುಕಿದರೂ ಯಾವುದೆ ಅವಶೇಷಗಳು ಕಂಡುಬರಲಿಲ್ಲ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ
ಏಳನೆ ಸ್ಥಳದಲ್ಲಿ ಲಭಿಸದ ಕಳೆಬರ; ಎಂಟನೆ ಸ್ಥಳ ಅಗೆಯಲು ಸಿದ್ದತೆ
ಬೆಳ್ತಂಗಡಿ; ಸಾಕ್ಷಿ ದೂರುದಾರ ಗುರುತಿಸಿದ ಏಳನೆಯ ಸ್ಥಳದಲ್ಲಿ ಯಾವುದೇ ಕಳೆಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ನದಿಬದಿಯಲ್ಲಿಯೇ ಇದ್ದ ಏಳನೆ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಇಟ್ಟುಕೊಂಡಿದ್ದಾರೆ.ಆದರೆ ಅಗೆಯವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ













