ಬೆಳಾಲು;”ಪರೀಕ್ಷಾ ಸಿದ್ಧತೆ ಕಾರ್ಯಾಗಾರ”
ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ "ಪೋಷಕ- ವಿದ್ಯಾರ್ಥಿ ಸಂವಾದ" ಕಾರ್ಯಕ್ರಮವು ಡಿ. 30ರಂದು ನಡೆಯಿತು. ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಏನು? ಯಾಕೆ? ಹೇಗೆ? ಎಂಬ ವಿಷಯದಲ್ಲಿ ಪರೀಕ್ಷಾ ಸಿದ್ಧತೆಯ ಕುರಿತು ಒಂದು ದಿನದ ತರಬೇತಿ ಕಾರ್ಯವನ್ನು ಕಾರ್ಯಗಾರವನ್ನು ನಡೆಸಲಾಯಿತು.ವಿದ್ಯಾರ್ಥಿಗಳ ಪೋಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರ ಎಂಬ ವಿಷಯದಲ್ಲಿ ತರಬೇತಿಯನ್ನು ನೀಡಲಾಯಿತು.ಈ ತರಬೇತಿಯನ್ನು ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ನಿವೃತ್ತ...
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಗೆಅಬ್ಬೋನು ಮದ್ದಡ್ಕ ನೇಮಕ
ಬೆಳ್ತಂಗಡಿ: ಸುಲ್ತಾನುಲ್ ಉಲಮ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಎ.ಪಿ ಉಸ್ತಾದ್ ನಿರ್ದೇಶನ ಪ್ರಕಾರ ಪುನರ್ಸಂಘಟಿಸಲಾದ ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಸಮಿತಿಗೆ, ಜಂ ಇಯ್ಯತುಲ್ ಉಲಮಾ ನಿರ್ದೇಶನ ಪ್ರಕಾರ ಕೆಲವು ಸದಸ್ಯರನ್ನು ಸೇರ್ಪಡೆ ಗೊಳಿಸಲಾಗಿದ್ದು ಅದರಲ್ಲಿ ಬೆಳ್ತಂಗಡಿ KMJ ಝೋನ್ ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ ಇವರು ರಾಜ್ಯ ಸಮಿತಿಗೆ ನೇಮಕಗೊಂಡಿರುತ್ತಾರೆ.
ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳವಿಗೆ ಯತ್ನ ಅರ್ಚಕ ಹಾಗೂ ಪತ್ನಿಯ ಬಂಧನ
ಪುತ್ತೂರು; ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ದರೋಡೆಗೆ ಯತ್ನಿಸಿ, ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಆರ್ಚಕ ಹಾಗೂ ಆತನಪತ್ನಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳು ಕಾರ್ತಿಕ್ ರಾವ್(31) ಹಾಗೂ ಅವರ ಪತ್ನಿ ಸ್ವಾತಿ ರಾವ್ ಎಂಬವ ರಾಗಿದ್ದಾರೆಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ(84) ಅವರು ನೀಡಿದ ದೂರಿನಂತೆ ಡಿ.17ರ ಮಧ್ಯರಾತ್ರಿ ಯಾರೋ ಇಬ್ಬರು ಅಪರಿಚಿತರು ಹೆಲೈಟ್ ಧರಿಸಿಕೊಂಡು ಮುಖಚಹರೆಯನ್ನು ಮರೆಮಾಚಿ, ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು...
ಧರ್ಮಸ್ಥಳ ಅದ್ಬುತ ಅಲಂಕಾರದಿಂದ ಕಣ್ಮನ ಸೆಳೆಯುತ್ತಿರುವ ದೇವಸ್ಥಾನ
ಧರ್ಮಸ್ಥಳ: ಹೊಸವರ್ಷಕ್ಕೆ ಬೆಂಗಳೂರಿನ ಭಕ್ತರಾದ ಗೋಪಾಲ ರಾವ್ ಮತ್ತು ಆನಂದ ರಾವ್ ಬಳಗದವರು ಧರ್ಮಸ್ಥಳದಲ್ಲಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಬೀಡು (ಹೆಗ್ಗಡೆಯವರ ನಿವಾಸ) ಹಾಗೂ ಕಟ್ಟಡಗಳನ್ನು ವಿವಿಧ ಜಾತಿಯ ಹೂಗಳನ್ನು ಮತ್ತು ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಿದ್ದಾರೆ. ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಕೆಂಪು ಸೇವಂತಿಗೆ, ಗುಲಾಬಿ ಬಟನ್, ರೋಸ್‌ಪೆಟಲ್ಸ್, ಸುಗಂಧರಾಜ ಮೊದಲಾದ ಹೂವುಗಳು ಹಾಗೂ ಸೇಬು, ಮುಸುಂಬಿ ಮತ್ತು ಕಿತ್ತಳೆ ಮೊದಲಾದ ಹಣ್ಣುಗಳು, ವಿವಿಧ ಜಾತಿಯ ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಲ್ಲಿ ಅಲಂಕಾರ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ೧೫೦ ಮಂದಿ ಸ್ವಯಂಸೇವಕರಾಗಿ...
ನೆರಿಯ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು
ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಡಿ 31 ರಂದು ಜರಗಿದೆ.ನೆರಿಯ ಗ್ರಾಮದ ಗಂಡಿ ಬಾಗಿಲು ನಿವಾಸಿ ಜಾನ್ ಪಿ.ಜೆ.(52)ಮೃತಪಟ್ಟವರು.ಅವರು ಡಿ.25ರಂದು ಗಂಡಿಬಾಗಿಲು-ಅಂಬಟೆಮಲೆ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಕೋಮಾ ಅವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ,ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.ಕೃಷಿಕರಾಗಿದ್ದ ಅವರಿಗೆ ಪತ್ನಿ,ಪುತ್ರ ಹಾಗೂ...
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಬೆಳ್ತಂಗಡಿ ಬಿಷಪ್ ಜೇಮ್ಸ್ ಪಟ್ಟೇರಿಲ್
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಅ ವಂ ಜೇಮ್ಸ್ ಪಟ್ಟೇರಿಲ್ ಅವರು ನಾಡಿನ ಜನತೆಗೆ ಹೊಸ ವರ್ಷ ಶಾಂತಿ ನೆಮ್ಮದಿಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ. ಅವರು ತಮ್ಮ ಹೊಸ ವರ್ಷದ ಸಂದೇಶದಲ್ಲಿ "ನೀವಿರುವಲ್ಲಿಯೇ ಶ್ರೇಷ್ಠವಾದುದನ್ನು ಸಾಧಿಸಲು ಮತ್ತು ಪವಿತ್ರತೆಯನ್ನು ಪಡೆಯಲು ಹಂಬಲಿಸಿ. ಸಾಮಾನ್ಯವಾದುದಕ್ಕೆ ಎಂದಿಗೂ ಸೀಮಿತರಾಗಬೇಡಿ." ಪೋಪ್ ಲಿಯೋ ಅವರು ಯುವಜನತೆಗೆ ನೀಡಿದ ಈ ಕರೆ ಕೇವಲ ವೈಯಕ್ತಿಕ ಸಾಧನೆಗಷ್ಟೇ ಅಲ್ಲ, ಅದು ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಜವಾಬ್ದಾರಿಯೂ ಹೌದು. ಈ ಹೊಸ ವರ್ಷದಲ್ಲಿ ನಮ್ಮ ಪ್ರಯತ್ನವು ಅಸಾಧಾರಣವಾದುದರ ಕಡೆಗಿರಲಿ. ಇಂದು ಪ್ರಪಂಚವು ಅಶಾಂತಿ ಮತ್ತು ಶಸ್ತ್ರಾಸ್ತ್ರಗಳ...
ಬೆಳ್ತಂಗಡಿ: ಬೆಂಗಳೂರು ಫಕೀರ್ ಲೇಔಟ್ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಬುಲ್ಡೋಜರ್ ರಾಜಕೀಯ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಬೆಳ್ತಂಗಡಿ (ಡಿ-30): ಬೆಂಗಳೂರು ಫಕೀರ್ ಲೇಔಟ್ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಬುಲ್ಡೋಜರ್ ರಾಜಕೀಯ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಡಿಸೆಂಬರ್ 20 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಡೆಸಿದ ಕ್ರೂರ ಮತ್ತು ಅಮಾನವೀಯ ವಿಧ್ವಂಸಕ ತೀವ್ರ ಖಂಡನೀಯ ಪ್ರತಿಭಟನೆ ಉದ್ದೇಶಿಸಿ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್...
ಶಿಶಿಲ ಸೇತುವೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ದಾಖಲೆ ಬಿಡುಗಡೆ ಮಾಡಿದ ರಕ್ಷಿತ್ ಶಿವರಾಂ
ಬೆಳ್ತಂಗಡಿ; ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಸಮೀಪ ಸೇತುವೆ ನಿರ್ಮಾಣಕ್ಕೆ ರೂ 2.75 ಕೋಟಿ ಅನುದಾನ ಮಂಜೂರಾಗಿರುವ ಬಗ್ಗೆ ದಾಖಲೆಗಳನ್ನು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬಿಡುಗಡೆ ಮಾಡಿದ್ದಾರೆ.ಶಿಶಿಲದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಸೇತುವೆಗೆ ಯಾವುದೇ ಅನುದಾನ ಮಂಜೂರಾಗಿರುವ ಬಗ್ಗೆ ಮಾಹಿತಿಯಿಲ್ಲ ಇಂದಿನ ವರೆಗೆ ಯಾವುದೇ ಆದೇಶವಾಗಿಲ್ಲ ಎಂಬ ಹೇಳಿಕೆ ನೀಡಿದ ಬೆನ್ನಲ್ಲಿಯೇ ರಕ್ಷಿತ್ ಶಿವರಾಂ ಅವರು ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.ಡಿ.29 ರಂದು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ...
ಬೆಳಾಲು; ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ
ಬೆಳ್ತಂಗಡಿ: ನಾಪತ್ತೆಯಾಗಿದ್ದ ಬೆಳಾಲಿನ ಪುರುಷರಬೆಟ್ಟು ನಿವಾಸಿ ಯುವಕ ರಾಜೇಶ್ ಪಿ. (30ವ) ರವರ ಶವ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಡಿ.30 ರಂದು ನಡೆದಿದೆ.ಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಹಿಂದಿರುಗದೆ ನಾಪತ್ತೆಯಾಗಿದ್ದ ರಾಜೇಶ್ ಪಿ ರವರ ಪತ್ತೆಗಾಗಿ ಅವರ ಮನೆಯವರು ಹಾಗೂ ಸ್ಥಳೀಯವರು ಹುಡುಕಾಟ ನಡೆಸಿದ್ದರು ಆದರೂ ಪತ್ತೆಯಾಗಿಲ್ಲ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ನಂತರ ತೀವ್ರ ಹುಡುಕಾಡಿದಾಗ ಇಂದು ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಧರ್ಮಸ್ಥಳ ಪೊಲೀಸರು...
ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನಾವೂರು ಇದರ ಅಧ್ಯಕ್ಷರಾಗಿ ಮಹಮ್ಮದ್ ಅರ್ಷಾದ್,ಕಾರ್ಯದರ್ಶಿಯಾಗಿ ಮಜೀದ್ ಆಯ್ಕೆ
ಬೆಳ್ತಂಗಡಿ; ಯುನೈಟೆಡ್ ಸ್ಪೋರ್ಟ್ಸ್ ಹಾಗು ಚಾರಿಟೇಬಲ್ ಟ್ರಸ್ಟ್ ನಾವೂರುಇದರ ಮಹಾಸಭೆಯು ನಾವೂರಿನಲ್ಲಿ ನಡೆಯಿತುನಾವೂರಿನಲ್ಲಿ ಕ್ರೀಡೆಯ ಜೊತೆ ಹಲವಾರು ಸಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಇಮೇಜ್ ಗ್ರೂಪ್ ನ ಆಡಳಿತ ನಿರ್ದೇಶಕ ಮಹಮ್ಮದ್ ಅರ್ಷದ್ ರವರು ಆಯ್ಕೆಯಾದರು ಪ್ರದಾನ ಕಾರ್ಯದರ್ಶಿಯಾಗಿ ಮಜೀದ್ ನಾವೂರು ಆಯ್ಕೆಯಾದರು ಗೌರವ ಅದ್ಯಕ್ಷರಾಗಿ ಅಶ್ರಪ್ ಎನ್ ಎಚ್ತಂಡದ ನೂತನ ಕಪ್ತಾನನಾಗಿ ಇರ್ಷಾದ್ ಸಿ. ಎಮ್ ಕಾರ್ಯದರ್ಶಿಯಾಗಿ ಇರ್ಫ಼ಾನ್ ಸಿ ಎಮ್ , ಶಶಿದರ ಹಾಗು ಕೊಶಾದಿಕಾರಿಯಾಗಿ ತ್ವಾಹಿರ್ ನಾವೂರು. ಮಾದ್ಯಮ ಪ್ರತಿನಿದಿಯಾಗಿ...















