ನಿಟ್ಟಡೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ; ನಿಟ್ಟಡೆಯಲ್ಲಿ ಪೆಟ್ರೋಲ್ ಮುಗಿದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಕುಕ್ಕೇಡಿ ಗ್ರಾಮದ ನಿವಾಸಿ ಸಂಪತ್ ಕುಮಾರ್ ಎಂಬವರ ಬೈಕ್ ಕಳ್ಳತನವಾಗಿದೆ.ಇವರು ನ10 ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಪೆಟ್ರೋಲ್ ಮುಗಿದ ಕಾರಣ ಬೈಕ್ ಅನ್ನು ನಿಟ್ಟಡೆ ಗ್ರಾಮದ ಪಾಣೂರು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು ನ 11ರಂದು ಬೆಳಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಅಲ್ಲಿರಲಿಲ್ಲ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ...
ವಿಶ್ವ ಹಿಂದೂ ಪರಿಷತ್ ಮುಖಂಡ ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ ವಜಾ ಗೊಳಿಸಿದೆ ಹೈಕೋರ್ಟ್
ಬೆಳ್ತಂಗಡಿ: ಹಿಂದೂ ಮುಖಂಡರ ಮನೆಗಳಿಗೆ ತಡರಾತ್ರಿ ಪೋಲಿಸರು ತೆರಳಿ ಫೋಟೋ ತೆಗೆಯುತ್ತಿದ್ದ ಘಟನೆಗೆ ಸಂಬಂಧಿಸಿ, ಜೂ.4ರಂದು ಕಡಬ ಠಾಣೆಯ ಮುಂದೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿ ದ್ವೇಷಭಾಷಣ ಮಾಡಿದ್ದಕ್ಕೆ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್.ನ್ನು ಹೈಕೋರ್ಟ್ ನ.12ರಂದು ವಜಾಗೊಳಿಸಿದೆ. ತಡರಾತ್ರಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ಪೊಲೀಸರು ತೆರಳಿ ಅವರ ಜತೆ ಫೋಟೋ ತೆಗೆದಿದ್ದರು. ಈ ಘಟನೆಯನ್ನು ಖಂಡಿಸಿ ಕಡಬ ಠಾಣೆಯ ಎದುರು ಜೂ.4ರಂದು ಸಂಜೆ ಪ್ರತಿಭಟನೆ ನಡೆಸಲಾಗಿದ್ದು, ನವೀನ್ ನೆರಿಯ ಅವರು ಭಾಷಣ ಮಾಡಿದ್ದರು....
ಉಳ್ಳಾಲ ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ
ಮಂಗಳೂರು: ಬೀದಿ ನಾಯಿಯೊಂದರ ಭೀಕರ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕುಂಪಲದಲ್ಲಿ ಶುಕ್ರವಾರ (ನ.14) ಮುಂಜಾನೆ ನಡೆದಿದೆ. ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ. ನಾಯಿಯ ಭೀಕರ ದಾಳಿಗೆ ಒಳಗಾದ ಮೃತದೇಹ ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ ಎನ್ನಲಾಗಿದೆ. ಅಂಗಡಿಯ...
ಬಾರ್ಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶೇಸಪ್ಪ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಗೌಡ ಆಯ್ಕೆ
ಮುರುಗೋಳಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮುಂದಿನ ಎರಡುವರೆ ವರ್ಷಗಳ ಕಾಲ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶೇಸಪ್ಪ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಗೌಡ ಅಜಿರ ಅವಿರೋಧವಾಗಿ ನ.14 ರಂದು ಆಯ್ಕೆಯಾದರು. ನಿರ್ದೇಶಕರಾಗಿ ಪ್ರಸನ್ನ ಗೌಡ ಎನ್, ಪ್ರವೀಣ ರೈ ಪಿ., ಪ್ರಶಾಂತ್ ಪೈ, ಚಂದ್ರಶೇಖರ್ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ರಾಜೇಶ್ ರೈ ಹೆನ್ನಡ್ಕ, ಸವಿತಾ...
ಎಸ್.ಐ.ಟಿ ಅಧಿಕಾರಿಗಳಿಂದ ಹಲ್ಲೆ ಬೆದರಿಕೆ ರಾಜ್ಯಪಾಲರಿಗೆ ದೂರು ನೀಡಿದ ಜಯಂತ್.ಟಿ
ಬೆಳ್ತಂಗಡಿ: ಎಸ್.ಐ.ಟಿ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬೆದರಿಕೆ ಹಾಕಿರುವುದಾಗಿ ಸೌಜನ್ಯ ಪರ ಹೋರಾಟಗಾರ ಜಯಂತ್.ಟಿ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ; ಜಯಂತ್ ಅವರು ನೀಡಿರುವ ದೂರಿನಲ್ಲಿ ಎಸ್.ಐ.ಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಸೈಮನ್, ಮಂಜುನಾಥ್ ಆರ್.ಜೆ, ಮಂಜುನಾಥ ಗೌಡ, ಹಾಗೂ ಗುಣಪಾಲ ಅವರು ಸೇರಿ ತನಗೆ ಬೆದರಿಕೆ ಹಾಕಿದ್ದರು, ಬಳಿಕ ದೂರು ದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕ ತನಗೆ ತೀವ್ರವಾಗಿ ಹಲ್ಲೆ ಮಾಡಿಸಿದರು. ಅದೇರೀತಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿ...
ರೆಖ್ಯ ಬೆಂಕಿ ಆಕಸ್ಮಿಕ ಸಂಪೂರ್ಣ ಸುಟ್ಟು ಹೋದ ಮನೆ
ಕೊಕ್ಕಡ: ರೆಖ್ಯ ಸಮೀಪ ಕೊಲಾರು ನಿವಾಸಿ ಬಾಲಕೃಷ್ಣ ಎಂಬವರ ಮನೆ ನ.13 ರಂದು ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿ ಸಂಪೂರ್ಣ ಸುಟ್ಟು ಕರಕಾಲಗಿದ್ದು ಭಾರೀ ನಷ್ಟ ಸಂಭವಿಸಿದೆ. ಬೆಂಕಿ ಅನಾಹುತ ಸಂಭವಿಸಿದ ಸಮಯ ಮನೆ ಮಂದಿ ಕೆಲಸಕ್ಕೆ ಹೋಗಿರುವ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಿಂದ ಪಾರಾಗಿದ್ದಾರೆ. .ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಸುಮಾರು 45000 ಹಣ, ಹಾಗೂ ಚಿನ್ನದ ಒಡವೆ , ಮಕ್ಕಳ ಪುಸ್ತಕ, ಬಟ್ಟೆ ಇನ್ನಿತರ ಮನೆಯೊಳಗಿನ ಎಲ್ಲ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ. ಬೆಂಕಿ ಹೇಗೆ ಹಿಡಿದುಕೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿದು...
ಉಜಿರೆ; ತರಕಾರಿ ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವು
ಬೆಳ್ತಂಗಡಿ; ಉಜಿರೆಯಲ್ಲಿ ತರಕಾರಿ ಅಂಗಡಿಯ ಮುಂದೆ ಸ್ಕೂಟರ್ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರುವ ವೇಳೆಗೆ ಸ್ಕೂಟರ್ ಕಳ್ಳತನವಾದ ಘಟನೆ ನ12ರಂದು ನಡೆದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಳಾಲು ನಿವಾಸಿ ಧರ್ಮಪಾಲಜೈನ್ ಎಂಬವರು ಉಜಿರೆ ಪೇಟೆಗೆ ಬಂದವವರು ತಮ್ಮ ಸ್ಕೂಟರ್ ಹೋಂಡಾ ಆಕ್ಟೀವಾ ಕೆ.ಎ 70 ಜೆ 169 ಅನ್ನು ಬೆಳಗ್ಗೆ 11ಗಂಟೆಯ ಸುಮಾರಿಗೆ ಉಜಿರೆಯ ಜೈನ್ ತರಕಾರಿ ಅಂಗಡಿಯ ಮುಂದೆ ನಿಲ್ಲಿಸಿ ತರಕಾರಿ ಅಂಗಡಿಗೆ ತೆರಳಿ ತರಕಾರಿ ತೆಗೆದುಕೊಂಡು 11.45 ರ ಸುಮಾರಿಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟರ್ ಇರಲಿಲ್ಲ ಸುತ್ತ...
ಇಳಂತಿಲ 10ನೇ ತರಗತಿ ವಿಧ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ
ಬೆಳ್ತಂಗಡಿ: ತಾಲೂಕಿನ ಇಳಂತಿಲ ಗ್ರಾಮದ ನಿವಾಸಿ 10 ನೇ ತರಗತಿ ವಿದ್ಯಾರ್ಥಿಯೋರ್ವಳು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಇಳಂತಿಲ ಗ್ರಾಮದ ಪಾರಡ್ಕ ಮನೆ ನಿವಾಸಿ ಹರ್ಷಿತಾ (15 ವರ್ಷ) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.ಹರ್ಷಿತಾ ನ 4 ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೇ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪಾರಡ್ಕ ಎಂಬಲ್ಲಿ ಮನೆಯಲ್ಲಿದ್ದವಳು ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವಳನ್ನು ವಿಷಯ ತಿಳಿದು ಕೂಲಿ ಕೆಲಸಕ್ಕೆ...
ಸತೀಶ್ ಕಾಶಿಪಟ್ಣ ಅವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ
ಬೆಳ್ತಂಗಡಿ; ಸಹಕಾರಿಕ್ಷೇತ್ರದಲ್ಲಿ ಕಳೆದ 25ವರ್ಷಗಳಿಂದ ಸಲ್ಲಿಸಿರುವ ಸೇವೆಗಾಗಿ ಬೆಳ್ತಂಗಡಿ ತಾಲೂಕಿನ ಹಿರಿಯ ಸಹಕಾರಿ ಮುಖಂಡ ಸತೀಶ್ ಕಾಶಿಪಟ್ಣ ಅವರಿಗೆ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪೆರಾಡಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಸತೀಶ್ ಕೆ ಅವರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಬೆಳ್ತಂಗಡಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರೂ ಆಗಿದ್ದಾರೆ.ನ14ರಂದು ಬೆಂಗಳೂರಿನಲ್ಲಿ ನಡೆಯುವ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಧರ್ಮಸ್ಥಳ ಪ್ರಕರಣ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್ ಮಹೇಶ್ ಶೆಟ್ಟಿ ಸೇರಿದಂತೆ ನಾಲ್ವರ ವಿಚಾರಣೆಗೆ ಎಸ್.ಐ.ಟಿ ಸಿದ್ದತೆ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರುಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ತೆರವುಗೊಳಿಸಿದ್ದು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ನಾಲ್ವರ ವಿಚಾರಣೆ ನಡೆಸಲು ಎಸ್.ಐ.ಟಿ ತಂಡ ಸಿದ್ದತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಹೈಕೋರ್ಟ್ ನ ಬುಧನಾರ ನೀಡಿದ ಈ ಆದೇಶದಿಂದ ಎಸ್‌ಐಟಿ ತನಿಖೆಗೆ ಹಾಗೂ ಮಹೇಶ್ ಶೆಟ್ಟಿ ಹಾಗೂ ಇತರರ ವಿಚಾರಣೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಪ್ರಕರಣದಲ್ಲಿ ಪಿತೂರಿ ನಡೆಸಿದ. ಆರೋಪ ಎದುರಿಸುತ್ತಿರುವ ಗಿರೀಶ್ ಮಟ್ಟಣ್ಣನವರ್. ಮಹೇಶ್ ಶೆಟ್ಟಿ...















