ಬೆಳ್ತಂಗಡಿ; ತಲೆಮರೆಸಿ ಕೊಂಡಿರುವ ವಿಠಲಗೌಡನಿಗಾಗಿ ಪೊಲೀಸರಿಂದ ವಿವಿದೆಡೆ ಶೋಧ
ಬೆಳ್ತಂಗಡಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಗೆ ಒಳಗಾದ ಬಳಿಕ ತಲೆ ಮರೆಸಿಕೊಂಡಿರುವ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ವಿಠಲ ಗೌಡ ಅವರ ಬಂಧನಕ್ಕೆ ಪೊಲೀಸರು ಜೂ.27ರಂದು ಬೆಳ್ತಂಗಡಿ ತಾಲೂಕಿನ ವಿವಿದೆಡೆ ವ್ಯಾಪಕ ಶೋಧ ನಡೆಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾತಾಡಿದ ವಿಠಲ ಗೌಡ ಅವರಿಗೆ ಬೆಂಗಳೂರು ನ್ಯಾಯಾಲಯ ಒಂದು ತಿಂಗಳ ಸಜೆ ವಿಧಿಸಿ ನಾಲ್ಕು ತಿಂಗಳ...
ಬೆಳ್ತಂಗಡಿ; ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಮಾತೃವೇದಿ ವತಿಯಿಂದ ಪಡಂಗಡಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಹಾಯಧನ ವಿತರಣೆ
ಬೆಳ್ತಂಗಡಿ: ಸೀರೋ ಮಲಬಾರ್ ಮಾತೃವೇದಿ ಸಂತ ಲಾರೆನ್ಸ್ ಪ್ರಧಾನ ದೇವಾಲಯ ಬೆಳ್ತಂಗಡಿ ಇದರ ವತಿಯಿಂದ ಸರಕಾರಿ ಉನ್ನತೀಕರಿಸಿದ ಪ್ರಥಮಿಕ ಶಾಲೆ ಪಡಂಗಡಿಯಲ್ಲಿ "ವಿದ್ಯಾದೀಪ" ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾಸಮವಸ್ತ್ರ ಸಹಾಯಧನ ವಿರತಣೆ ಕಾರ್ಯಕ್ರಮ ನಡೆಯಿತು.ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರ ಸಹಾಯಧನವಾಗಿ ರೂ 12,000 ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾತೃವೇದಿ ಸಂಘಟನೆಯ ನಿರ್ದೇಶಕರಾದ ಫಾ. ಜೋಬಿ ಪುಲ್ಲಾಟ್, ಸಂತ ಲಾರೆನ್ಸ್ ಪ್ರಧಾನ ದೇವಾಲಯ ಬೆಳ್ತಂಗಡಿ ಇಲ್ಲಿನ ಧರ್ಮಗುರುಗಳಾದ ಫಾ.ಜೋಸ್ ಆಯಾಂಕುಡಿ ಹಾಗೂ ಮಾತೃವೇದಿ ಸಂಘಟನೆಯ ಪದಾಧಿಕಾರಿಗಳು,ಶಾಲಾ ಮುಖ್ಯೋ ಪಾಧ್ಯಾಯರು, ಎಸ್.ಡಿ.ಎಂ ಸಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.
ಬೆಳ್ತಂಗಡಿ: ಒಕ್ಕಲಿಗ ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಕೆಂಪೇಗೌಡ ಜಯಂತಿ
ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಯುವ ವೇದಿಕೆಯ ನೇತೃತ್ವದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೆಂಪೇಗೌಡ ಜಯಂತಿ ಆಚರಣೆ, ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜೂ. 27ರಂದು ಲಾಯಿಲ ಸಂಗಮ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ಅಧ್ಯಕ್ಷ ಕೆ. ಗಂಗಾಧರ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೆಂಪೇಗೌಡರ ದೂರದೃಷ್ಟಿ ಸ್ಮರಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ತಂಗಡಿ ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ...
ಬೆಳ್ತಂಗಡಿ:ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಪುಸ್ತಕ ಪ್ರದರ್ಶನ ಮತ್ತು ಮಾರಾಟ
ಬೆಳ್ತಂಗಡಿ; ಗುರುವಾಯನಕೆರೆ ಶ್ರೀ ಶಾರದಾ ಕಲಾಮಂಟಪ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ಇದರ ಸಹಯೋಗದೊಂದಿಗೆ ಜೂನ್ 26ರಿಂದ 28 ರವರೆಗೆ ನಡೆಯುವ ಗ್ರಾಮೀಣ ಮಟ್ಟದ ಪುಸ್ತಕೋತ್ಸವ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀನಾಥ್ ಎಂ ಪಿ ಮಾತನಾಡಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕ ಓದುವವರು ವಿರಳವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಆಯೋಜನೆಗೊಂಡಿರುವುದು ಶ್ಲಾಘನೀಯವಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ...
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ – ಡ್ರಗ್ ಸರಬರಾಜು ಮಾಡುತ್ತಿದ್ದ ಆರೋಪಿಯ ಬಂಧನ
ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಖರೀದಿಸಿ ಮಂಗಳೂರು ನಗರಕ್ಕೆ ತಂದು ಕುಳಾಯಿ ಗುಡ್ಡೆ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಸುರತ್ಕಲ್ ನಿವಾಸಿ ಅಣ್ಣಪ್ಪ ಸ್ವಾಮಿ @ ಮನು ಎಂಬಾತನಾಗಿದ್ದಾನೆ.ಈತ ಮಾದಕವಸ್ತುಗಳ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜೂ 25 ರಂದು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು ₹1,50,000 ಮೌಲ್ಯದ 15 ಗ್ರಾಂ ಎಂಡಿಎಂಎ ಹಾಗೂ ಮೊಬೈಲ್...
ಜಂಇಯ್ಯತುಲ್ ಉಲಮಾ ಶತಮಾನೋತ್ಸವ; ಗುರುವಾಯನಕೆರೆ ಯಲ್ಲಿ ಧ್ವಜಾರೋಹಣ
ಬೆಳ್ತಂಗಡಿ; ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಶತಮಾನೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಜೂ.26 ರಂದು ಜುಮಾ ನಮಾಝ್ ಬಳಿಕ ಗುರುವಾಯನಕೆರೆ ಮಸ್ಜಿದ್ ಮತ್ತು ದರ್ಗಾಶರೀಫ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.ಧ್ವಜಾರೋಹಣವನ್ನು ಜಮಾತ್ ಖತೀಬ್ ಅಬ್ದುಲ್ ಬಾರಿ ಸಅದಿ ನೇರವೇರಿಸಿದರು.ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್‌ವೈಎಸ್ ಸರ್ಕಲ್ ಅಧ್ಯಕ್ಷ ಹಾಜಿ ಹಸೈನಾರ್ ಶಾಫಿ, ಎಸ್‌ಎಮ್‌ಎ ಅಧ್ಯಕ್ಷ ಉಮರಬ್ಬ, ಆದಂ ಸಾಹೇಬ್, ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಅಶ್ರಫ್, ಯುನಿಟ್ ಯುನಿಟ್ ಕಾರ್ಯದರ್ಶಿ ಉಸ್ಮಾನ್ ಅಲಾದಿ, ಸ್ಥಳೀಯ ಮಸೀದಿಯ...
ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ
ಬೆಳ್ತಂಗಡಿ, ಜೂ.26: ಪರಿಶ್ರಮ ಹಾಗೂ ಪರಿವರ್ತನೆಯಿಂದ ನೀವು ಅಂದುಕೊಂಡ ಗುರಿ ನಿಮ್ಮೆಡೆಗೇ ಸಾಗಿ ಬರಬಹುದು. ಸಿಎ ಓದುವ ಹಂತದಲ್ಲಿ ನಿಖರ ಹಾಗೂ ನಿರಂತರ ಅಭ್ಯಾಸ ಬಹಳ ಮುಖ್ಯವಾಗಿದೆ. ಪಠ್ಯ ಅಧ್ಯಯನ, ಸೂಕ್ತ ಮಾರ್ಗದರ್ಶನ, ಅವೆಲ್ಲಕ್ಕಿಂತ ಮಿಗಿಲಾಗಿ ಸಂಶೋಧನಾತ್ಮಕ ಅಭ್ಯಾಸ ಅತ್ಯಗತ್ಯವಾಗಿದೆ ಎಂದು ಯುವ ಲೆಕ್ಕ ಪರಿಶೋಧಕಿ (ಸಿಎ) ನಿರೀಕ್ಷಾ ನಾವರ ಅಭಿಪ್ರಾಯ ಪಟ್ಟರು. ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜೂ.25 ರಂದು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಸಿಎ...
ಸ್ನೇಹಕಿರಣ ಜಿಲ್ಲಾ ಮಹಿಳಾ ಒಕ್ಕೊಟ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ
ಬೆಳ್ತಂಗಡಿ; ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಒಕ್ಕೂಟ ಬಲವರ್ಧನೆ ತರಬೇತಿಯನ್ನು ದಿನಾಂಕ ಜೂ 25 ರಂದು ಸಾನ್ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಒಕ್ಕೂಟದ ಅಧ್ಯಕ್ಷರಾದ ಎಲಿಯಮ್ಮ ತೋಮಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊರವರು ಒಕ್ಕೂಟಗಳ ಸದಸ್ಯರು ನಾಯಕತ್ವ ವಹಿಸಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕರಾದ ಫಾ. ಆದರ್ಶ್ ಪಿ.ಎಸ್...
ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ
ಬೆಳ್ತಂಗಡಿ; ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಶಾಸಕರಾದ ಶ್ರೀ ಹರೀಶ್ ಪೂಂಜರವರ ನೇತೃತ್ವದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಸಾರ್ವಜನಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ "ಶ್ರಮಿಕ ಪ್ರತಿಭಾ ವಿದ್ಯಾರ್ಥಿ" ಸನ್ಮಾನ ಕಾರ್ಯಕ್ರಮವನ್ನು ಜೂನ್ 28, ಭಾನುವಾರ ಮೂರು ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಪೂರ್ವಾಹ್ನ: 9.00 - ಸ್ವರಾಜ್ ಟವರ್ಸ್ ಸಭಾಭವನ ಅಳದಂಗಡಿ(ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ - ಗ್ರಾಮಗಳು: ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು,...
ಬೆಳ್ತಂಗಡಿ; ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹಲವರಿಗೆ ಗಾಯ
ಬೆಳ್ತಂಗಡಿ; ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಜೂ. 26 ರಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.ಮುಂಜಾನೆ ಸುಲ್ಕೇರಿ ಗ್ರಾಮದಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸುಜುಕಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾಂಕ್ರೀಟ್ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಾನೆಟ್, ಬಂಪರ್, ಇಂಜಿನ್ ಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನ ಹಳದಿ...















