ಕಾಂಗ್ರೆಸ್ – ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಅಂತಿಮ
ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟುಗಳ ಹೊಂದಾಣಿಕೆಯ ವಿಚಾರದಲ್ಲಿ ಇದ್ದ ಗೊಂದಲಗಳು ಪರಿಹಾರಗೊಂಡಿದ್ದು ಕಂಗ್ರೆಸ್ 17 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಉಳಿದ 63ಕ್ಷೇತ್ರಗಳನ್ನು ಸಮಾಜವಾದಿ ಪಕ್ಷಕ್ಕೆ ನೀಡಲಾಗಿದ್ದು ಇದರಲ್ಲಿ ಕೆಲವು ಕ್ಷೇತ್ರ ಗಳಲ್ಲಿ ಈ ಮೈತ್ರಿಯೊಂದಿಗೆ ಇರುವ ಸಣ್ಣ ಪಕ್ಷಗಳು ಸ್ಪರ್ಧಿಸಲಿದೆ. "ನಾವು ಕಾಂಗ್ರೆಸ್ ಜೊತೆಗಿದ್ದೇವೆ ಮತ್ತು ಬಿಜೆಪಿಯನ್ನು ಸೋಲಿಸುವುದು ನಮ್ಮ ಮೈತ್ರಿ ಉದ್ದೇಶ" ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿರುವುದಾಗಿ ಮಾದ್ಯಮಗಳು ವರದಿ ಮಾಡಿದೆ. ರಾಯ್...
ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ನ್ಯಾಯಾಂಗ ನಿಂದನೆ, ಅಧಿಕಾರಿಗಳಿಗೆ ಹೈಕೋರ್ಟ್ ನೋಟೀಸ್ ಜಾರಿ
Contempt of Court by Mahesh Shetty Timarodi, High Court issues notice to officials ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಮಾಡುತ್ತಿರುವ ನ್ಯಾಯಾಲಯದ ಆದೇಶಗಳ ಉಲ್ಲಂಘನೆ ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ, ಪೋಲೀಸ್ ಮಹಾ ನಿರ್ದೇಶಕರು ಹಾಗೂ ಇನ್ನಿತರ ಉನ್ನತ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಹೇಶ್ ಶೆಟ್ಟಿ ತಿಮರೋಡಿ ಮಾಡುತ್ತಿದ್ದ ಭಾಷಣಗಳ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ, ಹೈಕೋರ್ಟ್ ಮತ್ತೊಂದು ಮಹತ್ವದ ಆದೇಶ ಮಾಡಿದೆ. ಈಗಾಗಲೇ...
ವೇಣೂರು ಮಹಾಮಸ್ತಕಾಭಿಷೇಕ ಮಾಧ್ಯಮ ಕೇಂದ್ರ ಉದ್ಘಾಟನೆ
Inauguration of Venur Mahamastakabhisheka Media Center ವೇಣೂರು ; ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿ ಇದರ ಎಲ್ಲಾ ಕಾರ್ಯಕ್ರಮಗಳು ವಿಶ್ವವ್ಯಾಪಕವಾಗಿ ಪ್ರಸಾರವಾಗಲಿ, ಈ ಮೂಲಕ ಅಹಿಂಸೆ ಮತ್ತು ಶಾಂತಿ ಸಂದೇಶಗಳು ವಿಶ್ವವ್ಯಾಪಕವಾಗಿ ಪಸರಿಸಬೇಕು ಎಂದು ಪುತ್ತೂರು ಸಹಾಯಕ ಅಯುಕ್ತಜುಬಿನ್ ಮಹಾಪಾತ್ರ ಹೇಳಿದರು.ಅವರು ಇಂದು ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಮಾಧ್ಯಮಕೇಂದ್ರವನ್ನು ಉದ್ಘಾಟಿಸಿ,ಶುಭ ಹಾರೈಸಿದರು.ಮಾಧ್ಯಮಗಳು ಸಾಕಷ್ಟು ಪ್ರಸಾರ ಕಾರ್ಯ ಮಾಡಿದಲ್ಲಿ ಅದೂ ಒಂದು ಉತ್ತಮ ಕಾರ್ಯ ಸರಕಾರ ಮಸ್ತಕಾಭಿಷೇಕ ಸಮಿತಿಯುಂದಿಗೆ ಇದ್ದು ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಹಲವು ಸವಲತ್ತುಗಳನ್ನು ನೀಡಿದೆ. ನಿರ್ವಿಘ್ನವಾಗಿ ಈ ಮಂಗಳಕಾರ್ಯ...
ಗುರುವಾರದಿಂದ ವೇಣೂರಿನಲ್ಲಿ ಮಹಾ ಮಸ್ತಕಾಭಿಷೇಕದ ಸಂಭ್ರಮ
ಬೆಳ್ತಂಗಡಿ; 'ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ' ಎಂಬ ಸಂದೇಶದೊಂದಿಗೆ ವೇಣೂರು ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕ ಫೆ.22 ರಂದು ಆರಂಭಗೊಳ್ಳಲಿದೆ.ಯುಗಳಮುನಿಗಳಾದ ಪರಮಪೂಜ್ಯ 108 ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜ ಇವರ ಪಾವನ ಸಾನಿಧ್ಯದಲ್ಲಿ,ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ, ಮೂಡಬಿದಿರೆ,ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ,ಹೊಂಬುಜ ಆರತೀಪುರ,ಸೋಂದ, ಅರಹಂತಗಿರಿ,ಕನಕಗಿರಿ ಕಂಬದಹಳ್ಳಿ,ಕಾರ್ಕಳ,ಶ್ರೀ ಕ್ಷೇತ್ರ ಗಾಂದಣಿ,ವರೂರು, ಕೊಲ್ಲಾಪುರ,ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಗುರುವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಧಾರ್ಮಿಕ ಸಭೆ ಕಾರ್ಯಕ್ರಮವನ್ನುಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಪರಾಹ್ನ...
ಸೌಜನ್ಯ ಪ್ರಕರಣ ಮರು ತನಿಖೆಗೆ ಕುಟುಂಬಸ್ಥರಿಂದ ಹೈಕೋರ್ಟಿನಲ್ಲಿ ಅರ್ಜಿ, ಸಿಬಿಐಗೆ ನೋಟೀಸ್
Courtesy murder case petitioned by family members in High Court for re-investigation, notice to CBI ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಸೌಜನ್ಯ ಕುಟುಂಬದವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಮೃತ ಬಾಲಕಿಯ ತಂದೆ ಧರ್ಮಸ್ಥಳದ ಪಾಂಗಳದ ನಿವಾಸಿ ಚಂದಪ್ಪ ಗೌಡ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೀಠವು ನಡೆಸಿತು....
ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ತೋಟತ್ತಾಡಿ; ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ, ಚಿಬಿದ್ರೆ. ಇದರ ನೂತನ ಪದಾದಿಕಾರಿಗಳ ಸಮಿತಿ ರಚನಾ ಸಭೆ ಸಂಘದ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಸನತ್ ಕುಮಾರ್ ಮೂರ್ಜೆ, ಉಪಾಧ್ಯಕ್ಷರಾಗಿ ದಿವಾಕರ್ ಪೂಜಾರಿ ಕಳೆಂಜೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಚಿಬಿದ್ರೆ, ಜತೆ ಕಾರ್ಯದರ್ಶಿಯಾಗಿ ಶೇಖರ್ ಪೂಜಾರಿ ಅರ್ಬಿ, ಕೋಶಾಧಿಕಾರಿಯಾಗಿ ಸೀತಾರಾಮ ಕಜೆ ಗೌರವಾಧ್ಯಕ್ಷರಾಗಿ ತಿಮ್ಮಪ್ಪ ಪೂಜಾರಿ ಹಾರಗಂಡಿ, ಗೌರವ ಸಲಹೆಗಾರರಾಗಿ ಶೇಖರ ಪೂಜಾರಿ ಕಳೆಂಜೊಟ್ಟು, ಜಯಾನಂದ ಪೂಜಾರಿ ಡಿ ಮಜಲು, ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ ಗಿರೀಶ್...
ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
ಬೆಂಗಳೂರು; ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಗೆಲುವು ಸಾಧಿಸಿದೆ ಮೊದಲ ಚುನಾವಣೆಯಲ್ಲಿಯೇ ಬಿಜೆಪಿ ಜನತಾದಳ ಮೈತ್ರಿಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟಣ್ಣ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಮತೆಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಪುಟ್ಟಣ್ಣ, ಅಂತಿಮವಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಅವರನ್ನು 1,507 ಮತಗಳ ಅಂತರದಿಂದ ಸೋಲಿಸಿ ಗೆಲುವನ್ನು ಪಡೆಸುಕೊಂಡರು.ಈ ಮೂಲಕ ಮೈತ್ರಿಯೊಂದಿಗೆ ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಹಾಗೂ ಜೆಡಿಎಸ್ಗೆ ಮುಖಭಂಗವಾಗಿದೆ.ಬೆಂಗಳೂರಿನಲ್ಲಿ ಮತಎಣಿಕೆ ನಡೆದಿದ್ದು, ಕಾಂಗ್ರೆಸ್ನ ಪುಟ್ಟಣ್ಣ ಒಟ್ಟು...
ಕಲ್ಮಂಜದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಗಾಂಜಾಲ್ ಎಂಬಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಶಾಜಿ(56) ಎಂಬಾತನಾಗಿದ್ದಾನೆ. ಫೆ.20ರಂದು ಶಾಜಿ ಶಿಬಿ ಎಂಬವರ ತೋಟದಲ್ಲಿ ಕೆಲಸಕ್ಕ ಬಂದಿದ್ದ ತೋಟದಲ್ಲಿಯೇ ಆತನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಗೆ ಕಾರಣವೇನೆಂದು ತಿಳಿದು ಬಂದಿಲ್ಲ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಳಾಲಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ, ಪ್ರಕರಣ ದಾಖಲು
ಬೆಳ್ತಂಗಡಿ; ಬೆಳಾಲಿನಲ್ಲಿ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಫೆ 18ರಂದು ನಡೆದಿದೆ. ಘಟನೆಯ ಬೆನ್ನಲ್ಲಿಯೇ ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬೆಳಾಲು ಗ್ರಾಮದ ನಿವಾಸಿ ವಿಶೇಷ ಗೌಡ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಫೆ. 18ರಂದು ರಾತ್ರಿ ತಾನು ಮನೆಯಲ್ಲಿ ಇದ್ದಾಗ ಆರೋಪಿಗಳಾದ ಜಯಂತ ಗೌಡ, ಸ್ವಸ್ತಿಕ್ ,ಶಶಾಂಕ, ಎಂಬವರು ಮನೆಗೆ ಅಕ್ರಮ ಪ್ರವೇಶ ಮಾಡಿ ವಿಶೇಷ ಗೌಡ ಅವರ ಮೇಲೆ ಹಾಗೂ ಅವರ ಬಾವ ಪ್ರದೀಪ್ ಎಂಬವರ ಮೇಲೆ...
ತಾಲೂಕು ಆಡಳಿತದಿಂದ ಸರ್ವಜ್ಞ ಜಯಂತಿ
ಬೆಳ್ತಂಗಡಿ; ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾ ಪುರುಷರ ಜಯಂತಿ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಸಹಯೋಗದಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮ ನಗರದ ಮಿನಿ ವುಧಾನ ಸೌಧದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಮ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಯುವ ವಕೀಲರಾದ ಉದಯ ಬಿ.ಕೆ ಮಾತನಾಡಿ ಸರ್ವಜ್ಞ ಎಲ್ಲರಿಗೂ ಮಾದರಿಯಾಗಿರುವ ವ್ಯಕ್ತಿತ್ವವಾಗಿದೆ. ತಮ್ಮ ಸಾಹಿತ್ಯದ ಮೂಲಕ ಜಗತ್ತನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾನೆ.ಅವರ ಮುಂದಿಟ್ಟಿರುವ ಆದರ್ಶಗಳು ಎಂದಿಗೂ ಎಲ್ಲರಿಗೂ ಮಾದರಿಯಾದ...





