ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ;  ಶಾಸಹ ಹರೀಶ್ ಪೂಂಜ ಅವರಿಂದ‌ ಅಧಿಕಾರಿಗಳೊಂದಿಗೆ ಸಭೆ, ಕಾಮಗಾರಿ ಆರಂಭಿಸಲು ಸೂಚನೆ

0

ಬೆಳ್ತಂಗಡಿ; ತಾಲೂಕು ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಕೊನೆಗೂ ಶಾಸಕ ಹರೀಶ್ ಪೂಂಜ‌ ಅವರು ಅಧಿಕಾರಿಗಳ‌ ಸಬೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.ಕಾಮಗಾರಿ ಸ್ಥಗಿತಗೊಂಡು ಬಸ್ ನಿಲ್ದಾಣ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಬಗ್ಗೆ "ಬೆಳ್ತಂಗಡಿ ಸಮಾಚಾರ" ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತು.ಇದೀಗ ಶಾಸಕರು ಈ ಬಗ್ಗೆ ಕೊನೆಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಅರಣ್ಯ ಇಲಾಖೆ ಸೇರಿದಂತೆ‌ ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿಕಾಮಗಾರಿಯನ್ನು ಮುಕ್ತಾಯಗೊಳಿಸುವ ಸಂಬಂಧ ಇರುವ ಅಡಚಣೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು. ಸಮಸ್ಯೆಗಳನ್ನು ಪರಿಹರಿಸಿ...

ಬೆಳ್ತಂಗಡಿ : ಮದನ್ ಬುಗುಡಿ ಬೆಳ್ತಂಗಡಿ ಠಾಣೆಗೆ ಹಾಜರು

0

ಬೆಳ್ತಂಗಡಿ : ಗಿರೀಶ್ ಮಟ್ಟಣ್ಣನವರ್ ಅವರು ಮಾನವಹಕ್ಕುಗಳ‌ ಅಯೋಗದ ಅಧಿಕಾರಿ ಎಂದು ಮಾಧ್ಯಮದ ಮುಂದೆ ಪರಿಚಯಿಸಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ದೂರಿನ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಆಗಿರುವ ಮದನ್ ಬುಗುಡಿ ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಅ14ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಮ್ಮ ವಕೀಲರೊಂದಿಗೆ ಹಾಜರಾದರು.‍ ಗಿರೀಶ್ ಮಟ್ಟಣ್ಣವರ್ ಅವರು ಮಾದ್ಯಮದ ಮುಂದೆ ಮಾತನಾಡಿದಾಗ ಮದನ್ ಬುಗುಡಿ ಅವರನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ್ದರು. ಈ ಬಗ್ಗೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಮದನ್ ಬುಗುಡಿ ವಿರುದ್ಧ...

ಸುಳ್ಯ 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯ ಬಂಧನ

0

ಬೆಳ್ತಂಗಡಿ; 1990 ರಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವುವ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಾಲನ್(73) ನಾಟಿ ಮನೆ, ತ್ರಿಸ್ಸೂರ್ ಜಿಲ್ಲೆ ಕೇರಳ ಎಂಬಾತನು 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಈತನನ್ನು ಕೇರಳ ರಾಜ್ಯದ ತ್ರಿಸ್ಸೂರ್ ನಿಂದ ದಸ್ತಗಿರಿ ಮಾಡಿ ಅ.13 ರಂದು ಮಾನ್ಯ ನ್ಯಾಯಧೀಶರು...

ಬೆಳ್ತಂಗಡಿ; ಕನಿಷ್ಟ ಕೂಲಿಗಾಗಿ ಸಿ.ಐ.ಟಿ.ಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ

0

ಬೆಳ್ತಂಗಡಿ; ಹಲವು ಜನರ ತ್ಯಾಗಮಯ ಹೋರಾಟದಿಂದ ಪಡೆದ ಕಾನೂನು ಸವಲತ್ತುಗಳನ್ನು ಮತ್ತು ಕನಿಷ್ಟ ವೇತನವನ್ನು ಇಲ್ಲವಾಗಿಸಲು ಮಾಲಕರು ನಡೆಸುವ ಶಡ್ಯಂತರಗಳ ವಿರುದ್ದ ಹೋರಾಟ ನಡೆಸಿ ನ್ಯಾಯ ಪಡೆಯಲು ಕಾರ್ಮಿಕರು ಸಿದ್ದರಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಬೀಡಿಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.ಬೀಡಿ ಕಾರ್ಮಿಕರ ವೇತನ ಬಾಕಿ ಮತ್ತು ಕನಿಷ್ಟ ವೇತನ ಜಾರಿ ಮಾಡದ ಬೀಡಿ ಮಾಲಕರ ಕಾರ್ಮಿಕ ವಿರೋದಿ ದೋರಣೆ ಖಂಡಿಸಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಜೆಪಿ ಬೀಡಿ ಕಂಪೆನಿ ಎದುರು ನಡೆದ ಬೀಡಿ ಕಾರ್ಮಿಕರ...

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ತಡೆ ಕೋರಿದ್ದ ಅರ್ಜಿ ವಿಚಾರಣೆ; ತೀರ್ಪು ಬರುವ ವರೆಗೆ ಬಲವಂತದ ಕ್ರಮ ಬೇಡ ಹೈಕೋರ್ಟ್ ಆದೇಶ

0

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯ ವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ನೀಡಿದ್ದ ಆದೇಶಕ್ಕೆ ತಡೆ ಕೋರಿ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅ.13 ರಂದು ಅರ್ಜಿಯ ವಿಚಾರಣೆ ನಡೆಸಿದ್ದು ಆದೇಶವನ್ನು ಕಾಯ್ದಿರಿಸಿದೆ. ಮುಂದಿನ ಆದೇಶದವರೆಗೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಕೆ

0

ಬೆಳ್ತಂಗಡಿ; ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನಲ್ಲಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ.ಮಹೇಶ್ ಶೆಟ್ಟಿ ಅವರ ಮನೆಯಲ್ಲಿ ಎಸ್.ಐ.ಟಿ‌ ಅಧಿಕಾರಿಗಳು ಶೋಧ ನಡೆಸಿದ ವೇಳೆ ಅಲ್ಲಿ ಒಂದು ಬಂದೂಕು ಹಾಗೂ ಎರಡು ತಲವಾರುಗಳು ಪತ್ತೆಯಾಗಿರುವುದಾಗಿ ಎಸ್.ಐ.ಟಿ ಅಧಿಕಾರಿಗಳು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿತ್ತು.ಈ ಪ್ರಕರಣದಲ್ಲಿ ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ ಬೆನ್ನಲ್ಲಿಯೇ ಮಹೇಶ್ ಶೆಟ್ಟಿ ಅವರು ನಿರೀಕ್ಷಣಾ ಜಾಮೀನಿಗೆ ಮಂಗಳೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು...

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಚಿನ್ನಯ್ಯ ಸಹೋದರಿ ಹಾಜರು

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆರೋಪಿ ಚಿನ್ನಯ್ಯನ ಸಹೋದರಿ ರತ್ನ ಅ.13 ರಂದು ವಿಚಾರಣೆಗೆ ಹಾಜರಾಗಿದ್ದು‌ಎಸ್.ಐಟಿ ಅಧಿಕಾರಿಗಳು ಈಕೆಯ ವಿಚಾರಣೆ ನಡೆಸುತ್ತಿದ್ದಾರೆ

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಚಿನ್ನಯ್ಯನ ಪತ್ನಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರು

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ವಿಚಾರಣೆಗಾಗಿ ಮಲ್ಲಿಕಾ ಅ.13 ರಂದು ಬೆಳಗ್ಗೆ 9:30 ಕ್ಕೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ.ಚಿನ್ನಯ್ಯನಿಗೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ಪಡೆಯಲು ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಾಗೂ ಇತರ ವಿಚಾರಗಳನ್ನು ಪಡೆಯಲು ಎಸ್.ಐ.ಟಿ ಅಧಿಕಾರಿಗಳು ಕರೆಸಿದ್ದಾರೆ ಎನ್ನಲಾಗಿದೆ.ಚಿನ್ನಯ್ಯ ಮಹೇಶ್ ಶೆಟ್ಟಿ ಅವರ ಮನೆಗೆ ತೆರಳಿದ‌ವೇಳೆ ಆತನೊಂದಿಗೆ ಪತ್ನಿಯೂ ಇದ್ದಳು ಎಂದು ಸೌಜನ್ಯ ಪರ ಹೋರಾಟಗಾರರು ಹೇಳಿಕೆ ನೀಡಿದ್ದರು. ಅಲ್ಲಿ ಆತ ನೀಡಿದ ಹೇಳಿಕೆಗೆಯ ಬಗೆಗಿನ ವೀಡಿಯೋಗಳು...

ಬೆಳ್ತಂಗಡಿ : ನಿಡ್ಲೆಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಯತ್ನ; ಧರ್ಮಸ್ಥಳ ಪೊಲೀಸರಿಂದ ಮಧ್ಯ ಸಮೇತ ಆರೋಪಿಯ ಬಂಧನ

0

ಬೆಳ್ತಂಗಡಿ : ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಅಂಗಡಿ ಬಳಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮಧ್ಯ ಸಮೇತ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಧರ್ಮಸ್ಥಳ ಪ್ರಭಾರ ಪಿಎಸ್ಐ ಸಿಕಂಧರ್ ಪಾಷಾ ಸಿಬ್ಬಂದಿಗಳೊಂದಿಗೆ ಕುದ್ರಾಯದ ಅಂಗಡಿಗೆ ದಾಳಿ ನಡೆಸಿ ಪರಿಶೀಲಿಸಿದಾಗ ಅಂಗಡಿಯ ಹೊರಗಡೆ ಹಿಂಬದಿಯಲ್ಲಿ ಗೋಣಿ ಚೀಲದ ಕಟ್ಟೊಂದು ಇದ್ದು, ಅದರ ಸಮೀಪ ಒಬ್ಬ ವ್ಯಕ್ತಿ ನಿಂತುಕೊಂಡಿದ್ದ ಸಾಂತಪ್ಪ ಎಂಬಾತನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಶೋಧನಾ ಕಾರ್ಯ ನಡೆಸಿದಾಗ ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಅಕ್ರಮ...

ಗುರುವಾಯನಕೆರೆ ಉದ್ಯಮಿ ಶಶಿಧರ ಶೆಟ್ಟಿ ಅವರ ತಾಯಿ ಕಾಶಿ ಶೆಟ್ಟಿ(88)ನಿಧನ

0

ಬೆಳ್ತಂಗಡಿ: ಗುರುವಾಯನಕೆರೆ ನವಶಕ್ತಿಯ ಉದ್ಯಮಿ ಶಶಿಧರ ಶೆಟ್ಟಿ ಅವರ ತಾಯಿ ಕಾಶಿ ಶೆಟ್ಟಿ (88)ಯವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳಾದ ಉದ್ಯಮಿ ಶಶಿಧರ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಜಯರಾಮ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.