Home ಸ್ಥಳೀಯ ಸಮಾಚಾರ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ತರಬೇತಿ ಸಮಾರೋಪ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ತರಬೇತಿ ಸಮಾರೋಪ

16
0

ಉಜಿರೆ : ನೀವು ಮಾಡುವ ಉದ್ಯಮದಲ್ಲಿ ಅದನ್ನು ನಡೆಸುವಾಗ ಎಲ್ಲ ರೀತಿಯಲ್ಲಿ ಸಮತೋಲನ ಕಾಯ್ದುಕೊಂಡು ಮುಂದುವರೆಯಬೇಕು. ಜೊತೆಯಲ್ಲಿ ಇತರರು ನಿಮಗೆ ಸ್ಪೂರ್ತಿದಾಯಕ ವಾದ ಪ್ರೋತ್ಸಾಹ ನೀಡುತ್ತಾ ಇದ್ದರೆ ಹಾಗೂ ನಿಮ್ಮ ಪ್ರಯತ್ನ ಕೊಡಿಕೊಂಡರೆ ಖಂಡಿತವಾಗಿ ನೀವು ಯಶಸ್ವಿಯಾಗಿ ಉದ್ಯಮ ನಡೆಸಬಹುದು. ಇದಕ್ಕೆ ಪೂರಕವಾಗಿ ಪರಮ ಪೂಜ್ಯ ಡಾ|.ಡಿ.ವೀರೇಂದ್ರ ಹೆಗ್ಗಡೆಯವರು ದೂರ ದೃಷ್ಟಿ ಈ ರುಡ್ ಸೆಟ್ ಸಂಸ್ಥೆ ಯು ನಿಮಗೆ ನಿರಂತರವಾಗಿ ನಿಮ್ಮ ಹಿಂದೆ ಇದ್ದು ಮಾಹಿತಿ-ಮಾರ್ಗದರ್ಶನ ನೀಡುತ್ತದೆ. ಬಹುಶ ಇಂದು ಇಡೀ ದೇಶದಲ್ಲಿ ರುಡ್ಸೆಟ್ ಸಂಸ್ಥೆಯ ಮೂಲಕ ತರಬೇತಿ ಪಡೆದ ಕೋಟ್ಯಂತರ ಯುವಜನರು ಯಶ್ವಸಿಯಾಗಿ ಉದ್ಯಮಶೀಲರಾಗಿದ್ದಾರೆ. ಇದು ಗ್ರಾಮೀಣ ಭಾಗ ಮಹಿಳೆಯರಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ|. ವಿಶ್ವನಾಥ ಪಿ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 06 ದಿನಗಳ ಕಾಲ ನಡೆದೆ *ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶಯದಂತೆ ನಡೆದ ಈ ತರಬೇತಿ ನಿಮಗೆ ಹೆಚ್ಚು ಉಪಯೋಗವಾಗಲಿ ಎಂದು ಶುಭ ಹಾರೈಸಿದರು.

ರುಡ್ ಸೆಟ್ ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಅವರು ತರಬೇತಿಯ ಹಿನ್ನೋಟ ನೀಡಿ, ಸ್ವಾಗತಿಸಿದರು. ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಕೆ.ಕರುಣಾಕರ ಜೈನ್* ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶಿಭಿರಾರ್ಥಿ ಶ್ರೀಮತಿ ಸೌಮ್ಯ, ಕುಮಾರಿ ನೇಹಾ, ಶ್ರೀಮತಿ ಚೇತನಾ, ಕುಮಾರಿ ಚೈತ್ರ ಅವರುಗಳು ಪ್ರಾರ್ಥನೆ ನೇರವೇರಿಸಿದರು. ಶ್ರೀಮತಿ ಸೌಮ್ಯಲತಾ, ಶ್ರೀಮತಿ ಸುನೀತ, ಕುಮಾರಿ ಸಮೀನಾ ತರಬೇತಿಯ ಅನುಭವ ಹಂಚಿ ಕೊಂಡರು.

LEAVE A REPLY

Please enter your comment!
Please enter your name here