ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಇದರ ಅಮೃತ ಮಹೋತ್ಸವ ದ ಅಂಗವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ

0

ಬಂದಾರು : ಸ. ಉ. ಪ್ರಾ ಶಾಲೆ, ಮೈರೋಳ್ತಡ್ಕ, ಬಂದಾರು ಇದರ ಅಮೃತ ಮಹೋತ್ಸವ ದ ಸಲುವಾಗಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಆ 30 ರಂದು ನೆರವೇರಿತು.ದೇವರಿಗೆ ದೀಪ ಬೆಳಗಿಸುವುರ ಮೂಲಕ ಪ್ರಾರಂಬಿಸಲಾಯಿತು. ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿದರು. ಅಂಚೆ ವಿಭಾಗ ಪುತ್ತೂರು ಇದರ ಉಪ ಅಧೀಕ್ಷರಾದ ಶ್ರೀ ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.ನೂರಾರು ಮಂದಿ ಹೊಸ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಎಸ್. ಡಿ. ಎಂ....

ಬೆಳ್ತಂಗಡಿ : ಮಹಿಳೆಯ ಮಾನಭಂಗ ಪ್ರಕರಣ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿ ಬಂಧನ

0

ಬೆಳ್ತಂಗಡಿ: ಮಹಿಳೆಯ ಮಾನಭಂಗ ಯತ್ನ ಪ್ರಕರಣದಲ್ಲಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಕೇರಳದ ಕಣ್ಣೂರಿನಿಂದ ಬಂಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ: 172/2014ರಲ್ಲಿ ಕಲಂ 354(B), 323, 324, 504 ಹಾಗೂ 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳದ ಕಣ್ಣೂರು ನಿವಾಸಿ ಡೆನ್ನಿ ಜೋಸೆಫ್ @ ಆಂಟೋನಿ (56) ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿಸಿ ಮುನಿಯ ನಾಯ್ಕ ಹಾಗೂ...

ಪುತ್ತೂರು ಚಲೋ ಹಿನ್ನಲೆ ಪುತ್ತೂರು ನಗರದಲ್ಲಿ ಬಿಗು ಹೆಚ್ಚುವರಿ ಪೊಲೀಸ್ ನಿಯೋಜನೆ; ಪೊಲೀಸ್ ಪಥಸಂಚಲನ

0

ಪುತ್ತೂರು; ಆ 31 ರಂದು ನಡೆಯಲಿರುವ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ದ ಅನುಮತಿ ನೀಡಲಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂಧೋಬಸ್ತ್ ಮಾಡಲಾಗಿದ್ದು ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿದ್ದು ಪೊಲೀಸರು ನಗರದಲ್ಲಿ ಪಥಸಂಚಲನ ನಡೆಸಿದರು.ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಒಬ್ಬರು ಎಡಿಶನಲ್ ಎಸ್ಪಿ ಅವರ ನೇತೃತ್ವದಲ್ಲಿಡಿ.ವೈ.ಎಸ್.ಪಿ - 01ಪಿ.ಐ - 03, ಪಿ.ಎಸ್.ಐ - 10, ಎ.ಎಸ್.ಐ - 14 ಸಿಬ್ಬಂದಿಗಳು - 139ಕೆ.ಎಸ್.ಆರ್.ಪಿ ತುಕಡಿ -05, ಎಸ್.ಎ.ಎಫ್ ತಂಡ 2, ಡಿ.ಎ.ಆರ್ ತುಕಡಿ -07 ನ್ನು ಸ್ಥಳದಲ್ಲಿ...

ಬೆಳ್ತಂಗಡಿ : ಬಂದಾರು ನಿವಾಸಿ 9ನೇ ತರಗತಿ ಬಾಲಕ ನೇಣುಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ ಭರತ್‌ ಗೌಡ ಅವರ ಪುತ್ರ ಶ್ರವಣ್ ಬಿ.ಕೆ (14ವ) ಎಂಬಾತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆ.30ರಂದು ಬೆಳಗ್ಗೆ  ನಡೆದಿದೆ. ಬಾಲಕ ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ವಾಣಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾಗಿತ್ತು ಎನ್ನಲಾಗಿದ್ದು ಇದರ ಬೇಜಾರಿನಲ್ಲಿ ಇದ್ದ ಎನ್ನಲಾಗಿದೆ.  ಆ 29 ರಂದು ಸಂಜೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕಆ.30 ರಂದು ಮನೆಯ ಮೇಲ್ಚಾವಣಿಗೆ ವೇಲ್ ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಮತ್ತು ಸಹೋದರಿ, ಬಂಧು...

ಬೆಸ್ಟ್ ಶಾಸಕ ಪ್ರಶಸ್ತಿ: ಶಾಸಕರನ್ನು ಅಭಿನಂದಿಸಿದ ತಾಲೂಕಿನ ಮುಸ್ಲಿಂ ಮುಖಂಡರು

0

ಬೆಳ್ತಂಗಡಿ; "ಕರ್ನಾಟಕ ಟಿವಿ ಲೀಡರ್ ಅವಾರ್ಡ್ಸ್ 2025" ರಡಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ“ಉತ್ತಮ ಶಾಸಕ ಪ್ರಶಸ್ತಿ" ಪಡೆದಿರುವ ಶಾಸಕ ಹರೀಶ್ ಪೂಂಜ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ತಾಲೂಕಿನ ಮುಸ್ಲಿಂ ಮುಖಂಡರು ಅವರನ್ನು ರವಿವಾರ ಅವರ ನಿವಾಸದಲ್ಲಿ ಅಭಿನಂದಿಸಿದರು. ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಮುಸ್ಲಿಂ ಮುಖಂಡ, ಸಿವಿಲ್ ಗುತ್ತಿಗೆದಾರ ಅಶ್ರಫ್ ಲಾಯಿಲ ಅವರ ನೇತೃತ್ವದಲ್ಲಿ ಶಾಸಕರ ಮನೆಗೆ ತೆರಳಿದ ನಿಯೋಗ ಅವರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದರು. ತಾಲೂಕಿನ ಸಮಗ್ರ ಅಭಿವೃದ್ದಿಯ ಕನಸುಹೊತ್ತು ತನ್ನ ಪಾಲಿನ ಅನುದಾನದಲ್ಲಿ...

ಗೃಹಲಕ್ಷ್ಮೀ ಯೋಜನೆ; ತಾಲೂಕಿನ 57,347 ಫಲಾನುಭಾವಿಗಳಿಗೆ  ರೂ 340.31 ಕೋಟಿ ವಿತರಣೆ; ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಹಿತಿ

0

ಬೆಳ್ತಂಗಡಿ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯು ಕುಟುಂಬದ ಯಜಮಾನಿಯರ ಸ್ವಾವಲಂಬಿ ಜೀವನಕ್ಕೆ ನೆರವಾಗುತ್ತಿದೆ. ಬೆಳ್ತಂಗಡಿ ತಾಲೂಕಿನ 56,347 ಗೃಹಲಕ್ಷ್ಮೀಯರ ಖಾತೆಗಳಿಗೆ ಇದುವರೆಗೆ ಒಟ್ಟು ರೂ.340.31 ಕೋಟಿ ಹಣ ಜಮೆಯಾಗಿದೆ ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ತಿಳಿಸಿದ್ದಾರೆ. ಕುಟುಂಬದ ಯಜಮಾನಿಯರ ಖಾತೆಗೆ ಪ್ರತೀ ತಿಂಗಳು ಜಮೆಯಾಗುವ ರೂ.2000 ಆರ್ಥಿಕವಾಗಿ ಮಹಿಳೆಯರಿಗೆ ಬಲ ನೀಡುವುದರೊಂದಿಗೆ ಸ್ವಾವಲಂಬಿ ಜೀವನಕ್ಕೆ ಮೈಲಿಗಲ್ಲಾಗಿದೆ. ಯೋಜನೆಯ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಮುಂದಿನ ವಾರದಿಂದ ಗೃಹಲಕ್ಷ್ಮೀ...

ಚಿಬಿದ್ರೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

0

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಭಾನುವಾರ ಬೆಳಗ್ಗೆ ಚಿಬಿದ್ರೆ ಬಳಿ ನಡೆದಿದೆ. ಕೊಟ್ಟಿಗೆಹಾರ ಕಡೆಯಿಂದ ಉಜಿರೆ ಕಡೆಗೆ ಸಂಚರಿಸುತ್ತಿದ್ದ ಕಾರು ಚಿಬಿದ್ರೆ ಸಮೀಪಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಕಾರಿನಲ್ಲಿದ್ದವರು ಯಾವುದೇ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ಅಪಘಾತದ ಪರಿಣಾಮ ವಿದ್ಯುತ್ ಕಂಬ ಹಾನಿಗೊಂಡಿದ್ದರಿಂದ ಚಿಬಿದ್ರೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ವಿದ್ಯುತ್...

ಬೆಸ್ಟ್ ಎಂ.ಎಲ್. ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜಾ ರವರಿಗೆ ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಸಮುದಾಯದಿಂದ ಗೌರವಾಭಿನಂದನೆ

0

ಬೆಳ್ತಂಗಡಿ; ತಾಲೂಕಿನ ಒಕ್ಕಲಿಗ ಸಮಾಜದ ಬಂಧುಗಳು ಬೆಸ್ಟ್ ಎಂ.ಎಲ್. ಎ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರಿಗೆ ಶಾಸಕರ ಗೃಹ ಮಿಥಿಲಾ ಕ್ಕೆ ತೆರಳಿ ಗೌರವಾರ್ಪಣೆ ಸಲ್ಲಿಸಿದರು.ಕಳೆದ 8 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ತಂದು ಸರ್ವರನ್ನು ಒಂದೇ ಭಾವದಿಂದ ನೋಡಿಕೊಂಡು ಪಶ್ಚಿಮ ಮಲೆನಾಡಿನ ಅತಿ ದೊಡ್ಡ ತಾಲೂಕನ್ನು ಮಾದರಿ ಕ್ಷೇತ್ರವಾಗಿ ರೂಪಿಸುವಲ್ಲಿ ಶ್ರಮಿಕನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಸಮುದಾಯದ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಹಾಗೂ ಸಮುದಾಯದ ಬಂಧುಗಳ ಅಭಿವೃದ್ಧಿಗೆ ಏಕ ಮನಸ್ಸಿನಿಂದ...

ಬೆಳ್ತಂಗಡಿ : ಗೇರುಕಟ್ಟೆ ಸುಮಂತ್ ಅನುಮಾನಸ್ಪದ ಸಾವು ಪ್ರಕರಣ; ಸಹೋದರನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮುಕ್ತಾಯ

0

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಮಣ್ಯ ನಾಯಕ್ ಮತ್ತು ರತ್ನಾವತಿ ದಂಪತಿಗಳ ಪುತ್ರ ಶಾಲಾ ವಿದ್ಯಾರ್ಥಿ ಸುಮಂತ್ (14) ಎಂಬಾತ 14-01-2026 ರಂದು ಬೆಳಗ್ಗಿನ ಜಾವ ಕಳಿಯ ಗ್ರಾಮದ ಮನೆಯ ಹತ್ತಿರದ ಮನೆಯ ತೋಟದ ಕೆರೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಬೆಳ್ತಂಗಡಿ ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಪ್ರಕ್ರಿಯೆ ನಡೆಸಿ ಮುಕ್ತಾಯ ಮಾಡಲಾಗಿದೆ. ಬೆಂಗಳೂರಿನ ಮಾಡಿವಾಳ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮೃತ ಸುಮಂತ್ ಸಹೋದರ ಸುದರ್ಶನ್ ಅವರನ್ನು...

ಬೆಳ್ತಂಗಡಿ : 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ದರೋಡೆ ಪ್ರಕರಣದ   ಆರೋಪಿ ಬಂಧನ

0

ಬೆಳ್ತಂಗಡಿ: ಸುಮಾರು 13 ವರ್ಷಗಳಿಂದ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ: ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 05-02-2012 ರಂದು ವೇಣೂರು ಮಹಾಮಸ್ತಾಭಿಷೇಕ ಕಾರ್ಯಕ್ರಮವನ್ನು ನೋಡಲು ವೇಣೂರು ಗ್ರಾಮದ ಮೂಡುಕೋಡಿ ನಿವಾಸಿ ಶಶಿಕಲಾ ಅವರು ಬಂದಾಗ ರಾತ್ರಿ ಸುಮಾರು 10 ಗಂಟೆಗೆ ಹೊಳೆಯ ಬದಿ ತಲುಪಿದಾಗ ಎರಡು ಗಂಡಸರು ಮತ್ತು ಆರು ಮಂದಿ ಹೆಂಗಸರ ಗುಂಪು ಅಡ್ಡಗಟ್ಟಿ 10 ಸಾವಿರವಿದ್ದ ಹಣದ ಬ್ಯಾಗ್ ಮತ್ತು 2 ಸಾವಿರದ...