ವೇತನ ಏರಿಕೆಗೇ ಆಗ್ರಹಿಸಿ ಅಕ್ಷರದಾಸೋಹ ನೌಕರರಿಂದ ಸರಕಾರಕ್ಕೆ ಆಗ್ರಹ ಪತ್ರ
ಬೆಳ್ತಂಗಡಿ; ಅಕ್ಷರ ದಾಸೋಹ ನೌಕರರಿಗೆ ಕಳೆದ 15 ವರ್ಷಗಳಿಂದ ಕೇಂದ್ರ ಸರಕಾರ ಒಂದು ರೂಪಾಯಿ ಸಂಬಳ ಏರಿಸದೇ ಮಹಿಳಾ ಕಾರ್ಮಿಕರಿಗ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಹೇಳಿದರು.ಅವರು ಇಂದು ಅಕ್ಷರದಾಸೋಹ ನೌಕರರು ಭಾರತ ದೇಶದಾದತ ನಡೆಸುತ್ತಿರುವ ಕರಾಳ ದಿನದ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ನೀಡಿ ಮಾತಾಡುತ್ತಿದ್ದರು. ಕನಿಷ್ಟ ನ್ಯಾಯಯುತ ವೇತನ, ಸವಲತ್ತುಗಳನ್ನು ಕೊಡಲಾಗದ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಈ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ರಾಮ ಮಂದಿರದಲ್ಲಿ ಕೊಟ್ಯಾಂತರ ಹಣ...
41 ಬಾರಿ ದಸ್ತಗಿರಿ ವಾರೆಂಟ್ ಅದೇಶವಾಗಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು
ಬೆಳ್ತಂಗಡಿ: ಪುತ್ತೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು 41 ಬಾರಿ ದಸ್ತಗಿರಿ ವಾರೆಂಟ್ ಅದೇಶವಾಗಿದ್ದ ಆರೋಪಿಯನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಕೇರಳ ತ್ರಿಶೂರ್ ನಿವಾಸಿ ನೆಲ್ಸನ್ ಸಿ.ವಿ (38) ಎಂಬಾತನಾಗಿದ್ದಾನೆ. ಪ್ರಕರಣದ ಹಿನ್ನಲೆ;ದಿನಾಂಕ 22.12.2017 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮೂರು ಜನ ಅಪರಿಚಿತ ವ್ಯಕ್ತಿಗಳು ನುಗ್ಗಿ ಮನೆಯಲ್ಲಿದ್ದವರಿಗೆ ಪಿಸ್ತೂಲ್ ಮತ್ತು ಚೂರಿಯನ್ನು ತೋರಿಸಿ ಸುಮಾರು ರೂ 2,88,000/- ಅಂದಾಜು ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ರೂ 60,0000/- ನಗದು ಹಣವನ್ನು...
ಬೆಳ್ತಂಗಡಿ ತಹಶೀಲ್ದಾರ್ ಆಗಿ ಎಸ್.ಎನ್. ನರಗುಂದ ಅಧಿಕಾರ ಸ್ವೀಕಾರ
ಬೆಳ್ತಂಗಡಿ : ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆಯಾದ ಜಾಗಕ್ಕೆ ಹೊಸ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅವರನ್ನು ಸರಕಾರ ನೇಮಕ ಮಾಡಿ ಜು.2 ರಂದು ಆದೇಶ ಹೊರಡಿಸಿತ್ತು. ಇದೀಗ ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಗ್ರೇಡ್-1 ತಹಶೀಲ್ದಾರ್ ಆಗಿರುವ ಎಸ್.ಎನ್.ನರಗುಂದ ಅವರು ಬೆಳ್ತಂಗಡಿ ತಹಶೀಲ್ದಾರ್ ಕಚೇರಿಯಲ್ಲಿ ಜು.9 ರಂದು ಅಧಿಕಾರ ಸ್ವೀಕರಿಸಿಕೊಂಡರು. ಈ ಹಿಂದೆ ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹೆಚ್. ಡಿ. ಕೋಟೆ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು.
ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಳ್ತಂಗಡಿ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಆರೋಪಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಂಗಳೂರು ಪೋಕ್ಸೋ ನ್ಯಾಯಾಲಯ ಆದೇಶ ಮಾಡಿದೆ. ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಬಗ್ಗೆ 3-11-2025 ರಂದು ಕಲಂ 376(2)(n) 506 IPC ಹಾಗೂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಮಂಗಳೂರು ನಗರ ಗುರುಪುರದ ಅಡ್ಡೂರು ನಿವಾಸಿ ಆಫ್ರಿದ್ @ ಅಪ್ಪಿ(21)...
ತೆಕ್ಕಾರು ಹಿಟಾಜಿ ತುಂಬಿದ್ದ ಟಿಪ್ಪರ್ ಪಲ್ಟಿ
ಬೆಳ್ತಂಗಡಿ; ತೆಕ್ಕಾರು ಭಟ್ರಬೈಲು ಶ್ರೀ ದೇವರಗುಡ್ಡೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳು ರಸ್ತೆಮಧ್ಯೆ ಹಿಟಾಚಿ ತುಂಬಿದ್ದ ಟಿಪ್ಪರ್ ವಾಹನ ಪಲ್ಟಿಯಾಗಿದ್ದು ಟಿಪ್ಪರ್ಚಾಲಕ ಮತ್ತು ಹಿಟಾಚಿ ಅಪರೇಟರ್ ಪ್ರಾಣಪಾಯದಿಂದ ಪರಾದ ಘಟನೆ ಜು. 9 ರಂದು ನಡೆದಿದೆ. ದೇವಸ್ಥಾನ ಕಡೆಯಿಂದ ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಬೆಳ್ತಂಗಡಿ; ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಪಣಕಜೆ ಸಮೀಪ ಸಬರಬೈಲು ಎಂಬಲ್ಲಿ ಮಡಂತ್ಯಾರಿನಿಂದ ಬೆಳ್ತಂಗಡಿ ಕಡೆಗೆ ಸಂಚಾರಿಸುತ್ತಿದ್ದ ಕಾರೊಂದು ನಿಯತ್ರಂಣ ತಪ್ಪಿ ಪಲ್ಟಿಯಾದ ಘಟನೆ ಜು. 9 ರಂದು ನಡಿದಿದೆ. ಕಾರು ಪಲ್ಟಿಯಾದ ಪರಿಣಾಮ ಗಾಜುಗಳು ಹುಡಿಯಾಗಿದ್ದು ಕಾರು ನಜ್ಜುಗುಜ್ಜುಗೊಂಡಿದ್ದು, ಕಾರು ವಾಪಸ್ ಮಡಂತ್ಯಾರು ಕಡೆಗೆ ತಿರುಗಿ ನಿಂತಿದ್ದು ಕಾರಿನಲ್ಲಿದ್ದ ಮೂವರು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ.
ಬೆಳ್ತಂಗಡಿ : ನಗರದಲ್ಲಿ ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು
ಬೆಳ್ತಂಗಡಿ : ನಗರದ ಮೂರುರ್ಮಾಗದ ಬಳಿಯಿಂದ ಹಾಗೂ ಕೋರ್ಟ್ ರಸ್ತೆಯವರೆಗೆ ಮೇ. 19 ರಂದು ತಡರಾತ್ರಿ 11 ಕಡೆಗಳಲ್ಲಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬೆಳ್ತಂಗಡಿ ಪೊಲೀಸರು 50 ದಿವಸದ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಈತ ಉಪ್ಪಿನಂಗಡಿ ಹಾಗೂ ಸುರತ್ಕಲ್ ನಲ್ಲಿ ಆತ ಸರಣಿ ಕಳ್ಳತನ ನಡೆಸಿರೋದು ಬೆಳಕಿಗೆ ಬಂದಿದೆ.ಆರೋಪಿ ಬಂಧನ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8...
ಮುಂಡಾಜೆ ಕಾರುಗಳ ಮುಖಾಮುಖಿ ಡಿಕ್ಕಿ ಆರು ಮಂದಿಗೆ ಗಾಯ
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಡಾಜೆ ಗ್ರಾಮದ ಸೀಟ್ ಕಾಡ್ ಬಳಿ ಗುರುವಾರ ಬೆಳಿಗ್ಗೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದು ಎರಡೂ ವಾಹನಗಳು ನುಜ್ಜುಗುಜ್ಜಾಗಿದೆ.ಜು. 9 ರಂದು ಬೆಳಿಗ್ಗೆ ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎರಡು ಕಾರುಗಳು ಸೀಟ್ ಕಾಡ್ ಬಳಿ ಪರಸ್ಪರ ಡಿಕ್ಕಿ ಹೊಡೆದಿವೆ. ಅಪಘಾತದ ತೀವ್ರತೆಗೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ.ಈ ಅಪಘಾತದಲ್ಲಿ ಕಾರುಗಳಲ್ಲಿದ್ದ ಆರು ಮಂದಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು ಕಾವೂರು ಮೂಲದವರಾದ ವಿನಿತಾ (22), ಗೌರಮ್ಮ (49) ಮತ್ತು ಕೊಟ್ರೆಗೌಡ...
ಬೆಳ್ತಂಗಡಿ; ಬಿ.ಎಲ್ ಒ ಗೆ ಜಾತಿ ನಿಂದನೆ ಪ್ರಕರಣ ಆರೋಪಿಗೆ ಷರತ್ತು ಬದ್ದ ಜಾಮೀನು
ಬೆಳ್ತಂಗಡಿ: ಶಿರ್ಲಾಲಿನಲ್ಲಿ ಎಸ್. ಐ. ಆರ್ ಕಾರ್ಯನಿರತ ಬಿ. ಎಲ್. ಓ. ಗೆ ಜಾತಿ ನಿಂದನೆ ಮಾಡಿರುವು ಪ್ರಕರಣ ಆರೋಪಿ ಮಹಿಳೆ ಯಶೋಧಾ ಆಚಾರಿಗೆ (60) ಮಂಗಳೂರಿನ ಸೆಕ್ಷನ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿ ಬಿಡುಗಡೆಗೊಳಿಸಿರುವ ಬಗ್ಗೆ ಜು.8 ರಂದು ಸಂಜೆ ನಡೆದಿದೆ.ಏನಿದು ಪ್ರಕರಣ:ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ ಆಗಿ ಕೆಲಸ ಮಾಡುತ್ತಿದ್ದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎ.ಎಲ್.ಒ ಮಾಧವ ಎಂಬರೊಂದಿಗೆ ಜು.6 ರಂದು ಬೆಳಗ್ಗೆ 11:30 ಕ್ಕೆ ಮನೆಯ ಅಂಗಳಕ್ಕೆ […]
ಬೆಳ್ತಂಗಡಿ ಜನತೆಯ ಪ್ರತಿ ಮನೆಯ ಮನ ಮುಟ್ಟಿದ ಶಾಸಕ ಹರೀಶ್ ಪೂಂಜಾ ರವರಿಗೆ ಇಂದಬೆಟ್ಟು ಕಾರ್ಯಕರ್ತರಿಂದ ಗೌರವ ಅರ್ಪಣೆ.
ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಜನಪ್ರಿಯ BEST MLA ಶ್ರೀ ಹರೀಶ್ ಪೂಂಜಾ ರವರಿಗೆ ಜುಲೈ 07 ರಂದು ಸ್ವಗೃಹ ಮಿಥಿಲಾ ದಲ್ಲಿ ಗೌರವಾರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು ಇವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಲ್ಲಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಶಾಸಕ ಹರೀಶ್ ಪೂಂಜಾ ರವರ ಅವಿರತ ಶ್ರಮದ ಫಲ, ಬೆಳ್ತಂಗಡಿ ಕ್ಷೇತ್ರದ ಪ್ರತಿ ಗ್ರಾಮದ ಜನತೆಯ...















