ಬೆಳ್ತಂಗಡಿ; ಬೆಳಾಲಿನಲ್ಲಿ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಫೆ 18ರಂದು ನಡೆದಿದೆ. ಘಟನೆಯ ಬೆನ್ನಲ್ಲಿಯೇ ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಾಲು ಗ್ರಾಮದ ನಿವಾಸಿ ವಿಶೇಷ ಗೌಡ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಫೆ. 18ರಂದು ರಾತ್ರಿ ತಾನು ಮನೆಯಲ್ಲಿ ಇದ್ದಾಗ ಆರೋಪಿಗಳಾದ ಜಯಂತ ಗೌಡ, ಸ್ವಸ್ತಿಕ್ ,ಶಶಾಂಕ, ಎಂಬವರು ಮನೆಗೆ ಅಕ್ರಮ ಪ್ರವೇಶ ಮಾಡಿ ವಿಶೇಷ ಗೌಡ ಅವರ ಮೇಲೆ ಹಾಗೂ ಅವರ ಬಾವ ಪ್ರದೀಪ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಮನೆಯ ಹಂಚುಗಳಿಗೂ ಹಾನಿಯುಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೆ ಒಳಗಾದ ಇಬ್ಬರೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಬೆಳಾಲು ಗ್ರಾಮದ ನಿವಾಸಿ ಸ್ವಸ್ತಿಕ್ ಎಂಬವರು ದೂರು ನೀಡಿದ್ದು ಬೆಳಾಲು ಗ್ರಾಮದ ಓಣಿಯಾಲು ಎಂಬಲ್ಲಿ ಆರೋಪಿಗಳಾದ ವಿಶೇಷ ಗೌಡ, ಪ್ರದೀಪ್, ವೈಶಾಖ್,ಸುರೇಶ್ ಹಾಗೂ ಪಝಲ್ ಎಂಬವರು ಸ್ವಸ್ತಿಕ್ ಹಾಗೂ ಶಶಾಂಕ್ ಅವರ ಮೇಲೆ ಹಲ್ಕೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರು ನೀಡಿದ್ದಾರೆ ಹಲ್ಲೆಗೆ ಒಳಗಾಗಿರುವ ಇಬ್ಬರೂ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಎರಡೂ ಪ್ರಕರಣಗಳನ್ನು ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .