


ಬೆಳ್ತಂಗಡಿ:ಧರ್ಮಸ್ಥಳ ಸಮೀಪದ ಮುಳಿಕ್ಕಾರು ಎಂಬಲ್ಲಿ ಕಳೆದ ಎರಡು ದಿನಗಳಿಂದ ದಾಳಿ ನಡೆಸುತ್ತಿರುವ ಕಾಡಾನೆಗಳು ಭತ್ತದ ಪೈರನ್ನು ನಾಶ ಮಾಡಿವೆ.
ಇಲ್ಲಿನ ಶೀನ ಬಾಜಿದಡಿ ಎಂಬವರ ಮನೆ ಹಾಗೂ ಪರಿಸರದ ಗದ್ದೆಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು ಕಟಾವಿನ ಹಂತಕ್ಕೆ ಬಂದಿದ್ದ ಪೈರನ್ನು ನಾಶ ಮಾಡಿವೆ. ಆನೆಗಳು ಗದ್ದೆಯಲ್ಲಿ ಓಡಾಟ ನಡೆಸಿದ ಕಾರಣ ಬೆಳೆದು ನಿಂತಿರುವ ಪೈರಿಗೆ ಸಾಕಷ್ಟು ಹಾನಿ ಉಂಟಾಗಿದೆ.
ಮುಳಿಕ್ಕಾರು ಪರಿಸರದಲ್ಲಿ ಮರಿಯಾನೆ ಸಹಿತ ಕಾಡಾನೆಗಳು ಆಗಾಗ ಕಂಡುಬರುತ್ತಿದ್ದು ಕಳೆದ ಕೆಲವು ದಿನಗಳಿಂದ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದು, ಇಲ್ಲಿನ ತೋಟಗಳಲ್ಲಿ ಸಾಕಷ್ಟು ಹಾನಿ ಉಂಟು ಮಾಡುತ್ತಿವೆ.
