ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ಅರ್ಜಿ ಮನ್ನಿಸಲು ನಿರಾಕರಣೆ, ಮಧ್ಯಂತರ ವರದಿ ತಟಸ್ಥಗೊಳಿಸಿದ ಬೆಳ್ತಂಗಡಿ ನ್ಯಾಯಾಲಯ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ದ ಕ್ರಮ ಕೈಗೊಳ್ಳಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಾಲಯ ಈಗ ಎಸ್.ಐ.ಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದ್ದು ಪೂರ್ಣ ವರದಿಯನ್ನು ಎಸ್.ಐ.ಟಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಕೈಗೆತ್ತಿಗೊಳ್ಳುವುದಾಗಿ ತಿಳಿಸಿದೆ. ಉಳಿದ ವಿಚಾರಗಳ ಬಗ್ಗೆ ಜ‌ 23 ರಕ್ಕೆ ವಿಚಾರಣೆಯನ್ನು ಮುಂದೂಡಿ ಜ3 ರಂದು ಆದೇಶ ಹೊರಡಿಸಿದೆ.ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ ಎಸ್.ಐ.ಟಿ ಮಹೇಶ್ ಶೆಟ್ಟಿ ಸೇರಿದಂತೆ ಆರು ಮಂದಿಯ ವಿರುದ್ದ ಕ್ರಮ ಕೈಗೊಳ್ಳಲು ಅನುಮತಿ...

ಉಜಿರೆ ವಿಜಯ ಗೋಪುರ ನಿರ್ಮಾಣಕ್ಕೆ ಎಕ್ಸೆಲ್ ಕಾಲೇಜಿನ ಅಧ್ಯಜ್ಷ ಸುಮಂತ್ ಕುಮಾರ್ ಅವರಿಂದ ದೇಣಿಗೆ ಹಸ್ತಾಂತರ

0

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ನಿರ್ಮಾಣ ಸಮಿತಿಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ಅವರು ಜ.3 ರಂದು ಸಂಜೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಶರತ್ ಕೃಷ್ಣ ಪಟುವೆಟ್ನಾಯ ಅವರಿಗೆ ಮೂರು ಲಕ್ಷ ರೂಪಾಯಿ ದೇಣಿಗೆಯನ್ನು ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವತಿಯಿಂದ ಸುಮಂತ್ ಜೈನ್ ಅವರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಜ.5 ರಂದು ಬೆಳ್ತಂಗಡಿಗೆ

0

ಬೆಳ್ತಂಗಡಿ;  ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ ರವರು ಜನವರಿ 5 ರಿಂದ 8 ರವರೆಗೆ ದ.ಕ ಜಿಲ್ಲಾ ಪ್ರವಾಸ ಕೈಗೊಂಡಿದ್ದು , ಬೆಳ್ತಂಗಡಿ ತಾಲೂಕಿಗೆ ಜನವರಿ 6 ರಂದು ಆಗಮಿಸಲಿದ್ದಾರೆ. ಜನವರಿ 5 ರಂದು ರಾತ್ರಿ ಧರ್ಮಸ್ಥಳಕ್ಕೆ ಆಗಮಿಸಲಿರುವ ಅವರು ಜನವರಿ 6 ರಂದು ಬೆಳಗ್ಗೆ 10 ಘಂಟೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಮಲೆಕುಡಿಯ ಸಮುದಾಯದ ಕಾಲನಿಗೆ ಭೇಟಿ ನೀಡಿ ಅಲ್ಲಿ ಜನರ ಕುಂದುಕೊರತೆಗಳನ್ನು...

ಮಾರ್ಚ್ 1 ರಿಂದ 9ರವರೆಗೆ ನಾರಾವಿ  ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಜರಾಯಿ ಸಚಿವರ ಭೇಟಿಯಾದ ಆಳಿತ ಸಮಿತಿ

0

ಬೆಳ್ತಂಗಡಿ. ತಾಲೂಕಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾರ್ಚ್ 1ರಿಂದ 9ರವರೆಗೆ ಅದ್ದೂರಿಯಾಗಿ ನಡೆಯಲಿದ್ದು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ರವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ವಿನಯ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಗದೀಶ ಹೆಗಡೆ, ಲಕ್ಷ್ಮಣ್ ಬಂಗೇರ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ...

ಧರ್ಮಸ್ಥಳ ಪ್ರಕರಣ  ಹಿರಿಯ ನ್ಯಾಯವಾದಿ ದೊರೆ ರಾಜು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈ ಕೋರ್ಟ್ ನ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ಶನಿವಾರ ಹಾಜರಾಗಲಿದ್ದಾರೆ.ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ 39/25 ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ದೊರೆ ರಾಜು ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದಾರೆ.ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸದ್ದು ಆವರದಿಯಲ್ಲಿ ‌ಸೌಜನ್ಯ ಪರ‌ಹೋರಾಟಗಾರರಾದ ಮಹೇಶ್ ಶೆಟ್ಟಿ ತರೋಡಿ ಹಾಗೂ ಇತರರನ್ನು ಆರೋಪಿಗಳಾಗಿಸಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದು ಇದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ...

ಗಾಂಜಾ ಮಾರಾಟ ಆರೋಪಿಯ ಬಂಧನ

0

ಪುತ್ತೂರು; ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್‌ ಎಂಬಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿರುವುದಾಗಿ‌ ಮಾಹಿತಿ‌ ಬಂದ ಮೇರೆಗೆ, ಪುತ್ತೂರು ನಗರ ಠಾಣಾ ಪಿ.ಎಸ್‌.ಐ ಜನಾರ್ಧನ ಕೆ.ಎಂ ರವರು ಸಿಬ್ವಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ, ಆತನನ್ನು ತಡೆದು ವಿಚಾರಿಸಿದಾಗ, ಆತನು ಪುತ್ತೂರು ಕಸಬಾ ಗ್ರಾಮ ನಿವಾಸಿ ಮಹಮ್ಮದ್‌ ತೌಸೀಫ್‌ (36)ಎಂಬುದಾಗಿ ತಿಳಿಸಿದ್ದು, ತನ್ನ ಬಳಿ ನಿಷೇಧಿತ ಗಾಂಜಾ ಇರುವುದಾಗಿ ಒಪ್ಪಿಕೊಂಡಿರುತ್ತಾನೆ. ತಪಾಸಣೆ ನಡೆಸಿದಾಗ 400 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ವಶಕ್ಕೆ ಪಡೆದು ಈ ಬಗ್ಗೆ ಪುತ್ತೂರು ನಗರ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್‌ಗಳ ವಿತರಣೆ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಾಲಾಕೊಠಡಿ, ಆಟದಮೈದಾನ, ಕುಡಿಯುವನೀರು, ಶೌಚಾಲಯ, ರಂಗಮಂದಿರ, ಬೋಧನಾಸಾಮಾಗ್ರಿಗಳ ವಿತರಣೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರೋತ್ಸಾಹ ನೀಡಲಾಗುತ್ತದೆ  ಇದಕ್ಕಾಗಿ ಈ ವರೆಗೆ 47.69 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್‌ಗಳ ವಿತರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ 1074...

ಬೆಳ್ತಂಗಡಿ : ಅಕ್ರಮ ಕಟ್ಟಡಗಳ ವಿರುದ್ದ ಕ್ರಮ ಕೈಗೊಳ್ಳದ ಆರೋಪ; ಲಾಯಿಲ ಪಿಡಿಓ ಶ್ರೀನಿವಾಸ್ ವರ್ಗಾವಣೆ

0

ಬೆಳ್ತಂಗಡಿ : ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜಿನಿಕರಿಂದ ಹಾಗೂ ಗ್ರಾ.ಪಂ ಸದಸ್ಯರುಗಳಿಂದ ಬಂದ ಆರೋಪಗಳ ಹಿನ್ನಲೆಯಲ್ಲಿ ಸಭೆಯಲ್ಲಿ ಶಾಸಕರು ನೀಡಿದ ಸೂಚನೆಯಂತೆ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀನಿವಾಸ್ ಡಿ.ಪಿ ಅವರನ್ನು ಬೆಳ್ತಂಗಡಿ ತಾ.ಪಂ  ಕಾರ್ಯನಿರ್ವಾಹಣಾಧಿಕಾರಿ  ಭವಾನಿ ಶಂಕರ್ ಅವರು ಡಿ.30 ರಂದು ವರ್ಗಾವಣೆ ಮಾಡಿದ್ದಾರೆ. ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಮಯಗಳಿಂದ ಅಕ್ರಮ ಕಟ್ಟಡಗಳು ಯಾವುದೇ ಗ್ರಾಮ ಪಂಚಾಯತ್ ಅನುಮತಿ...

ಜ.3,4 ನಲಿಕೆ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ

0

ಬೆಳ್ತಂಗಡಿ: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ ಮಾರಿಗುಡಿ ಫ್ರೆಂಡ್ಸ್ ಟ್ರೋಫಿ - 2026 ಜ.3 ಹಾಗೂ ಜ.4ರಂದು ತಾಲೂಕು ಕ್ರೀಡಾಂಗಣ ಬೆಳ್ತಂಗಡಿಯಲ್ಲಿ ಜರುಗಲಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ ಹೇಳಿದರು.ಅವರು ಜ.1ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.3ರಂದು ಸಂಜೆ ಗಂಟೆ 7.00ಕ್ಕೆ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಶಶಿ ಬಂಗಾಡಿ ದೈವ ನರ್ತಕರು...

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ;  ಓಡಿಲ್ನಾಳ ಗ್ರಾಮದ ಕಟ್ಟದ ಬೈಲ್ ನಿವಾಸಿಮಂಜುನಾಥ ನಾಯಕ್ (42ವ) ಅವರು ತಮ್ಮ ಮನೆಯ ಕೊಠಡಿಯ ಒಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದ್ದು ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ‌ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲಮೃತರು ತಂದೆ ,ತಾಯಿ, ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.