ಸೇವಾಭಾರತಿ ನೂತನ ಕಾರ್ಯಾಲಯ ಸೇವಾನಿಕೇತನ ಉದ್ಘಾಟನೆ

0

ಬೆಳ್ತಂಗಡಿ: ಎಂ.ಆ‌ರ್.ಪಿ.ಎಲ್, ನ ಸಿ.ಎಸ್.ಆರ್.ಅನುದಾನದಲ್ಲಿ ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ'ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ ಧರ್ಮಸ್ಥಳ ಕನ್ಯಾಡಿಯ ಸೇವಾನಿಕೇತನದಲ್ಲಿ ಡಿ.4ರಂದು ನಡೆಯಿತು.ನೂತನ ಕಾರ್ಯಾಲಯವನ್ನು ಆರ್.ಎಸ್.ಎಸ್.ನ ಪ್ರಾಂತ ಸಂಯೋಜಕ ಸುಬ್ರಾಯ ನಂದೋಡಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಮಾತನಾಡಿ ಸೇವಾನಿಕೇತನ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ಧನಸಹಾಯ ಘೋಷಣೆ ಮಾಡಿದರು. ಯಾವುದೇ ಪಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡಬಹುದು ಇದು ಒಂದು ಮಾದರಿ ಸಂಸ್ಥೆಯಾಗಿದ್ದು ಎಲ್ಲರೂ ಬೆಂಬಲ ಪ್ರೊತ್ಸಾಹ ನೀಡಬೇಕು...

ಧರ್ಮಸ್ಥಳ ಕೇಸ್: ಜಾಮೀನು ಸಿಕ್ಕರೂ ಮಾಸ್ಕ್ಮ್ಯಾನ್ ಚಿನ್ನಯ್ಯಗಿಲ್ಲ ಬಿಡುಗಡೆ ಭಾಗ್ಯ

0

ಬೆಳ್ತಂಗಡಿ;  ಧರ್ಮಸ್ಥಳ  ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲು ಸೇರಿರುವ  ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್ ಜಾಮೀನು ನೀಡಿ ವಾರ ಕಳೆದರೂ ಬಿಡುಗಡೆ ಭಾಗ್ಯಮಾತ್ರ ಇನ್ನೂ ಸಿಕ್ಕಿಲ್ಲ. ನವೆಂಬರ್ 26ರಂದು ಚಿನ್ನಯ್ಯಗೆ ಮಂಗಳೂರು  ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಹತ್ತು ನಿಬಂಧನೆಗಳೊಂದಿಗೆ  ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡಲು ಕೋರ್ಟ್ ಆದೇಶಿಸಿತ್ತು. ಆದರೆ, ಯಾರೂ ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆಯಲ್ಲಿ  ಚಿನ್ನಯ್ಯ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ  ಇರುವಂತಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ...

ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರ ಪತಿಗಳ ಭೇಟಿ

0

ಬೆಳ್ತಂಗಡಿ;  ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಮಾನ್ಯ ರಾಜ್ಯಸಭಾ ಸದಸ್ಯರಾದ  ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ04-12-2025 ರಂದು ಸಂಸತ್ ಭವನದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳೂ ರಾಜ್ಯಸಭೆಯ ಅಧ್ಯಕ್ಷರೂ ಆದ  ಸಿ. ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಹ್ವಾನಿಸಿದರು.

ಬೆಳ್ತಂಗಡಿ : ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದ ಸವಾರ ಮೃತ್ಯು

0

ಬೆಳ್ತಂಗಡಿ :‌ಉಜಿರೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ  ಚಿಕಿತ್ಸೆ ಫಲಿಸದೆ ಸಾವನ್ನಪ್ಪಿ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿನ್ನಿಕಲ್ಲು ರಸ್ತೆಯಲ್ಲಿ ಡಿ.1 ಮಧ್ಯಾಹ್ನ ಸ್ಕೂಟರ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಉಜಿರೆ ಗ್ರಾಮದ ಪಕ್ಕಿಂಜೆ ನಿವಾಸಿ ಜಯ ಗೌಡ(40) ಚಿಕಿತ್ಸೆ ಫಲಿಸದೆ ಡಿ.3 ರಂದು ಸಂಜೆ  ಮಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅಕ್ರಮ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಕುಖ್ಯಾತ ಆರೋಪಿಯ ಬಂಧನ

0

ಬೆಳ್ತಂಗಡಿ; ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿರುವ ರೈಲ್ವೇ ಬ್ರಿಡ್ಜ್ ಬಳಿ, ವ್ಯಕ್ತಿಯೋರ್ವ ಮಾದಕವಸ್ತುವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂಬಾತನಾಗಿದ್ದಾನೆ.ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಡಿ 3 ರಂದು ಆಂಜನೇಯ ರೆಡ್ಡಿ, ಪೊಲೀಸ್‌ ಉಪನಿರೀಕ್ಷಕರು (ಕಾ.ಸು), ಪುತ್ತೂರು ನಗರ ಪೊಲೀಸ್‌ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಆರೋಪಿತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಿಸಿದಾಗಆತನು ಪುತ್ತೂರು ಕಬಕ ನಿವಾಸಿ ಉಮ್ಮರ್...

ಚಾರ್ಮಾಡಿ ಕಾರುಡಿಕ್ಕಿ ಬಾಲಕ  ಮೃತ್ಯು

0

ಚಾರ್ಮಾಡಿ: ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಡಿ.3 ರಂದು ಚಾರ್ಮಾಡಿಯಲ್ಲಿ ಸಂಭವಿಸಿದೆ.ಚಾರ್ಮಾಡಿ ಗ್ರಾಮ ಪಂಚಾಯತದ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಎಂಬವರ ಪುತ್ರ ಮೂರು ವರ್ಷ ಪ್ರಾಯದ ಮಹಮ್ಮದ್ ಹಝೀರಿನ್ ಈ ದುರ್ಘಟನೆಯಲ್ಲಿ ಮೃತ ಪಟ್ಟ ಬಾಲಕನಾಗಿದ್ದಾನೆ. ಬಾಲಕ ಮಹಮ್ಮದ್ ಹಝೀರಿನ್ ತಮ್ಮ ಮನೆಯ ಸಮೀಪ ರಸ್ತೆಯ ಆ ಕಡೆ ಇದ್ದ ಅಂಗಡಿಗೆ ತಿಂಡಿ ತರಲೆಂದು ಹೋಗಿ, ತಿಂಡಿ ತೆಗೆದುಕೊಂಡು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವೇಳ ಈ...

ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ 10.67 ಕೋಟಿ ಅನುದಾನ ಬಿಡುಗಡೆ

0

ಬೆಳ್ತಂಗಡಿ; 2025-2026ನೇ ಸಾಲಿಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಗಳಲ್ಲಿ ನಿರಂತರವಾಗಿ ಸುರಿದ ಬೀಕರ ಮಳೆಯಿಂದಾಗಿ ಉಂಟಾಗಿರುವ ಹಾನಿಗಳಿಗೆ ಸಂಬಂಧಿಸಿದಂತೆ ತಡೆಗೋಡೆ, ರಸ್ತೆ, ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲು ರಾಜ್ಯ ಸರಕಾರ ರೂ.10.67 ಕೋಟಿ ಅನುದಾನವನ್ನು ಮಂಜೂರುಗೊಳಿಸಿದೆ.

ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿ ಪುನರಾರಂಭ

0

ಬೆಳ್ತಂಗಡಿ; ನಗರದಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿ ಇದೀಗ ಪುನರಾರಂಭಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಮರು ಜೀವ ಪಡೆದಿದೆ.2023ರಲ್ಲಿ ಆರಂಭವಾಗಿರುವ ನೂತನ ಬಸ್ ನಿಲ್ದಾಣದ 12 ಕೋಟಿ ರೂ. ಅನುದಾನದ ಕಾಮಗಾರಿಯಲ್ಲಿ ಕಳೆದ ಬೇಸಿಗೆಯಲ್ಲಿ ನೆಲಮಟ್ಟದ ಕೆಲಸಗಳು ನಡೆದಿದ್ದು ಮಳೆ ಆರಂಭವಾಗುತ್ತಿದ್ದಂತೆ ಕಾಮಗಾರಿ ನಿಂತಿತ್ತು.ಮಳೆಗಾಲದಲ್ಲಿ ಇಲ್ಲಿ ಮಣ್ಣು ಕುಸಿದು ಈಗಿರುವ ಬಸ್ ನಿಲ್ದಾಣಕ್ಕೆ ಕೆಸರು ನೀರು ಹರಿದು ಬರುತ್ತಿತ್ತು. ಕಾಮಗಾರಿಗೆ ತಂದು ಹಾಕಿದ್ದ ಕಬ್ಬಿಣ ತುಕ್ಕು ಹಿಡಿಯುತ್ತಿತ್ತು. ಪರಿಸರದಲ್ಲಿ ಗಲೀಜು ಇದ್ದು ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ...

ರಬ್ಬರ್ ಬೆಳೆಗೆ  ಬೆಂಬಲ ಬೆಲೆ ನಿಗಧಿಗೆ ಆಗ್ರಹಿಸಿ ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ

0

ಬೆಳ್ತಂಗಡಿ: ನೈಸರ್ಗಿಕ ರಬ್ಬರ್ ಬೆಳೆಯನ್ನು ನಿಗದಿತ ಕೃಷಿ ಬೆಳೆಗಳ ಪಟ್ಟಿಯಲ್ಲಿ ಸೇರಿಸುವಂತೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ ಪಿ) ಅಥವಾ ನ್ಯಾಯಸಮ್ಮತ ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ನಿಗದಿಗೊಳಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರಿಗೆ ಪತ್ರವನ್ನು ಬರೆದಿರುವ ಗುಂಡೂರಾವ್, ದ.ಕ. ಜಿಲ್ಲೆಯ ಹಲವಾರು ರೈತರು ರಬ್ಬರ್ ಕೃಷಿಯಲ್ಲಿ ತೊಡಗಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಮಾರುಕಟ್ಟೆಯಲ್ಲಿನ...

ಎಸ್.ಡಿ.ಎಂ ಪ.ಪೂ. ಕಾಲೇಜು : ವಾರ್ಷಿಕ ಕ್ರೀಡಾ ಕೂಟ; ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅಗತ್ಯ : ಡಾ. ಸತೀಶ್ಚಂದ್ರ ಎಸ್

0

ಉಜಿರೆ :ಸಾಂಪ್ರ ದಾಯಿಕ ಚಟುವಟಿಕೆಗಳು, ದೇಶಿಯ ಕ್ರೀಡೆಗಳು ಇಂದು ಮೂಲ ಗುಂಪಾಗುತ್ತಿವೆ. ಕ್ರೀಡೆಯಲ್ಲಿ ಅನೇಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಿದೆ. ಇದು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಗಳು ಪದಕ ಮತ್ತು ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗದೆ ಉತ್ತಮ ಆರೋಗ್ಯಕ್ಕಾಗಿ, ಸದೃಢ ಸಮಾಜಕ್ಕಾಗಿ ಮತ್ತು ಯುವ ಸಮುದಾಯದ ಚೈತನ್ಯಕ್ಕಾಗಿ ಕನಿಷ್ಠ ಸಮಯವನ್ನಾದರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದುಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯ ಪಟ್ಟರು.ಇವರು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ...