ಕುತ್ಲೂರು ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

0

ಬೆಳ್ತಂಗಡಿ: ಗುರುವಾಯನಕೆರೆ- ನಾರಾವಿ ರಸ್ತೆಯ ಕುತ್ಲೂರು ಶಾಲಾ ಬಳಿ ಬೈಕೊಂದು ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕುತ್ಲೂರು ನಿವಾಸಿ ಚಿತ್ರಾಂಗದನ್(57) ಮೃತಪಟ್ಟವರು. ನ. 24ರಂದು ಬೆಳಗ್ಗೆ 7.30ಕ್ಕೆ ಕುತ್ಲೂರು ಶಾಲಾ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಯೋಗೀಶ್ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಚಿತ್ರಾಂಗದನ್ ಅವರನ್ನು ‌ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಿ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ನ.30 ರಂದು ಮೃತಪಟ್ಟಿದ್ದಾರೆ. ವೇಣೂರು ಪೊಲೀಸ್...

ಬೆಳ್ತಂಗಡಿ : ಸರಕಾರಿ ಬಸ್ -ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

0

ಬೆಳ್ತಂಗಡಿ : ಧರ್ಮಸ್ಥಳ ಕಡೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಬೈಕ್ ಸವಾರ ಪಾರ್ಪಿಕಲ್ಲು ಎಂಬಲ್ಲಿ ಧರ್ಮಸ್ಥಳ ಕಡೆ ಬರುತ್ತಿದ್ದ ಸರಕಾರಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನ.30 ರಂದು ಬೆಳಗ್ಗೆ ನಡೆದಿದೆ. ಬೈಕ್ ಸವಾರ ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೊಡ್ಡಗಣಹಳ್ಳಿ ನಿವಾಸಿ ಪನ್ನಕೇಶವ ಗೌಡ ಎಂಬವರ ಪುತ್ರ ದೀಪಕ್(24) ಎಂದು ತಿಳಿದು ಬಂದಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ‌. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ‌.

ನೆರಿಯ ಜನಸ್ಪಂದನ ಸಭೆ ಸ್ಮಶಾನ ವಿಚಾರ, ಪಿಡಿಒ ಅಧಿಕಾರಿಗಳ ವಿರುದ್ದ ಜನರ‌ ಆಕ್ರೋಶ; ವಾರದೊಳಗೆ ವರದಿ ನೀಡಿ ಶಾಸಕ ಹರೀಶ್ ಪೂಂಜ ಸೂಚನೆ

0

ಬೆಳ್ತಂಗಡಿ: ಗ್ರಾಮದಲ್ಲಿ ಇನ್ನೂ ಕೂಡ ಸಮರ್ಪಕ ಸ್ಮಶಾನ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತಿದ್ದು, ಗ್ರಾಮ ಪಂಚಾಯತ್ ಹಾಗೂ ಅಧಿಕಾರಿಳಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಸ್ಪಂದಿಸುತ್ತಿಲ್ಲ, ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ ಘಟನೆ ನೆರಿಯದಲ್ಲಿ ನಡೆದಿದೆ. ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನೆರಿಯ ಗ್ರಾಮ ಮಟ್ಟದ ಜನಸ್ಪಂದನ ಸಭೆ ನ 29 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಗ್ರಾಮಸ್ಥರು ಸ್ಮಶಾನವಿಲ್ಲದೇ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗುತ್ತಿದೆ.ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಪಂಚಾಯತ್ ಗೆ ಮನವಿ ನೀಡುತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ...

ಉಜಿರೆಯಲ್ಲಿ ರಾಜ್ಯ ರಬ್ಬರ್ ಬೆಳೆಗಾರರ ಸಮಾವೇಶ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬ‌ರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಹಾಗೂ ರಾಜ್ಯದ ರಬ್ಬ‌ರ್ ವ್ಯವಹಾರ ಮಾಡುವ ಸಹಕಾರ ಸಂಘಗಳ ಆಶ್ರಯದಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ ನ 29 ರಂದು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ರಬ್ಬರು ಬೆಳೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ದ.ಕ ಜಿಲ್ಲೆಯ ಕೃಷಿಕರ ಜೊತೆ ನಾವು ನಿಲ್ಲುತ್ತೇವೆ, ರಬ್ಬರ್ ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ...

ಬೆಳ್ತಂಗಡಿ : ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಉದ್ಘಾಟನೆ

0

ಬೆಳ್ತಂಗಡಿ : ಸರಕಾರಿ ಅಂಗನವಾಡಿ ಕೇಂದ್ರ ಆರಂಭವಾಗಿ ರಾಜ್ಯದಲ್ಲಿ 50 ವರ್ಷದ ಸುವರ್ಣ ಮಹೋತ್ಸವ ಆಚರಣೆಯ ನೆನಪಿಗಾಗಿಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಸಿದ್ದರಾಮಯ್ಯ ನವರು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅಂಗನವಾಡಿ ಶಿಕ್ಷಣ ಕಲಿಯುವಾಗಲೇ ಆಂಗ್ಲ ಮಾಧ್ಯಮ ಕಲಿಯಬೇಕೆಂಬ ಆಶಯದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಇರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಎಲ್.ಕೆ.ಜಿ - ಯು.ಕೆ.ಜಿ  ತರಗತಿಗಳನ್ನು ಆರಂಭಿಸಲು ಬೆಂಗಳೂರಿನ ವಿಧಾನ ಸೌಧದಲ್ಲಿ ದಿನಾಂಕ ನ.28 ರಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ನವರು ದೀಪ ಬೆಳಗಿಸಿ ಅಧಿಕೃತವಾಗಿ ಚಾಲನೆ ನೀಡುವ ಅದೇ ಸಮಯದಲ್ಲಿ ...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಪ್ರಕರಣ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

0

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂದ್ರಪ್ರದೇಶ ಮೂಲದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಜು.26 ರಿಂದ ನ.18 ರ ಸಮಯದಲ್ಲಿ ಬಲತ್ಕಾರದಿಂದ ಹಲವು ಭಾರಿ ಅತ್ಯಾಚಾರ ಮಾಡಿ ಎರಡು ತಿಂಗಳ ಗರ್ಭಿಣಿ ಮಾಡಿದ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕಿಯ ಸಂಬಂಧಿ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ‌‌. ವೇಣೂರು ಪೊಲೀಸ್ ಠಾಣೆಯಲ್ಲಿ ನ.25 ರಂದು ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ಅಮ್ಜತ್ ಖಾನ್(18) ವಿರುದ್ಧ ಕಲಂ 64 , BNS -2023 ಮತ್ತು 4,6...

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

0

ಬೆಳ್ತಂಗಡಿ : ಕಡಿಮೆ ದರಕ್ಕೆ ಕಾರು ಕೋಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಬಳಿಕ ಚೆಕ್ ನೀಡಿ ಮೋಸ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ. ಬೆಳ್ತಂಗಡಿಯ ಲಾಯಿಲದ ಪಾದ್ರಿ ಒಬ್ಬರ ಮೂಲಕ 2020 ರಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ಎಂದು ಕೇರಳ ರಾಜ್ಯದ ಕಣ್ಣೂರು ನಿವಾಸಿ ಜಿಜೇಶ್.ಕೆ.ಜೆ(42) ಎಂಬಾತ ಹಲವು ಮಂದಿಯನ್ನು ಸಂಪರ್ಕ ಮಾಡಿಕೊಂಡು ಕಡಿಮೆ ದರದಲ್ಲಿ ಹೊಸ ಅಲ್ಟೋ ಕಾರು ಕೊಡಿಸುವುದಾಗಿ ನಂಬಿಸಿದ್ದರು.ಇದರಲ್ಲಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ಸೆಬಾಸ್ಟಿಯನ್ ಎ.ಎಮ್ (60) ಎಂಬವರ ಕೈಯಿಂದ 1,95,000...

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭೇಟಿ

0

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹಾಗೂ ಇತರರು ಇದ್ದರು.

ಬೆಳ್ತಂಗಡಿ; ಗುರು ಗಾಂಧಿ ಸಂವಾದ  ಶತಮಾನೋತ್ಸವದಾಚರಣೆ ಸಮಾಲೋಚನಾ ಸಭೆ

0

ಬೆಳ್ತಂಗಡಿ;  ಗುರು ಗಾಂಧಿ ಸಂವಾದ ಶತಮಾನದ ಮಹಾಪ್ರಸ್ಥಾನ ಸಂವಾದ ಶತಮಾನೋತ್ಸವದಆಚರಣೆಗಾಗಿ ತಾರೀಕು 03. 12. 25ರಂದು ಮಂಗಳೂರಿನ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕೊಣಾಜೆ ಆವರಣದಲ್ಲಿ ಬೆಳಗ್ಗೆ 9:30 ಗಂಟೆಯಿಂದ ನಡೆಯುವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇಂದು ಬೆಳ್ತಂಗಡಿಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.ಬೆಳ್ತಂಗಡಿ ತಾಲೂಕಿನಿಂದ ಅತಿ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರಾದ  ಜಯವಿಕ್ರಂ ಕಲ್ಲಾಪು ಮನವಿ ಮಾಡಿದರು. ಇದೊಂದು ಐತಿಹಾಸಿಕ ಸಮಾರಂಭ ಪ್ರತಿಯೊಬ್ಬರು ಸಮಾಜದ ಹಬ್ಬವೆಂದು ಪರಿಗಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮಾಜಿ ಅಧ್ಯಕ್ಷರಾದ  ಪೀತಾಂಬರ ಹೇರಾಜೇಯವರು...

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಮುಂದುವರಿಯಲಿ, ಅರ್ಜಿ ದಾರರಿಗೆ ಕಿರುಕುಳ ಬೇಡ ಹೈಕೋರ್ಟ್ ಆದೇಶ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆ ಮುಂದುವರಿಯಲಿ, ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.ನ28 ರಂದು ಎಸ್‌.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗರೀಶ್ ಮಟ್ಟಣ್ಣನವರ್, ಜಯಂತ್ ಟಿ, ವುಠಲ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ನ್ಯಾಯಾಲಯ ಸೂಚಿಸಿದೆ. ಈ ಹಿಂದೆ ನೀಡಿದ್ದ...