ಬೆಳ್ತಂಗಡಿ;ಗುರಿಪಳ್ಳದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಬೆಳ್ತಂಗಡಿ: ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದಗುರಿಪಳ್ಳ ನಿವಾಸಿ ಶ್ರೀಧರ ನಾಯ್ಕ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಗಲು ಹೊತ್ತು ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜೂ. 20ರಂದು ನಡೆದಿದೆ.ಮನೆಯಲ್ಲಿ ಒಟ್ಟು ನಾಲ್ಕು ಮಂದಿ ಇದ್ದುಶ್ರೀಧರ ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.ಇತರರು ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಹಂಚು ತೆಗೆದು ಒಳನುಗ್ಗಿದ್ದು ಮನೆಯಲ್ಲಿ ಇದ್ದ ಕಪಾಟಿನ ಬೀಗ ಮುರಿದು ಸುಮಾರು 6 ಲಕ್ಷ ರೂ.ಗಿಂತ ಅಧಿಕ...
ರಾಜ್ಯಕ್ಕೆ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ. ಸಹಿತ ಇತರ ಸಾಧಕರಿಗೆ ಸಮ್ಮಾನ
ಬೆಳ್ತಂಗಡಿ, ಜೂ.20: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ನಿಶ್ಚಲವಾಗಿ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ.ಯೇ ಒಂದು ಪ್ರತಿಷ್ಠಿತ ಉದಾಹರಣೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ಸಿಇಟಿಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಹಾಗೂ ಬೋರ್ಡ್, ಜೆಇಇ ಸೇರಿದಂತೆ ಇತರೆ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಗಣದಲ್ಲಿ ಜೂ.20 ರಂದು ನಡೆದ ಸಮಾರಂಭದಲ್ಲಿ ಸಮ್ಮಾನಿಸಿ ಮಾತನಾಡಿದರು. ಎರಡು ವರ್ಷಗಳ ಹಿಂದೆ...
ಕಡಬ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಅನಾಥವಾದ ಮಗು
ಬೆಳ್ತಂಗಡಿ: ಪತ್ನಿಯನ್ನು ಕೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಆಲಂಕಾರು ಕಜೆಯ ಬಾಡಿಗೆ ಮನೆಯೊಂದರಲ್ಲಿ ಜೂನ್ 20 ರಂದು ನಡೆದಿದೆ. ಅಪ್ಪ ಅಮ್ಮನನ್ನು ಕಳೆದುಕೊಂಡು 2 ವರ್ಷದ ಪುಟ್ಟ ಕಂದಮ್ಮ ಅನಾಥವಾಗಿದೆ. ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ನಿವಾಸಿಗಳಾಗಿರುವ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತಾ ಎಂಬವರೇ ಮೃತಪಟ್ಟವರಾಗಿದ್ದಾರೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಇಲ್ಲಿ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಆಲಂಕಾರು ಪೇಟೆಯ ಹೋಟೆಲ್ ಬಿಟ್ಟು ತೆರಳಿದ್ದ ಇವರು, ಜೂ.19ರ ಸಂಜೆ ಪುನಃ ಬಂದಿದ್ದರು. ಜೂ.20ರಂದು ಘಟನೆ...
ಕಕ್ಕಿಂಜೆಯ ಆಲ್ವಿನ್ ಸಿ.ಜೆ ಅವರಿಗೆ ಅಂತಾರಾಷ್ಟ್ರೀಯ “ಯುವ ವಿಜ್ಞಾನಿ ಪ್ರಶಸ್ತಿ”
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಮೂಲದ ಸಿ. ಎ. ಜೋನಿ ಮತ್ತು ಸಿನ್ಸಿ ದಂಪತಿಯ ಪುತ್ರರಾದ ಆಲ್ಬಿನ್ ಸಿ. ಜೆ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ "ಯುವ ವಿಜ್ಞಾನಿ ಪ್ರಶಸ್ತಿ" (Young Scientist Award) ಗೆ ಭಾಜನರಾಗಿದ್ದಾರೆ.ಜೂನ್ 05 ಮತ್ತು 06, 2026 ರಂದು ನಡೆದ “ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಆಲ್ಬಿನ್ ಅವರು ಪ್ರಸ್ತುತ ತುಮಕೂರಿನ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSIT -...
ಕಡಿರುದ್ಯಾವರದಲ್ಲಿ ಒಂಟಿ ಸಲಗನ ಓಡಾಟ
ಬೆಳ್ತಂಗಡಿ; ಗುರುವಾರ, ರಾತ್ರಿ ಕಡಿರುದ್ಯಾವರ ಗ್ರಾಮದ ವಿವಿದೆಡೆ ಒಂಟಿಸಲಗವೊಂದು ಓಡಾಟ ನಡೆಸಿದ್ದು ಕಂಡುಬಂದಿದೆ ಆದರೆ ಎಲ್ಲಿಯೂ ಹೆಚ್ಚಿನ ಕೃಷಿಗೆ ಹಾನಿಯುಂಟುಮಾಡಿಲ್ಲ. ಕಡಿರುದ್ಯಾವರ ಗ್ರಾಮದ ಮಿತ್ತಕಟ್ಟಾಜೆ, ಜೋಡು ನೇರಳೆ ಪರಿಸರದಲ್ಲಿ ಒಂಟಿ ಸಲಗವು ಸಂಚರಿಸಿದ್ದು ಮಿತ್ತಕಟ್ಟಾಜೆಯ ಪ್ರವೀಣ್ ಕುಮಾರ್ ಮೋಹನ್ ನಾಯ್ಕ ಮಹೇಶ್ ಭಟ್ ಇವರ ಕೃಷಿ ಭೂಮಿಯಲ್ಲಿ ಸಂಚಾರ ಮಾಡಿದೆ. ಅದೇ ರೀತಿ ಜೋಡು ನೇರಳೆ ಮಚ್ಚೇಂದ್ರನಾಯಕ್ ಇವರ ತೋಟದಲ್ಲಿರುವ ಹಲಸಿನ ಹಣ್ಣು ಇತ್ಯಾದಿ ವಸ್ತುಗಳನ್ನು ತಿಂದು ಕಾಡಿನ ಕಡೆಗೆ ತೆರಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಾಡಾನೆ ಯಾವುದೇ ಕೃಷಿಗೆ ಹಾನಿಯುಂಟು...
ವಿಧಾನ ಪರಿಷತ್ ಚುನಾವಣೆ ಬಿ.ಕೆ ಹರಿಪ್ರಸಾದ್ ಸೇರಿ ಕಾಂಗ್ರೆಸ್ ನ ಐವರು ಬಿಜೆಪಿಯ ಇಬ್ಬರ ಗೆಲುವು ಜೆಡಿಎಸ್ ಗೆ ಮುಖಭಂಗ
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನ ಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮೈತ್ರಕೂಟದಿಂದ ಕಣಕ್ಕೆ ಇಳಿದಿದ್ದ ಜೆಡಿಎಸ್ ಅಭ್ಯರ್ಥಿ ಸೋಲನ್ನು ಕಂಡಿದ್ದು ತೀವ್ರ ಹಿನ್ನಡೆಗೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ಬಿ.ಎಸ್.ಶಿವಣ್ಣ ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್, ವಿನಯ್ ಕಾರ್ತಿಕ್ ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜು ಸೋಲನ್ನು ಅನುಭವಿಸಿದ್ದಾರೆ.ಕಣದಲ್ಲಿದ್ದ ಒಟ್ಟು ಎಂಟು ಅಭ್ಯರ್ಥಿಗಳ ಪೈಕಿ ಏಳು ಅಭ್ಯರ್ಥಿಗಳು...
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಜೀವ ಬೆದರಿಕೆ ಆರೋಪದ ತನಿಖೆಗೆ ಹೈಕೋರ್ಟ್ ಅಸ್ತು; ಸುಳ್ಳು ಸಾಕ್ಷ್ಯ ಒತ್ತಾಯ ಆರೋಪಕ್ಕೆ ತನಿಖೆಗೆ ತಡೆ
ಬೆಳ್ತಂಗಡಿ; ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಜೀವ ಬೆದರಿಕೆ ಪ್ರಕರಣದ ತನಿಖೆ ಮುಂದುವರಿಕೆಗೆ ಮಂಗಳವಾರ ಅನುಮತಿಸಿರುವ ಕರ್ನಾಟಕ ಹೈಕೋರ್ಟ್, ಇದೇ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ಜೀವ ಬೆದರಿಕೆ ಹಾಕಿದ ಮತ್ತು ಸುಳ್ಳು ಸಾಕ್ಷ್ಯ ಹೇಳಲು ಬಲವಂತಪಡಿಸಿದ ಆರೋಪದ ಮೇಲೆ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು...
ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಬದುಕು ಕಟ್ಟೋಣ ತಂಡದಿಂದ ಸ್ಕೂಲ್ಬ್ಯಾಗ್, ಕೊಡೆ ವಿತರಣೆ
ಬೆಳ್ತಂಗಡಿ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಇಲ್ಲಿನ143 ವಿದ್ಯಾರ್ಥಿಗಳಿಗೆ"ಬದುಕು ಕಟ್ಟೋಣ ಬನ್ನಿ " ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಮಾಲಕರಾದ ಮೋಹನ್ ಕುಮಾರ್ ಅವರುಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಣೆ ಮಾಡಿದರು. ಈ ಸಂದರ್ಭ"ಬದುಕು ಕಟ್ಟೋಣ ಬನ್ನಿ" ತಂಡದ ಸಂಚಾಲಕ ಮೋಹನ್ ಕುಮಾರ್ ಅವರು ಪುಸ್ತಕ ಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಿಸಿ ಮಾತನಾಡಿಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕು, ಕೇವಲ ಅಂಕಗಳಿಗಾಗಿ ಕಲಿಯುವುದಲ್ಲ, ವಿದ್ಯಾರ್ಥಿಗಳು ಸಂಸ್ಕಾರಯುತರಾಗಿ ಬದುಕಬೇಕು, ವಿದ್ಯಾವಂತರಾಗಿಮಾದರಿ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದಲ್ಲಿ...
ಬೆಳ್ತಂಗಡಿ; ಮದ್ದಡ್ಕದಲ್ಲಿ ಸರಣಿ ಅಪಘಾತ ಹಲವರಿಗೆ ಗಾಯ
ಬೆಳ್ತಂಗಡಿ: ಕಾರುಗಳ ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಹಲವರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಗುತುವಾಯನಕೆರೆ ಸಮೀಪ ಮದ್ದಡ್ಕದಲ್ಲಿ ನಡೆದಿದೆ. ಚಿಕ್ಕಮಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಎಂಬಲ್ಲಿ ಮಂಗಳೂರಿನಿಂದ ಬರುತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತಿದ್ದ ಕಾರು ಹಾಗೂ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದೆ. ಮತ್ತೊಂದು ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ....
ಬಳಂಜ ಶಾಲೆ: ಎಲ್ ಕೆಜಿ ಕೊಠಡಿ ಉದ್ಘಾಟನೆ, ಶಾಲಾ ವಾಹನ ಹಸ್ತಾಂತರ
ಬೆಳ್ತಂಗಡಿ :ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ,ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ಮತ್ತು ಬಳಂಜ ಶಿಕ್ಷಣ ಟ್ರಸ್ಟ್, ಹಳೆ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಅರ್ಪಿಸುವ ಶಾಲಾ ವಾಹನ ಹಸ್ತಾಂತರ ಮತ್ತು ಎಲ್ .ಕೆಜಿ ಕೊಠಡಿಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಸೋಮವಾರ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಬಳಂಜದ ಶಿಕ್ಷಣ ಟ್ರಸ್ಟ್ ತಮ್ಮ ಕಲ್ಪನೆಗೆ ಪೂರಕವಾಗಿ ಕೆಲಸ ಮಾಡಿದ ಪ್ರತಿಫಲವೇ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಟ್ರಸ್ಟ್ ಶ್ರಮ ಶ್ಲಾಘನೀಯ. ಬಸ್ ದಾನ ನೀಡಿದ ಅಶ್ವತ್ವ...















