ಬೆಳ್ತಂಗಡಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪಿಕ್ ಆಪ್ ವಾಹನ ವಶಕ್ಕೆ
ಬೆಳ್ತಂಗಡಿ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ವನದುರ್ಗಾ ದೇವಸ್ಥಾನದ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜ.8 ರಂದು ಸುಮಾರು 9:30 ಕ್ಕೆ KA-21-A-2846 ನಂಬರಿನ ಪಿಕ್ ಆಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ. ಅಕ್ರಮ ಮರಳು ಸಾಗಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕ ಕಲ್ಮಂಜ ನಿವಾಸಿ ಮೋಹನ್ , ಆನಂದ್, ಇಬ್ರಾಹಿಂ ವಿರುದ್ಧ...
ಬೆಳ್ತಂಗಡಿ : ಅಭ್ಯಾಸ್ ಪಿಯು ಕಾಲೇಜಿನ ಅಕ್ರಮ ಕಾಮಗಾರಿ: ಟೇಪ್ ಹಾಕಿ ಎಚ್ಚರಿಕೆ ಬ್ಯಾನರ್ ಹಾಕಿದ ಅಧಿಕಾರಿಗಳು
ಬೆಳ್ತಂಗಡಿ : ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಇರುವ ಕಾರ್ತಿಕೇಯ ಎಂಬವರ ಮಾಲೀಕತ್ವದ 'ಅಭ್ಯಾಸ್ ಪ್ರೀ ಯುನಿವರ್ಸಿಟಿ ಕಾಲೇಜ್' ನಲ್ಲಿ ಯಾವುದೇ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಗಳನ್ನು ಪಡೆಯದೆ ಮೊದಲ ಕಟ್ಟಡಗಳ ಕಾಮಗಾರಿಯನ್ನು ನಡೆಸುತ್ತಿದ್ದ ಬಗ್ಗೆ ಸ್ಥಳೀಯ ವ್ಯಕ್ತಿ ದೂರು ನೀಡಿದ್ದರು. ಈ ಬಗ್ಗೆ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಜ.5 ರಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ಇದರ ಬಳಿಕ ಮತ್ತೆ ಕಾಮಗಾರಿ ಕೆಲಸ ಮುಂದುವರಿಸಿದ್ದರು. ಇದರ ಬೆನ್ನಲ್ಲೇ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಜ.8 ರಂದು...
ಬೆಳ್ತಂಗಡಿ; ಗ್ರಾಮೀಣ ಭಾಗದ ವಿವಿಧೆಡೆ ಕಾಲು ಸಂಕ ನಿರ್ಮಾಣಕ್ಕೆ ರೂ.1 ಕೋಟಿ ಅನುದಾನ ಮಂಜೂರು: ಹರೀಶ್ ಪೂಂಜ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವಂತಹ ಸ್ಥಳಗಳಲ್ಲಿ ಕಾಲುಸಂಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಂತೆ, ಸರಕಾರದಿಂದ ಈ ಬಾರಿಗೆ ತಲಾ ರೂ.25.00 ಲಕ್ಷ ವೆಚ್ಚದಲ್ಲಿ ಒಟ್ಟು ನಾಲ್ಕು ಕಾಮಗಾರಿಗಳು ಅನುಮೋದನೆಗೊಂಡಿರುತ್ತದೆ. ಅನುಮೋದನೆಗೊಂಡ ಕಾಮಗಾರಿಗಳ ವಿವರ:ಮಲವಂತಿಗೆ ಗ್ರಾಮದ ಕುಮೇರು ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯಲ್ಲಿ ಕಾಲುಸಂಕ. ನೆರಿಯ ಗ್ರಾಮದ ಪುಲ್ಲಾಜೆ ಎಂಬಲ್ಲಿ ಕಾಲುಸಂಕ. ಸವಣಾಲು ಗ್ರಾಮದ ಕೋಡಿಮುಗೇರು ಎಂಬಲ್ಲಿ ಕಾಲುಸಂಕ. ಕುಕ್ಕೇಡಿ ಗ್ರಾಮದ ಕಾಜಾಲ ಎಂಬಲ್ಲಿ ಕಾಲುಸಂಕ.ಈ ಎಲ್ಲಾ ಕಾಮಗಾರಿಗಳಿಗೆ...
ಬೆಳ್ತಂಗಡಿ ಕರ್ತವ್ಯದ ವೇಳೆ ವಿದ್ಯುತ್ ಶಕ್ ಹೊಡೆದು ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ರೂ 1ಕೋಟಿ ಪರಿಹಾರ ವಿತರಣೆ
ಬೆಳ್ತಂಗಡಿ: ಕಳೆದ ಕೆಲವು ತಿಂಗಳುಗಳ ಹಿಂದೆ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಕರ್ತವ್ಯ ನಿರ್ವಹಿಸುತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದ ಬೆಳ್ತಂಗಡಿ ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ವಿಜೇಶ್ ಅವರ ಕುಟುಂಬಕ್ಕೆ ಮೆಸ್ಕಾಂ ಇಲಾಖೆಯ ವೈಯಕ್ತಿಕ ಅಪಘಾತದ ವಿಮಾ ಯೋಜನೆಯಡಿ ರೂ 1 ಕೋಟಿ ಮೊತ್ತದ ಚೆಕ್ ನ್ನು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮೃತ ಪವರ್ ಮ್ಯಾನ್ ಅವರ ತಾಯಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು
ಬೆಳ್ತಂಗಡಿ; ಆದಿವಾಸಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ
ಬೆಳ್ತಂಗಡಿ; ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದ್ದು , ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಕಾಲಮಿತಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾದರೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಮಾಡಿದರು. ಅವರು ಮಂಗಳವಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಮಲೆಕುಡಿಯ ಸಮುದಾಯದ ಕಾಲೋನಿಗೆ ಭೇಟಿ ನೀಡಿ , ಅಹವಾಲು ಸ್ವೀಕರಿಸಿ ಮಾತನಾಡಿದರು. ಸರ್ಕಾರ...
ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ ನ ನವೀಕೃತ ಸ್ಮಶಾನ ಉದ್ಘಾಟನೆ, ನೂತನ ಬಿಷಪ್ ಅವರಿಗೆ ಸನ್ಮಾನ
ಬೆಳ್ತಂಗಡಿ; ಧರ್ಮಸ್ಥಳ ಸೈಂಟ್ ಜೋಸೆಫ್ ಫೊರೋನಾ ಚರ್ಚ್ ನ ನವೀಕೃತ ಸ್ಮಶಾನದ ಉದ್ಘಾಟನಾ ಕಾರ್ಯಕ್ರಮ ಡಿ.5 ಸೋಮವಾರ ನಡೆಯಿತು.ಉದ್ಘಾಟನೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ನೆರವೇರಿಸಿ ಮಾತನಾಡಿ ಅತ್ಯುತ್ತಮವಾದ ಸ್ಮಶಾನವನ್ನು ನಿರ್ಮಿಸಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ ಲಾರೆನ್ಸ್ ಅವರು ಮಾತನಾಡಿ ಶುಭ ಹಾರೈಸಿದರು.ಧರ್ಮಸ್ಥಳ ಚರ್ಚ್ ನ ಧರ್ಮಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರುಈ ಸಂದರ್ಭದಲ್ಲಿ ಧರ್ಮಸ್ಥಳ ಸೈಂಟ್ ಜೋಸೆಫ್ ಫೊರೋನಾ ಚರ್ಚಿನ ಪರವಾಗಿ ನೂತನ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ...
ಗಡಿಪಾರು ಆದೇಶದ ವಿರುದ್ದ ಹೈಕೋರ್ಟ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.ಪುತ್ತೂರು ಉಪ ವಿಭಾಗಾಧಿಕಾರಿಗಳು 2025ರ ಡಿಸೆಂಬರ್ 17ರಂದು ಹೊರಡಿಸಿರುವ ಆದೇಶ ರದ್ದುಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸೋಮವಾರ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ಅರ್ಜಿಯು...
ಬೆಳ್ತಂಗಡಿ MDMA ಮಾದಕ ವಸ್ತು ಮಾರಾಟಕ್ಕೆ ಯತ್ನ ಮಾದಕ ವಸ್ತು ಜೊತೆ ಓರ್ವ ಆರೋಪಿ ಬಂಧನ
ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಮಾದಕವಸ್ತು ಎಮ್.ಡಿ.ಎಮ್.ಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಓರ್ವ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ರಸ್ತೆಯಲ್ಲಿ ಜ.3 ರಂದು ಸಂಜೆ 5:45 ಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ರೌಡ್ಸ್ ನಲ್ಲಿರುವಾಗ ಅನುಮಾನಸ್ಪದವಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ KA-19-MG-4669 ನಂಬರಿನ ಐ20 ಕಾರನ್ನು ಪರಿಶೀಲನೆ ಮಾಡಿದಾಗ ಸದ್ರಿ ಕಾರಿನ ಒಳಗಡೆ ಮಾದಕ ವಸ್ತು ಎಮ್.ಡಿ.ಎಮ್.ಎ ಪತ್ತೆಯಾಗಿದೆ. ಕಾರಿನೊಳಗಡೆ ಖಾಲಿ ಸಿಗರೇಟ್ ಪ್ಯಾಕ್...
ಮಲವಂತಿಗೆ ವೀರೇಶ್ವರ ಮರಾಠೆ ನಿಧನ
ಬೆಳ್ತಂಗಡಿ; ಮಲವಂತಿಗೆ ಗ್ರಾಮದ ಕಜಕ್ಕೆ ನಿಸರ್ಗ ಮನೆ ನಿವಾಸಿ ವೀರೇಶ್ವರ ಮರಾಠೆ (68) ಅಲ್ಪಕಾಲದ ಅಸೌಖ್ಯದಿಂದ ಜ.4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ.ಕೃಷಿಕರಾಗಿದ್ದ ಅವರು ತಾಳ ಮದ್ದಳೆ ಅರ್ಥಧಾರಿ ಯಾಗಿ,ಬಂಗಾಡಿ ಸಿಎ ಬ್ಯಾಂಕ್,ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ, ಶಿರಾಡಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ಹಾಗೂ ಕಜಕ್ಕೆ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಯಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು 21 ಕೆ.ಜಿ ಗಾಂಜಾ ವಶಕ್ಕೆ ಇಬ್ಬರ ಬಂಧನ
ಮಂಗಳೂರು: ಗಾಂಜಾ ದಾಸ್ತಾನಿರಿಸಿದ್ದ ಆರೋಪದಲ್ಲಿ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿ, 21 ಕೆಜಿ 450 ಗ್ರಾಂ ಗಾಂಜಾವನ್ನು ಶನಿವಾರ ಚೊಕ್ಕಬೆಟ್ಟು, ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಉಳಾಯಿಬೆಟ್ಟು ಗ್ರಾಮದ ಪ್ರದೀಪ್ ಪೂಜಾರಿ (32), ಬೈಕಂಪಾಡಿ ಚಿತ್ರಾಪುರ ನಿವಾಸಿ ವಸಂತ (42) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಅಂದಾಜು 10,72,500 ರೂ. ಮೌಲ್ಯದ 21.450 ಕೆಜಿ ಗಾಂಜಾ, 7 ಸಾವಿರ ರೂ. ಮೌಲ್ಯದ ಮೂರು ಮೊಬೈಲ್ಫೋನ್ ಗಳು, ಸಾಗಾಟಕ್ಕೆ ಬಳಸಿದ್ದ 3 ಲಕ್ಷ ರೂ. ಮೌಲ್ಯದ ಕಾರು, ಗಾಂಜಾ ತುಂಬಿಸಿಟ್ಟಿದ್ದ ಮೂರು ಸಾವಿರ ರೂ. ಮೌಲ್ಯದ...















