Home ಅಪಘಾತ ಪಟ್ರಮೆ: ಮಿತ್ತಡ್ಕದಲ್ಲಿ ಆಕಸ್ಮಿಕ ಬೆಂಕಿ ಅವಘಡ  ಸಂಜೀವ ಗೌಡರ ಮನೆ ಭಸ್ಮ, ಅಪಾರ ಆರ್ಥಿಕ ನಷ್ಟ

ಪಟ್ರಮೆ: ಮಿತ್ತಡ್ಕದಲ್ಲಿ ಆಕಸ್ಮಿಕ ಬೆಂಕಿ ಅವಘಡ  ಸಂಜೀವ ಗೌಡರ ಮನೆ ಭಸ್ಮ, ಅಪಾರ ಆರ್ಥಿಕ ನಷ್ಟ

22
0

ಬೆಳ್ತಂಗಡಿ; ಪಟ್ರಮೆ ಗ್ರಾಮದ ಮಿತ್ತಡ್ಕದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಂಜೀವ ಗೌಡ ಎಂಬವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿ ತೀವ್ರಗತಿಯಲ್ಲಿ ಹಬ್ಬಿಕೊಂಡು ಮನೆ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ಕೂಡಲೇ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು,

ಬೆಂಕಿ ಅವಘಡದಿಂದಾಗಿ ಮನೆಯ ಪಕ್ಕಾಸು, ಹಂಚು ಸೇರಿದಂತೆ ಎಲ್ಲಾ ಗೃಹೋಪಯೋಗಿ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುಮಾರು ರೂ.2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಪಂಚಾಯತಿ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here