ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿ ಪುನರಾರಂಭ
ಬೆಳ್ತಂಗಡಿ; ನಗರದಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿ ಇದೀಗ ಪುನರಾರಂಭಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಮರು ಜೀವ ಪಡೆದಿದೆ.2023ರಲ್ಲಿ ಆರಂಭವಾಗಿರುವ ನೂತನ ಬಸ್ ನಿಲ್ದಾಣದ 12 ಕೋಟಿ ರೂ. ಅನುದಾನದ ಕಾಮಗಾರಿಯಲ್ಲಿ ಕಳೆದ ಬೇಸಿಗೆಯಲ್ಲಿ ನೆಲಮಟ್ಟದ ಕೆಲಸಗಳು ನಡೆದಿದ್ದು ಮಳೆ ಆರಂಭವಾಗುತ್ತಿದ್ದಂತೆ ಕಾಮಗಾರಿ ನಿಂತಿತ್ತು.ಮಳೆಗಾಲದಲ್ಲಿ ಇಲ್ಲಿ ಮಣ್ಣು ಕುಸಿದು ಈಗಿರುವ ಬಸ್ ನಿಲ್ದಾಣಕ್ಕೆ ಕೆಸರು ನೀರು ಹರಿದು ಬರುತ್ತಿತ್ತು. ಕಾಮಗಾರಿಗೆ ತಂದು ಹಾಕಿದ್ದ ಕಬ್ಬಿಣ ತುಕ್ಕು ಹಿಡಿಯುತ್ತಿತ್ತು. ಪರಿಸರದಲ್ಲಿ ಗಲೀಜು ಇದ್ದು ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ...
ರಬ್ಬರ್ ಬೆಳೆಗೆ ಬೆಂಬಲ ಬೆಲೆ ನಿಗಧಿಗೆ ಆಗ್ರಹಿಸಿ ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ
ಬೆಳ್ತಂಗಡಿ: ನೈಸರ್ಗಿಕ ರಬ್ಬರ್ ಬೆಳೆಯನ್ನು ನಿಗದಿತ ಕೃಷಿ ಬೆಳೆಗಳ ಪಟ್ಟಿಯಲ್ಲಿ ಸೇರಿಸುವಂತೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಥವಾ ನ್ಯಾಯಸಮ್ಮತ ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ನಿಗದಿಗೊಳಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರಿಗೆ ಪತ್ರವನ್ನು ಬರೆದಿರುವ ಗುಂಡೂರಾವ್, ದ.ಕ. ಜಿಲ್ಲೆಯ ಹಲವಾರು ರೈತರು ರಬ್ಬರ್ ಕೃಷಿಯಲ್ಲಿ ತೊಡಗಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಮಾರುಕಟ್ಟೆಯಲ್ಲಿನ...
ಎಸ್.ಡಿ.ಎಂ ಪ.ಪೂ. ಕಾಲೇಜು : ವಾರ್ಷಿಕ ಕ್ರೀಡಾ ಕೂಟ; ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅಗತ್ಯ : ಡಾ. ಸತೀಶ್ಚಂದ್ರ ಎಸ್
ಉಜಿರೆ :ಸಾಂಪ್ರ ದಾಯಿಕ ಚಟುವಟಿಕೆಗಳು, ದೇಶಿಯ ಕ್ರೀಡೆಗಳು ಇಂದು ಮೂಲ ಗುಂಪಾಗುತ್ತಿವೆ. ಕ್ರೀಡೆಯಲ್ಲಿ ಅನೇಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಿದೆ. ಇದು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಗಳು ಪದಕ ಮತ್ತು ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ಆರೋಗ್ಯಕ್ಕಾಗಿ, ಸದೃಢ ಸಮಾಜಕ್ಕಾಗಿ ಮತ್ತು ಯುವ ಸಮುದಾಯದ ಚೈತನ್ಯಕ್ಕಾಗಿ ಕನಿಷ್ಠ ಸಮಯವನ್ನಾದರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದುಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯ ಪಟ್ಟರು.ಇವರು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ...
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ನ್ಯಾಯಾಲಯದಲ್ಲಿ ಎಸ್.ಐ.ಟಿ ವರದಿಯ ವಿಚಾರಣೆ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ಆರು ಮಂದಿಯ ವಿರುದ್ಧ ವರದಿ ಸಲ್ಲಿಸಿರುವ ವರದಿಯ ಬಗ್ಗೆ ಬೆಳ್ತಂಗಡಿ ನ್ಯಾಯಾಲಯ ವಿಚಾರಣೆ ನಡೆಸಿದ್ದು. ಮುಂದಿನ ಶನಿವಾರಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ನ.20 ಕ್ಕೆ (Perjury Report) u/s 215 ಅಡಿಯಲ್ಲಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್.ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಹೆಚ್ ಅವರ ಮುಂದೆ ...
ಧರ್ಮಸ್ಥಳ ಪ್ರಕರಣ ಜಯಂತ್ ಟಿ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ; ಎಸ್.ಐ.ಟಿ ವರದಿ ನೀಡಲು ಸಮ್ಮತಿ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಪ್ರಾಥಮಿಕ ವರದಿಯನ್ನು ಕೇಳಿ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು ದಾಖಲೆ ನೀಡಲು ಸಮ್ಮತಿಸಿರುವುದಾಗಿ ಜಯಂತ್ ಟಿ ಪರವಾಗಿ ವಾದ ಮಂಡಿಸಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿಗಳು ಮಾಹಿತಿ ನೀಡಿದ್ದಾರೆ.ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಜಯಂತ್ ಟಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಇತರರಿಗೆ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿತ್ತು ಹಾಜರಾಗದಿದ್ದರೆ ಬಂಧಿಸುವುದಾಗಿ ನೋಟೀಸ್ ನೀಡಿದ್ದರು. ಇದಾದ ಬಳಿಕ ಎಸ್.ಐ.ಟಿ ನ್ಯಾಯಾಲಯದ...
ಡಿ.6 ಬಾರ್ಯ, ತೆಕ್ಕಾರು,ಇಳಂತಿಲ, ಬಂದಾರಿನಲ್ಲಿ ಜನಸ್ಪಂದನ ಸಭೆ
ಬೆಳ್ತಂಗಡಿ; ಶಾಸಕರಾದ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಗ್ರಾಮ ಮಟ್ಟದಲ್ಲಿ ನಡೆಸುವ ಜನ ಸ್ಪಂದನ ಸಭೆಯನ್ನು ಡಿ.6 ಶನಿವಾರ ದಂದು ನಾಲ್ಕು ಗ್ರಾಮ ಪಂಚಾಯತುಗಳಲ್ಲಿ ನಡೆಯಲಿದೆ. ಜನರ ಬಳಿಗೆ-ತಾಲೂಕು ಆಡಳಿತ ಎಂಬ ಕಲ್ಪನೆಯೊಂದಿಗೆ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಡಿ 6ರಂದು ಪೂರ್ವಾಹ್ನ - 9.30ಕ್ಕೆ ಗ್ರಾಮ ಪಂಚಾಯತ್ ಬಾರ್ಯ ದಲ್ಲಿಪೂರ್ವಾಹ್ನ - 11.00ಕ್ಕೆ ಗ್ರಾಮ ಪಂಚಾಯತ್ ತೆಕ್ಕಾರಿನಲ್ಲಿ ಅಪರಾಹ್ನ 2 ಗಂಟೆಗೆ ಗ್ರಾಮ ಪಂಚಾಯತ್ ಇಳಂತಿಲ ದಲ್ಲಿ ಹಾಗುಸಂಜೆ 4 ಕ್ಕೆ...
ಬೆಳ್ತಂಗಡಿಗೆ ಮಂಜೂರಾಗಿರುವ ಪೊಲೀಸ್ ಉಪವಿಭಾಗವನ್ನು ರದ್ದುವಪಡಿಸದಂತೆ ಒತ್ತಾಯ
ಬೆಳ್ತಂಗಡಿ; ಬೆಳ್ತಂಗಡಿ ಗೆ ಮಂಜೂರಾಗಿ ಆರಂಭವಾಗಿರುವ ಪೊಲೀಸ್ ಉಪ ವಿಭಾಗವನ್ನು ರದ್ದು ಪಡಿಸುವ ಪ್ರಯತ್ನ ನಡೆಯುತ್ತಿದೆ ಬೆಳ್ತಂಗಡಿ ತಾಲೂಕಿಗೆ ಇದು ಅತ್ಯಂತ ಅಗತ್ಯವಾಗಿದ್ದು ಯಾವುದೇ ಕಾರಣಕ್ಕೂ ಉಪವಿಭಾಗವನ್ನು ರದ್ದು ಪಡಿಸಬಾರದು ಎಂದು ದಲಿತ ಮುಖಂಡ ಶೇಖರ ಲಾಯಿಲ ಹಾಗು ಇತರರು ಒತ್ತಾಯಿಸಿದರು.ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು. ಶಾಸಕ ಹರೀಶ್ ಪೂಂಜ ಅವರು ಉಪ ವಿಭಾಗ ಬೇಡ ಎಂದು ಅದನ್ನು ರದ್ದುವಮಾಡಬೇಕು...
ಬೆಳ್ತಂಗಡಿ; ಡಿ7 ರಂದು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಕೋಟಿ- ಚೆನ್ನಯ ಕ್ರೀಡಾಕೂಟ
ಬೆಳ್ತಂಗಡಿ:ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ 12ನೇ ವರ್ಷದ ಕೋಟಿ-ಚೆನ್ನಯಕ್ರೀಡಾಕೂಟ ಡಿ.7ರಂದು ರಂದು ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನದ ದಿ.ಕೆ.ವಸಂತ ಬಂಗೇರ ಸಭಾ ವೇದಿಕೆಯಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಹೇಳಿದರು.ಅವರು ಡಿ. 1 ರಂದು ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬೆಳಿಗ್ಗೆ 7ಗಂಟೆಗೆ ಸಂಘದಲ್ಲಿ ಗುರುಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.8ಗಂಟೆಗೆ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ...
ಬೆಳ್ತಂಗಡಿ : ಮರೋಡಿ ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ : ವಯಕ್ತಿಕ ಕಾರಣಗಳಿಂದ ವ್ಯಕ್ತಿಯೊಬ್ಬರು ಮನೆಯ ಕೊಟ್ಟಿಗೆಯ ಪಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕಂಬಳದಡ್ಕ ನಿವಾಸಿ ಅಶೋಕ್(54) ಎಂಬವರು ಯಾವುದೋ ಕಾರಣದಿಂದ ನೊಂದು ನ.30 ರಂದು ಬೆಳಗ್ಗೆ 11:30 ರಿಂದ 2 ಗಂಟೆ ಅವಧಿಯಲ್ಲಿ ಕಂಬಳದಡ್ಕ ಮನೆಯ ಪಕ್ಕದ ಕೊಟ್ಟಿಗೆಯ ಪಕಾಸಿಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ನ.30 ರಂದು ದೂರು ನೀಡಿದ್ದಾರೆ. ಅದರಂತೆ ವೇಣೂರು ಪೊಲೀಸರು ಯುಡಿಆರ್ ಪ್ರಕರಣ...
ಪಡಂಗಡಿ,ಎಲೆಕ್ಟ್ರಿಷಿಯನ್ ವಿಷ ಸೇವಿಸಿ ಆತ್ಮಹತ್ಯೆ
ಬೆಳ್ತಂಗಡಿ: ಪಡಂಗಡಿ ಗ್ರಾಮದ ಕಲ್ಬೊಟ್ಟು ನಿವಾಸಿ ಎಲೆಕ್ಟ್ರಿಷಿಯನ್ ಸುರೇಶ್ ಪೂಜಾರಿ (40 ವರ್ಷ) ಡಿ1ರಂದು ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಎಲೆಕ್ಟ್ರಿಷಿನ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಯಾವ ಕಾರಣಕ್ಕೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯಿಂದ ತಿಳಿದು ಬರಬೇಕಾಗಿದೆ. ಮೃತರು ತಂದೆ,ತಾಯಿ, ಪತ್ನಿ ಎರಡು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.















