ಧರ್ಮಸ್ಥಳ: ಜೋಡುಸ್ತಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗಡೆ ರಸ್ತೆ ಎಂದು ನಾಮಕರಣ.
ಧರ್ಮಸ್ಥಳ :- ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯಂತೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ರಸ್ತೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ನಾಮಫಲಕವನ್ನು ಅನಾವರಣ ಮಾಡಿದರು.ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪರಮೇಶ್ವರ್, ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ್ ರಾವ್, ಸದಸ್ಯರಾದ ಶ್ರೀ ಮುರಳಿಧರ ದಾಸ್, ಶ್ರೀ ದಿನೇಶ್ ರಾವ್, ಶ್ರೀ ರಾಮಚಂದ್ರರಾವ್, ಶ್ರೀ...
ಇಳಂತಿಲ: ಕಾಂಗ್ರೆಸ್ ಕಾರ್ಯಕರ್ತರ ಸಭೆ ಸರ್ಕಾರದ ಜನಪರ ಯೋಜನೆಗಳನ್ನ ಮನೆ ಮನೆಗೆ ತಲುಪಿಸಿ: ರಕ್ಷಿತ್ ಶಿವರಾಂ
ಬೆಳ್ತಂಗಡಿ; ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಗ್ರಾಮೀಣ ಜನರಿಗೆ ಮಾಡಿರುವ ಮೋಸದ ವಿರುದ್ಧ ಮುಂಬರುವ ದಿನಗಳಲ್ಲಿ ನಡೆಸಲಾಗುವ ಹೋರಾಟದ ರೂಪರೇಷೆ, ಗ್ರಾಮದಲ್ಲಿ ಆಗಬೇಕಾಗಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವ ಸಲುವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಇತ್ತೀಚೆಗೆಇಳಂತಿಲದ ಏಚ್ ಎಂ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಎಂ ಎನ್ ಆರ್ ಈ ಜಿ ಬಚಾವ್ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್ ರವರು...
ಎಸ್.ಡಿ.ಎಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಿಂದ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಭೇಟಿ.
ಬೆಳ್ತಂಗಡಿ, ಜ.23:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ರವರು ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಭೇಟಿ ನೀಡಿ ಅಧ್ಯಕ್ಷರಾದ ಅಕ್ಬರ್ ರವರು ಹಾಗೂ ಸಮಿತಿಯವರೊಂದಿಗೆ ಹೊಸ ವರುಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ಮಾತನಾಡಿ SDM ಸಂಸ್ಥೆಯಲ್ಲಿ ಮಂಗಳೂರಿನಲ್ಲಿ ಸಿಗುವಂತ ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರುಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಮ್ ಆರ್ ಐ ಸ್ಕೇನಿಂಗ್ ಈಗಾಗಲೇ ಉಚಿತ ಡಯಾಲಿಸೀಸ್ ಸೌಲಭ್ಯಗಳು ಒದಗಿಸಲಿದ್ದೇವೆ. ಈಗಾಗಲೇ ಹೃದಯ ಸಂಬಂಧಿ...
ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಮನವಿ
ಬೆಳ್ತಂಗಡಿ: ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘದ ಹೋರಾಟ ಸಮಿತಿ ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತ ಸದಸ್ಯರುಗಳು ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚಿಸುವುದಾಗಿ ಕಳೆದ ಸಹಕಾರಿ ಚುನಾವಣೆಯಲ್ಲಿ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ನಂತರ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಪ್ರಕ್ರಿಯೆಯನ್ನು ಪ್ರಾರಂಭಿಸದೇ ಇರುವುದನ್ನು ವಿರೋಧಿಸಿ ಇಂದು ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತರು ಒಟ್ಟು ಸೇರಿ ಒಂದು ತಿಂಗಳ ಒಳಗೆ ನಮಗೆ ಉತ್ತರ ಕೊಡಬೇಕೆಂದು ಅಳದಂಗಡಿ ಕೃಷಿ...
ಹಟ್ಟಿಗೆ ನುಗ್ಗಿ ಕರುವನ್ನು ಕೊಂದ ಚಿರತೆ
ಬೆಳ್ತಂಗಡಿ:ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕೊಂದು ಹಾಕಿದ ಘಟನೆಮರೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಪೆರಾಡಿಯ ಬೈಲೋಡಿ ಆನಂದ ಶೆಟ್ಟಿಯವರ ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ಮಾಡಿದ ಚಿರತೆ ಕರುವನ್ನು ಎಳೆದೊಯ್ದು ಕೊಂದು ಹಾಕಿದೆ.ಘಟನೆಯ ವಿಚಾರ ತಿಳಿದ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಧರ್ಮಸ್ಥಳ ಪ್ರಕರಣ ವಿಚಾರಣೆ ಫೆ.5ಕ್ಕೆ ಮುಂದೂಡಿಕೆ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.23 ರಂದು ವಿಚಾರಣೆ ನಡೆದಿದ್ದು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮತ್ತೆ ಫೆ.5 ಕ್ಕೆ ಮುಂದೂಡಿದ್ದಾರೆ.ಬಂಟ್ಬಾಳದ ಪ್ರಭಾರ ನ್ಯಾಯಾಧೀಶರಾದ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿರುವ ರಾಜೇಂದ್ರ ಪ್ರಸಾದ್ ಅವರು ಪ್ರಕರಣದ ವಿಚಾರಣೆ ನಡೆಸಿದರು.ಎಸ್.ಐ.ಟಿ ನೀಡಿರುವ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಾವು ಸಂತ್ರಸ್ತರಾಗಿದ್ದು ತಮ್ಮನ್ನೂ ಕಕ್ಷಿದಾರರಾಗಿಸಬೇಕು ಎಂದು ಶ್ರೀ ಕ್ಷೆತ್ರ ಧರ್ಮಸ್ಥಳ ಪರವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಯಿತು ಈಅರ್ಜಿಗೆ ಮಹೇಶ್ ಶೆಟ್ಟಿ ಪರ ವಕೀಲರು...
ಚಾರ್ಮಾಡಿ ಘಾಟಿಯಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪದ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್ ಗಳಿಂದ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಿರುವಿನಲ್ಲಿ ಉರುಳಿದೆ.ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಯಿತು.
ಮರೋಡಿಯಲ್ಲಿ ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರು ಆರೋಪಿಗಳಿಗೆ ಥಳಿಸಿ ಮರಕ್ಕೆ ಕಟ್ಟಿದ ಹಾಕಿದ ಸಾರ್ವಜನಿಕರು ಎರಡೂ ಕಡೆಯವರ ವಿರುದ್ದ ಪ್ರಕರಣದಾಖಲು
ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಮುಗ್ಗ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರಾದ 8 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎರಡೂ ಪ್ರಕರಣಗಳಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ವರದಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ...
ಬೆಳ್ತಂಗಡಿ :ಮನೆಯಿಂದ ಹೋದ ವೃದ್ಧ ನಾಪತ್ತೆ
ಬೆಳ್ತಂಗಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊಕ್ರಾಡಿ ಎಂಬಲ್ಲಿ ಒಬ್ಬರೇ ವಾಸವಾಗಿದ್ದ ರಾಘು ಶೆಟ್ಟಿ @ ಅನ್ನೋಜಿ(70) ಎಂಬವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರು ಆಸ್ಪತ್ರೆಯಿಂದ ಔಷದಿ ಇದ್ದು. ಕಳೆದ ಒಂದೂವರೆ ವರ್ಷಗಳಿಂದ ಕೊಕ್ರಾಡಿ ಚಿಕ್ಕಪ್ಪನೊಂದಿಗೆ ವಾಸವಾಗಿದ್ದರು. ಜ.18 ರಂದು ಸಂಜೆ 3 ಗಂಟೆಗೆ ಯಾರು ಇಲ್ಲದ ವೇಳೆಗೆ ಮನೆಯಿಂದ ಹೊರಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ...
29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದುಂಡುಪಾಳ್ಯ ಗ್ಯಾಂಗ್ ನ ಆರೋಪಿಯ ಬಂಧನ
ಮಂಗಳೂರು, ದಂಡುಪಾಳ್ಯ ಗ್ಯಾಂಗ್ ನ ಆರೋಪಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ(55) ನನ್ನು ಮಂಗಳೂರಿನ ಉರ್ವ ಠಾಣೆಯ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿ ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ರ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ. "ದಂಡುಪಾಳ್ಯ ಗ್ಯಾಂಗ್" ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ನನ್ನು ಆಂದ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳಿ ಎಂಬಲ್ಲಿ ಉರ್ವ ಠಾಣಾ...















