ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರಅಭ್ಯಾಸವರ್ಗ

0

ಪಟ್ರಮೆ : ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸವರ್ಗ ಕಾರ್ಯಕ್ರಮ ನ. 04 ರಂದು ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿರುವ ಧರ್ಮಪಾಲ ಅಜ್ರಿ ಹಾಗೂ ಜಿನ್ನಪ್ಪ ಗೌಡರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಸೀತಾರಾಮ್ ಬೆಳಾಲು ಮಂಡನೆ ಮಾಡಿದರು.ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಮಹಾಬಲ ಗೌಡ ನಾಗಂದೋಡಿ ಮಂಡಿಸಿದರು.ವಿಕಸಿತ ಭಾರತದ ಅಮೃತ ಕಾಲದಲ್ಲಿ...

ಬೆಳ್ತಂಗಡಿ : ಅಕ್ರಮ ಗೋಸಾಗಾಟ ಮಾಡಿದವನ ಮನೆ ಜಪ್ತಿ ಮಾಡಿದ ಧರ್ಮಸ್ಥಳ ಪೊಲೀಸರು

0

ಬೆಳ್ತಂಗಡಿ : ಅಕ್ರಮವಾಗಿ ಕಾರಿನಲ್ಲಿ ಗೋಮಾಂಸ ಮಾಡಲು ಮೂರು ದನಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. ಧರ್ಮಸ್ಥಳ ಪೊಲೀಸರು ‌ನ.2 ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್@ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು...

ಬೆಳ್ತಂಗಡಿ ಪೊಲೀಸ್ ಉಪವಿಭಾಗ ಘೋಷಣೆ ಡಿವೈಎಸ್ಪಿಯಾಗಿ ಸಿ.ಕೆ ರೋಹಿನಿ ನೇಮಕ

0

ಬೆಳ್ತಂಗಡಿ : ರಾಜ್ಯ ಸರಕಾರ ಹೊಸದಾಗಿ ಬೆಳ್ತಂಗಡಿ ಪೊಲೀಸ್ ಉಪವಿಭಾಗವನ್ನು ಘೋಷಿಸಿದ್ದು ಬೆಳ್ತಂಗಡಿ ಉಪ ವಿಭಾಗಕ್ಕೆ ಸಿ.ಕರ ರೋಹಿಣಿ ಅವರನ್ನು ಡಿವೈಎಸ್ಪಿ ಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಹೊಸದಾಗಿ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್ಪಿಯಾಗಿರುವ ಸಿ.ಕೆ.ರೋಹಿನಿ ಅವರನ್ನು ನೇಮಕ ಮಾಡಿ ನ.4 ರಂದು ಸರಕಾರ ಆದೇಶ ಹೊರಡಿಸಿದೆ.ಡಿವೈಎಸ್ಪಿ ಸಿ.ಕೆ.ರೋಹಿನಿ 2022 ರ ಬ್ಯಾಚ್ ನಲ್ಲಿ ನೇರ ನೇಮಕವಾದ ಡಿವೈಎಸ್ಪಿಯಾಗಿದ್ದಾರೆ.ಬೆಳ್ತಂಗಡಿ ಉಪ ವಿಭಾಗದ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕಿನ ಐದು ಪೊಲೀಸ್ ಠಾಣೆಗಳು ಬರಲಿದೆ.

ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಪ್ರಭಾಕರ ಭಟ್ ಜಮೀನು ಅರ್ಜಿ ವಿಚಾರಣೆ ಮುಂದೂಡಿಕೆ

0

ಮಂಗಳೂರು : 'ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿ ಕೋಮುಸೌಹಾರ್ದತೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದೂ ಇತ್ಯರ್ಥವಾಗದೆ ಮುಂದೂಡಲ್ಪಟ್ಟಿತು. ಬಿಎನ್‌ಬಿಎಸ್‌ ಸೆಕ್ಷನ್ 338, 339 ಪ್ರಕಾರ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ಪರ ಹಿರಿಯ ವಕೀಲ ಸತೀಶನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸಮಾಯಾವಕಾಶ ಕೇಳಿದರು. ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ...

ಪದ್ಮುಂಜದಲ್ಲಿ ವಾಹನ ತಡೆದು ಹಲ್ಲೆ ಪ್ರಕರಣ-ಶರತ್ ಚೌಟನಿಗೆ ಜೈಲು ಶಿಕ್ಷೆ

0

ಬೆಳ್ತಂಗಡಿ: ಪದ್ಮುಂಜದಲ್ಲಿ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ವಾಹನ ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ಆರೋಪಿ ಶರತ್ ಚೌಟ ಎಂಬಾತನಿಗೆ ಬೆಳ್ತಂಗಡಿ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.ಘಟನೆಯ ವಿವರ:2024ರ ಆಗಸ್ಟ್ 27ರಂದು ರಾತ್ರಿ 7.30ರ ವೇಳೆಗೆ ಸಿದ್ದಿಕ್ ಎಂಬವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿ ಕಡೆಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ರಸ್ತೆ ಬದಿಯಲ್ಲಿ ನಿಂತು ಶರತ್ ಚೌಟ ಫೋನ್ ನಲ್ಲಿ ಮಾತನಾಡುತ್ತಿದ್ದ....

ಕುತ್ಲೂರು ಅನುಮಾನಾಸ್ಪದ ವ್ಯಕ್ತಿ ಚಾಕು ಹಿಡಿದು ಓಡಾಟ : ಸಾರ್ವಜನಿಕರಲ್ಲಿ ಆತಂಕ

0

ಬೆಳ್ತಂಗಡಿ: ತಾಲೂಕಿನ ಕುತ್ಲೂರು ಗ್ರಾಮದ ಶಾಲೆಯ ಬಳಿ ಅನುಮಾನಾಸ್ಪದ ವ್ಯಕ್ತಿ ಕತ್ತಿ ಹಾಗೂ ಚಾಕು ಹಿಡಿದುಕೊಂಡು ಓಡಾಟ ನಡೆಸುತ್ತಿರುವ ಘಟನೆ ನ. 4ರಂದು ಸಂಜೆಯ ವೇಳೆ ನಡೆದಿದೆ. ಈ ವ್ಯಕ್ತಿ ಆರಂಭದಲ್ಲಿ ಕುತ್ಲೂರು ಪೇಟೆಯ ಸಮೀಪ ಕಾಣಿಸಿಕೊಂಡಿದ್ದಾನೆ ಆತನನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ ಆದರೆ ಆವ್ಯಕ್ತಿ ತುಳುವಿನಲ್ಲಿ ಮಾತನಾಡಿದ್ದು ತಾನು ರಬ್ಬರ್ ಟ್ಯಾಪಿಂಗ್ ಬಂದಿರುವುದಾಗಿ ಹೇಳಿದ್ದಾನೆ. ಬಳಿಕ ಈತ ಅಂಗಡಿ ಬಳಿಯಲ್ಲಿ ಈತ ನಿಂತಿರುವುದನ್ನು ನೋಡಿದಾಗ ಆತ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿರುವುದು ನೋಡಿ ಇದನ್ನು ಪ್ರಶ್ನಿಸಿದಾಗ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ.ಬಳಿಕ ಮನೆಯೊಂದರ ಹಿಂಭಾಗದಲ್ಲಿ...

ಶಿಬಾಜೆ ನಾರಾಯಣಗುರು ಮಂದಿರಕ್ಕೆ ರಕ್ಷಿತ್ ಶಿವರಾಂ ರವರಿಂದ ಬಾಗಿಲು ಹಸ್ತಾಂತರ

0

ಬೆಳ್ತಂಗಡಿ. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಶಿಬಾಜೆ ಶಾಖೆಯ ವತಿಯಿಂದ ನಿರ್ಮಾಣವಾಗುತ್ತಿರುವ ನೂತನ ನಾರಾಯಣ ಗುರು ಮಂದಿರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಮರದ ಬಾಗಿಲನ್ನು ಹಸ್ತಾಂತರ ಮಾಡಿದರು.ಈಗಾಗಲೇ ಈ ಮಂದಿರದ ಎಲೆಕ್ಟ್ರಿಕಲ್ ಕಾಮಗಾರಿಗೆ ಸಹಕಾರವನ್ನು ನೀಡಿದ್ದು. ಮುಂದಿನ ಕೆಲಸ ಕಾರ್ಯಗಳಿಗು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಶಿಬಾಜೆ ಎಸ್ ಎನ್ ಡಿ ಪಿ ಶಾಖೆಯ ಅಧ್ಯಕ್ಷರಾದ ಎಂ ಎನ್ ವಿಜಯನ್, ಕಾರ್ಯದರ್ಶಿ ಸುರೇಂದ್ರನ್, ಅಧ್ಯಕ್ಷರಾದ ಕೆ.ಕೆ ವಿಜಯನ್, ಶಿಬಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ...

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವ ಬಗ್ಗೆ ಅಶೋಕ್ ಕುಮಾರ್ ರೈ ಅವರಿಗೆ ಮನವಿ

0

ಬೆಳ್ತಂಗಡಿ;  ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರ ಹಿತ ರಕ್ಷಣಾ ವೇದಿಕೆ ಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಇವರನ್ನು ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವರೇ ಸರಕಾರದ ಗಮನ ಸೆಳೆಯಲು ಕೋರಿ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ತನ್ನದೇ ಪಾಲು ಹೊಂದಿರುವ ರಬ್ಬರು ಹಿಂದೆ ಸರಕಾರ ಹೆಚ್ಚಿನ ಮಹತ್ವ ನೀಡಿ ಸಹಾಯಧನ, ಸಾಲ ಹಾಗೂ ಇತರ ಪ್ರೋತ್ಸಾಹ ನೀಡಿದ್ದ ರಬ್ಬರು ಬೆಳೆಯ ವಿಸ್ತೀರ್ಣ ಕಡಿಮೆಯಾಗುತ್ತಿರುವುದು, ಅವಲಂಬಿತ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ...

ಮಡಂತ್ಯಾರು ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸ‌ಭ್ಯ ವರ್ತನೆ ಆರೋಪಿ ಬಂಧನ

0

ಬೆಳ್ತಂಗಡಿ: ಗಾಂಜಾ ಸೇವಿಸಿ ಮಡಂತ್ಯಾರು ಪೇಟೆಯಲ್ಲಿ ನ.2 ರಂದು ಬೆಳಗ್ಗೆ 10:45 ಕ್ಕೆ ಅಸಭ್ಯ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯ‌ನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ರಕ್ತೇಶ್ವರಿಪದವು ನಿವಾಸಿ ಸದಾನಂದ ಪೂಜಾರಿ ಮಗ ಸಂಕೇತ್ (28) ಎಂಬಾತನಾಗಿದ್ದು. ಈತನನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪಿ.ಪಿ ವರ್ಗೀಸ್ ಹಾಗೂ ಟಿ‌.ವಿ ದೇವಸ್ಯ ಅವರಿಂದ ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಕೆ

0

ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿರುವ ಅ ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಮಾಜಿ ಜಿಲ್ಲಾ ಪಂಚಾಯತು ಸದಸ್ಯ ಪಿ.ಪಿ‌ವರ್ಗೀಸ್ ಹಾಗು ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ವಿ ದೇವಸ್ಯ. ಅವರು ಭೇಟಿಯಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಜೋಸೆಫ್ ಪಿ.ಜೆ ನೂಜಿಬಾಳ್ತಿಲ ಅವರು ಇದ್ದರು.