ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರಾಗಿ ಅಶ್ರಫ್ ನೆರಿಯ
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ರಾಗಿಆಯ್ಕೆಯಾದ ಬಿ ಅಶ್ರಫ್ ನೆರಿಯ ಇವರಿಗೆ ಪುತ್ತೂರಿ ನಲ್ಲಿ ನಡೆದ ಪಧಾಧಿಕಾರಿಗಳ ಗ್ರಹಣ ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಯವರು ಆದೇಶ ಪತ್ರ ನೀಡಿದರು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮನಾಥ ರೈ ಕೆ ಪಿ ಸಿ ಸಿ ಯ ಸುದೀರ್ ಕುಮಾರ್ ಮರೋಳಿಮುನೀರ್ ಜನ್ಸಾಲೆಶಾಹುಲ್ ಹಮೀದ್ ಕೆ ಕೆ.ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಮಹಮ್ಮದ್ ಅಲಿಉಪಸ್ಥಿತರಿದ್ದರು.
ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಎಂಡೋ ಪೀಡಿತ ಮಗುವಿನ ನೆರವಿಗೆ ಪೆನ್ನು ಮಾರಾಟ
ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ 584ನೇ ಸೇವಾ ಯೋಜನೆಗೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.ಬೆಳ್ತಂಗಡಿ ತಾಲೂಕು ಗರ್ಡಾಡಿ ನಿವಾಸಿಯಾದ ಉಮಾವತಿಯವರ 4ವರ್ಷದ ಮಗಳಾದ ಪ್ರಜ್ಞಾ ಕೆ. ಎಂಡೋಸಲ್ಫಾನಿಂದ ಬಳಲುತ್ತಿರುವ ಮಗುವಾಗಿದ್ದು ಈ ಮಗುವಿನ ಪ್ರತಿ ತಿಂಗಳ ಆರೋಗ್ಯದ ಚಿಕಿತ್ಸೆಯ ಸಹಾಯಕ್ಕಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪೆನ್ನು ಮಾರಾಟ ಮಾಡುವ ಅಭಿಯಾನಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ರವರು ಚಾಲನೆ ನೀಡಿದರು. ಸಂಘಟನೆಯ ಸ್ಥಾಪಕಾಧ್ಯಕ್ಷ ದೀಪಕ್ ಜಿ ಬೆಳ್ತಂಗಡಿ ಹಾಗೂ ಇತರರು ಇದ್ದರು.
ನಾವೂರು ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದಲ್ಲಿ ಯುವಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.15 ರಾತ್ರಿ ನಡೆದಿದೆ. ನಾವೂರು ಬೋಲೋಟ್ಟು ಮನೆಯ ರಕ್ಷಿತ್ (28ವ) ಆತ್ಮಹತ್ಯೆ ಮಾಡಿಕೊಂಡ ಯುವಕ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ
ನೆಲ್ಯಾಡಿ ಕೆ.ಸಿ ವರ್ಗೀಸ್ ಕೊಲೆ ಪ್ರಕರಣ ಮಗ ಸೇರಿದಂತೆ ಮೂವರ ಬಂಧನ
ಬೆಳ್ತಂಗಡಿ; ನೆಲ್ಯಾಡಿಯಲ್ಲಿ ವೃದ್ದ ಕೆ.ಸಿ ವರ್ಗೀಸ್ (73) ಅವರ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದೊಂದು ಕೊಲೆ ಪ್ರಕರಣ ಎಂದು ಖಚಿತ ಪಡಿಸಿದ ಪೊಲೀಸರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಮೃತರ ಮಗ ಹಾಗೂ ಸಂಬಧಿಕರಾದಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51) ಬಂಧಿತರು. ಫೆ.9 ರಂದು ಉಪ್ಪಿನಂಗಡಿ ಠಾಣೆಯಲ್ಲಿ ಕೆ.ಸಿ.ವರ್ಗೀಸ್ ಅವರ ಸಾವಿಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕೆ.ಸಿ ವರ್ಗೀಸ್ ಅವರು ತಲೆಗೆ ಉಂಟಾದ ಗಂಭೀರ...
ಶಾಸಕ ಹರೀಶ್ ಪೂಂಜ ಅವರಿಂದ ಮಲವಂತಿಗೆಯಲ್ಲಿ 4ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಸೇತುವೆ ಉದ್ಘಾಟನೆ
ಬೆಳ್ತಂಗಡಿ; ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಲವಂತಿಗೆ ಗ್ರಾಮದ ಕೊಲ್ಲಿ-ಕಲ್ಬೆಟ್ಟು-ಬಾಳೆಹಿತ್ತಿಲು ರಸ್ತೆ ಕಾಂಕ್ರಿಟೀಕರಣ ಹಾಗೂ ಕಲ್ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಚಂದ್ರ, ಗ್ರಾಮ ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು
ಲಾಯಿಲ ಅಗಳಿ ಪರಿಸರದಲ್ಲಿ ಚಿರತೆ ಓಡಾಟ
ಬೆಳ್ತಂಗಡಿ: ನಡ ಮತ್ತು ಲಾಯಿಲ ಗ್ರಾಮದ ಗಡಿ ಭಾಗವಾದ ಅಗಳಿಯ ಹೇನಡ್ಕ ಪರಿಸರದಲ್ಲಿ ಶನಿವಾರ ರಾತ್ರಿ ಚಿರತೆ ತಿರುಗಾಟ ನಡೆಸಿದೆ.ಒಂದು ದೊಡ್ಡ ಚಿರತೆ ಹಾಗೂ ಮರಿಚಿರತೆ ಸಂಚರಿಸಿರುವ ಹೆಜ್ಜೆಗಳು ರಸ್ತೆಯಲ್ಲಿ ಕಂಡು ಬಂದಿವೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 150ಮೀ. ದೂರದಲ್ಲಿ ಹಾಗೂ ಸ್ಥಳೀಯ ಮನೆಗಳಿಂದ 50 ಮೀ.ಪ್ರದೇಶದಲ್ಲಿ ಚಿರತೆ ಸಂಚಾರ ನಡೆಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಈ ಪರಿಸರದಲ್ಲಿ ಆಗಾಗ ಚಿರತೆಗಳು ತಿರುಗಾಟ ನಡೆಸುವುದು ಮಾಮೂಲಾಗಿದೆ. ಸ್ಥಳೀಯರು ಭಯದಿಂದ ಜೀವನ ನಡೆಸುವಂತಾಗಿದೆ
ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ ಆಮೆಗಳು ಸಮೇತ ನಾಲ್ಕು ಮಂದಿಯ ಬಂಧನ
ಬೆಳ್ತಂಗಡಿ; ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14 ರಂದು ಸಂಜೆ 3:30 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ...
ಮುಂಡಾಜೆ ಗುಡ್ಡಕ್ಕೆ ಬೆಂಕಿ
ಬೆಳ್ತಂಗಡಿ:ತಾಲೂಕಿನ ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆಯ ಮುಂಡಾಜೆ ಗ್ರಾಮದ ಮೈರಣಗುಡ್ಡೆಗೆ ಬೆಂಕಿ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.ಬೆಂಕಿ ಗುಡ್ಡವನ್ನು ವ್ಯಾಪಿಸಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ಹತೋಟಿಯ ಯತ್ನ ಮುಂದುವರಿದಿದೆ. ಬೆಂಕಿ ಆರಿಸುವ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಸುಮಾರು 20 ಅಡಿಯಿಂದ ಜಾರಿ ಬಿದ್ದ ಘಟನೆಯು ನಡೆದಿದ್ದು, ಅದೃಷ್ಟವಶಾತ್ ಗಾಯಗೊಳ್ಳದೆ ಅಪಾಯದಿಂದ ಪಾರಾಗಿದ್ದಾರೆ.ಗುಡ್ಡವನ್ನು ಸುಟ್ಟ ಬೆಂಕಿ ಸಮೀಪದಲ್ಲಿರುವ ರಬ್ಬರ್ ತೋಟಕ್ಕೂ ವ್ಯಾಪಿಸಿದ್ದು ರಬ್ಬರ್ ಗಿಡಗಳಿಗೂ ಹಾನಿ ಉಂಟಾಗಿದೆ. ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದು ಬಂದಿಲ್ಲ
ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸನ್ಮಾನ; ಶ್ರದ್ಧಾ-ಭಕ್ತಿಯಂದಿಗೆ ನಿಸ್ವಾರ್ಥವಾಗಿ ಪಾದಯಾತ್ರೆ ಮಾಡಿದಾಗ ಹೆಚ್ಚಿನ ಫಲ ಡಾ. ಹೆಗ್ಗಡೆ
ಧರ್ಮಸ್ಥಳ: ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಶ್ರದ್ಧಾ-ಭಕ್ತಿಯೊಂದಿಗೆ ಪಾದ ಯಾತ್ರೆಯಲ್ಲಿ ಬಂದ ಸಹಸ್ರಾರು ಭಕ್ತರು ತಮ್ಮಲ್ಲಿರುವ ದೋಷಗಳನ್ನೆಲ್ಲ ಇಲ್ಲೆ ತ್ಯಜಿಸಿ, ಉತ್ತಮ ಆಚಾರ-ವಿಚಾರಗಳೊಂದಿಗೆ ಸಭ್ಯ ನಾಗರಿಕರಾಗಿ ಸಂಸ್ಕಾರಯುತ ಸಾರ್ಥಕ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಶನಿವಾರ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳನ್ನು ಪ್ರವಚನ ಮಂಟಪದಲ್ಲಿ ಅಭಿನಂದಿಸಿ ಮಾತನಾಡಿದರು.ವಿಷಕಂಠನಾದ ಶ್ರೀ ಮಂಜುನಾಥಸ್ವಾಮಿಗೆ ಎಲ್ಲಾ ದೋಷಗಳನ್ನು ಸ್ವೀಕರಿಸಿ ಲೋಕಕಲ್ಯಾಣ ಮಾಡುವ ಶಕ್ತಿ ಇದೆ. ಆದುದರಿಂದಲೇ ಅಪಘಾತದಲ್ಲಿ ಹಾಗೂ ಅಪಮೃತ್ಯುವಿನಲ್ಲಿ ಸತ್ತವರ ಮೋಕ್ಷಪ್ರಾಪ್ತಿಗಾಗಿ ಭಕ್ತರು ಧರ್ಮಸ್ಥಳಕ್ಕೆ...
10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು
ಬೆಳ್ತಂಗಡಿ : ಫೋಕ್ಸೋ ಪ್ರಕರಣದಲ್ಲಿ ಸುಮಾರು ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಯೋಗೀಶ್ ಪೂಜಾರಿ ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ನಡೆದಿದ್ದ ಫೋಕ್ಸೋ ಪ್ರಕರಣದಲ್ಲಿ ಆರೋಪಿ ಬಂಧನವಾದ ಬಳಿಕ ಬಿಡುಗಡೆಯಾಗಿ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಿ, 2015 ರಿಂದ ಸುಮಾರು 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಕವಲಿಗುಡ್ಡೆ ಮನೆಯ ಯೋಗೀಶ್ ಪೂಜಾರಿ(35) ಎಂಬಾತನನ್ನು ವೇಣೂರು ಪೊಲೀಸರು ಫೆ.13 ರಂದು...














