ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ

0

ಬೆಳ್ತಂಗಡಿ;  ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಶಾಸಕರಾದ ಶ್ರೀ ಹರೀಶ್ ಪೂಂಜರವರ ನೇತೃತ್ವದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಸಾರ್ವಜನಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ "ಶ್ರಮಿಕ ಪ್ರತಿಭಾ ವಿದ್ಯಾರ್ಥಿ" ಸನ್ಮಾನ ಕಾರ್ಯಕ್ರಮವನ್ನು ಜೂನ್ 28, ಭಾನುವಾರ ಮೂರು ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಪೂರ್ವಾಹ್ನ: 9.00 - ಸ್ವರಾಜ್ ಟವರ್ಸ್ ಸಭಾಭವನ ಅಳದಂಗಡಿ(ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ - ಗ್ರಾಮಗಳು: ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು,...

ಬೆಳ್ತಂಗಡಿ; ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹಲವರಿಗೆ ಗಾಯ

0

ಬೆಳ್ತಂಗಡಿ; ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಜೂ. 26 ರಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.ಮುಂಜಾನೆ ಸುಲ್ಕೇರಿ ಗ್ರಾಮದಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸುಜುಕಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾಂಕ್ರೀಟ್ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಾನೆಟ್, ಬಂಪರ್, ಇಂಜಿನ್ ಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನ ಹಳದಿ...

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ವಿವಾದ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕರಾವಳಿ ಭಾಗದ ಶಾಸಕರು ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ

0

ಧಮ೯ಸ್ಥಳ: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (ಕ್ರಾಸ್‌ ವೋಟಿಂಗ್) ಸತ್ಯಾಸತ್ಯತೆ ತಿಳಿಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ(ಬಿಜೆಪಿಎಲ್‌ ಪಿ) ನಡೆಸಲು ಮುಂದಾಗಿ ಕೊನೆಗೆ ವರಿಷ್ಠರ ಸೂಚನೆಯಂತೆ ಕೈಬಿಟ್ಟು ಜೂ.26ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದಶ೯ನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಧಮಾ೯ಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಹರೀಶ್ ಪೂಂಜ, ಯಶಪಾಲ್...

ಧರ್ಮಸ್ಥಳ: ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು: ವಾರೀಸುದಾರರ ಪತ್ತೆಗೆ ಮನವಿ

0

ಬೆಳ್ತಂಗಡಿ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿ ಜೂ.25ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರ ವಯಸ್ಸು ಸುಮಾರು 60-65 ವರ್ಷ ಆಗಿದ್ದು, ಎತ್ತರ 5.3 ಅಡಿ, ಸಪೂರ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ, ಅಗಲ ಹಣೆ, ಮುಖದಲ್ಲಿ ಬಿಳಿ ನೆರೆತ ಗಡ್ಡ-ಮೀಸೆ, ತಲೆಯಲ್ಲಿ ಬಿಳಿ ನೆರೆತ ಕೂದಲು, ಹಣೆಯ ಎಡಭಾಗ ಎಡಕಣ್ಣಿನ ಮೇಲ್ಬಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು ಇದ್ದು, ಮೃತದೇಹದ ಮೈಮೇಲೆ […]

ಗ್ರಾಮ ಪಂಚಾಯತ್ ಧರ್ಮಸ್ಥಳ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ :- “ಸ್ವಚ್ಛ ನೇತ್ರಾವತಿ” ಬೃಹತ್ ಸ್ವಚ್ಛತಾ ಅಭಿಯಾನ

0

ಬೆಳ್ತಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಧರ್ಮಸ್ಥಳ ಗ್ರಾಮ ಪಂಚಾಯತ್, ಸ್ವಚ್ಛ ಭಾರತ ಮಿಷನ್ (ಗ್ರಾ) ದ.ಕ., ಶ್ರೀ ಕ್ಷೇತ್ರ ಧರ್ಮಸ್ಥಳ, ರೋಟರಿ ಕ್ಲಬ್ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳ, ಮಾನ್ವಿಶ್ರೀ ಸಂಜೀವಿನಿ ಮಹಿಳಾ ಒಕ್ಕೂಟ, ಕನ್ಯಾಕುಮಾರಿ ಯುವತಿ ಮಂಡಲ, ಶ್ರೀ ಶಕ್ತಿ ಗುಂಪುಗಳು, ಸ್ವ ಸಹಾಯ ಸಂಘಗಳು, ಇವುಗಳ ಆಶ್ರಯದಲ್ಲಿ ನೇತ್ರಾವತಿ ಸ್ನಾನಘಟ್ಟ ನದಿಕಿನಾರೆಯಲ್ಲಿ ಸ್ವಚ್ಛ ನೇತ್ರಾವತಿ ವಿಶೇಷ ಬೃಹತ್ ಸ್ವಚ್ಛತಾ...

ಅಡಿಕೆ ಬೆಳೆಗಾರರು ಮತ್ತು ವರ್ತಕರ ಮೇಲೆ ನಿರಂತರ ದೌರ್ಜನ್ಯ: SDPI ಖಂಡನೆ; ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ ರಾಜ್ಯದ ಲಾರಿಗಳ ಬಿಡುಗಡೆಗೆ ಆಗ್ರಹ 

0

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಕಳೆದ ಹಲವು ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಣಿಕೆಯ ಲಾರಿಗಳನ್ನು ತಡೆಹಿಡಿದಿರುವ ಕ್ರಮವು ಅತೀಹೇಯಾ ಹಾಗೂ ಖಂಡನೀಯ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡಿಕೆ ವರ್ತಕರು ಅತೀ ದೊಡ್ಡಮಟ್ಟದಲ್ಲಿ GST ಕಟ್ಟುವ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಯನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ನಿಲುವಿನಿಂದ ಕರ್ನಾಟಕ ರಾಜ್ಯ ಹಾಗೂ ಕೇಂದ್ರದ ಬೊಕ್ಕಸಕ್ಕೂ ಪೆಟ್ಟು ಬಿದ್ದಂತಾಗಿದೆ. ಅಡಿಕೆ...

ಬೆಳ್ತಂಗಡಿ; ಬೆಳಾಲಿನಲ್ಲಿ ಬೈಕ್ ಗಳ ನಡುವೆ ಅಪಘಾತ ಮೂವರಿಗೆ ಗಾಯ

0

ಬೆಳ್ತಂಗಡಿ; ಬೆಳಾಲು ಗ್ರಾಮದ‌ ಕಾಡಂಡ‌ ಸಮೀಪ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡದ ಘಟನೆ ಬುಧವಾರ ಸಂಭವಿಸಿದೆ.ಗಾಯಾಳುಗಳು ಇಳಂತಿಲ ಗ್ರಾಮದ ನಿವಾಸಿ ಸಿಯಾನ್(18), ಖಲಂದರ್ ಶಾಫಿ, ಹಾಗೂ ಮತ್ತೊಂದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅತಿಶ್ ಎಂಬವರು ಗಾಯಗೊಂಡಿದ್ದಾರೆ.ಇಳಂತಿಲದಿಂದ ಉಜಿರೆಕಡೆಗೆ ಬರುತ್ತಿದ್ದ ಖಲಂದರ್ ಶಾಫಿ ಚಲಾಯಿಸುತ್ತಿದ್ದ ಬೈಕ್ ಗೆ ಉಜಿರೆ ಕಡೆಯಿಂದ ಬಂದ ಅತಿಶ್ ಚಲಾಯಿಸುತ್ತಿದ್ದ ಬೈಕಿಗೆ ನೇರವಾಗಿ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ಗಾಯಗೊಂಡ ಗಾಯಾಳುಗಳನ್ನು ಸ್ಥಳೀಯರು ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರವಾಗಿ...

ದ.ಕ ಸೇರಿದಂತೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಯು.ಟಿ ಖಾದರ್

0

ಬೆಳ್ತಂಗಡಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರಾಗಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ. ಜತೆಗೆ ಕೊಡಗು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಸ್ಪೀಕ‌ರ್ ಅಗಿದ್ದ ಖಾದರ್ ಅವರು ಇದೀಗ ಸಚಿವರಾಗಿದ್ದಾರೆ.

ವೇಣೂರು ಠಾಣಾವ್ಯಪ್ತಿಯಲ್ಲಿ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ರಿಬ್ಬರಿಂದ ಲೈಂಗಿಕ ದೌರ್ಜನ್ಯ ಪ್ರಕರಣ‌ದಾಖಲು

0

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರ್ಷದ ಮಗುವಿನ ಮೇಲೆ ಎರಡು ಮಂದಿ ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ಬಾಲಾರೋಪಿಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. 2023 ರಲ್ಲಿ ಸಂತ್ರಸ್ತ ಬಾಲಕಿ 6 ವರ್ಷದ ಸಂದರ್ಭ ಈ ಕೃತ್ಯ ನಡೆದಿದ್ದು ಸಂತ್ರಸ್ತ ಮಗುವಿನ ಸಂಬಂಧಿ ಹಾಗೂ ಸ್ಥಳೀಯ ಬಾಲಕ ಜೊತೆಗೂಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳಲ್ಲಿ ಒರ್ವನನ್ನು(16) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಅಪ್ರಾಪ್ತ ಬಾಲಕ(18) ಮುಂಬಯಿ...

ಬೆಳ್ತಂಗಡಿ; ಗ್ರಾಮ‌ಆಡಳಿತ ಅಧಿಕಾರಿಯಿಂದ ವ್ಯಕ್ತಿಯಿಂದ ಕೊಲೆ

0

ಬೆಳ್ತಂಗಡಿ : ಗ್ರಾಮಾಡಳಿತಾಧಿಕಾರಿ ಜಯಚಂದ್ರ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಶೆಟ್ಟಹಳ್ಳಿಯಲ್ಲಿ ಜೂ.22 ರಂದು ನಡೆದಿದೆ. ಮಂಡ್ಯ ಜಿಲ್ಲೆಯ ಶೆಟ್ಟಿಹಳ್ಳಿ ನಿವಾಸಿಯಾಗಿರುವ ಹಿಂದೆ ಬೆಳ್ತಂಗಡಿ ಯಲ್ಲಿ ಕಾರ್ಯ ನಿರ್ವಹಿಸಿ ಈಗ ಪುತ್ತೂರಿನಲ್ಲಿ ಗ್ರಾಮ ಆಡಳಿತಾ ಧಿಕಾರಿಯಾಗಿರುವ ಜಯಚಂದ್ರ ಕೊಲೆ ಆರೋಪಿಯಾಗಿದ್ದು ಸಂಜೆ ಮನೆ ಸಮೀಪದ ಅಂಗಡಿ ಬಳಿ ಕುಳಿತಿದ್ದ ಗಣೇಶ್(42) ಜೊತೆ ಜಗಳ ತೆಗೆದು ಹಲ್ಲೆ ಮಾಡಿ, ಕೊಲೆ ಮಾಡಿದ ಆತ ಪರಾರಿಯಾಗಿರುವ ಬಗ್ಗೆ ಪ್ರಕರಣ...