Home ಸ್ಥಳೀಯ ಸಮಾಚಾರ ಕೊಕ್ಕಡದಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ: ಯುವ ಚಾಲಕ ಶರತ್ ಕುಮಾರ್ ಅಕಾಲಿಕ ನಿಧನ

ಕೊಕ್ಕಡದಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ: ಯುವ ಚಾಲಕ ಶರತ್ ಕುಮಾರ್ ಅಕಾಲಿಕ ನಿಧನ

25
0

ಬೆಳ್ತಂಗಡಿ; ಕೊಕ್ಕಡ ಸಮೀಪದ ಕೆಂಪಕೋಡಿನ ನಿವಾಸಿ ಶರತ್ ಕುಮಾರ್ ಕೆ (36) ಅವರು ತಮ್ಮ ಆಟೋ ರಿಕ್ಷಾ ಚಾಲನೆಯಲ್ಲೇ ಇದ್ದ ವೇಳೆ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿರುವ ದುರ್ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು( ಜೂ.3) ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರುಪಯಣದಲ್ಲಿ ತಮ್ಮ ಸ್ವಂತ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು.
ಸ್ಥಳೀಯರು ಕೂಡಲೇ ವಿಷಯವನ್ನು ಗಮನಿಸಿ ಶರತ್‌ರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು.
ಮೃತ ಶರತ್ ಕುಮಾರ್ ಅವರು ಕುಟುಂಬದ ಏಕೈಕ ಆಧಾರಸ್ತಂಭರಾಗಿದ್ದರು. ಅವರು ತಂದೆ ರಘುರಾಮ ಮಡಿವಾಳ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here