ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು ಸಿ.ಎಂ ಸಿದ್ದರಾಮಯ್ಯ ಘೋಷಣೆ
ಬೆಳ್ತಂಗಡಿ; ವಸಂತ ಬಂಗೇರರದ್ದು ನಿಷ್ಟುರ ನೇರ ನಡೆನುಡಿಯ ವ್ಯಕ್ತಿತ್ವ. ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದವರಲ್ಲ, ಯಾವುದೆ ಸನ್ನವೇಶ ಸಂದರ್ಭಗಳಿರಲಿ ಸತ್ಯವನ್ನು ನೇರವಾಗಿ ಹೇಳುವುದು ಅವರ ವಿಶೇಷಗುಣವಾಗಿತ್ತು.ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರ ಅವರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬೆಳ್ತಂಗಡಿಯಲ್ಲಿ ಮಂಗಳವಾರ ಮಾಜಿ ಶಾಸಕ ಕೆ ವಸಂತ ಬಂಗೇರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ಬಂಗೇರರು ಬಡವರ ಪರವಾಗಿ ಕೆಲಸ ಮಾಡಿದರೇ ಹೊರತು ತನಗಾಗಿ ಏನೂ ಮಾಡಿದವರಲ್ಲ ಅವರು ಐದು ಬಾರಿ ಶಾಸಕರಾದರೂ ಎಂದೂ ಮಂತ್ರಿ ಆಗಲು ಪ್ರಯತ್ನಿಸಿದವರಲ್ಲ. ಮೊದಲಬಾರಿಗೆ 1983 ರಲ್ಲಿ ನಾವು ಒಟ್ಟಿಗೆ...
ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ ಮಂಗಳೂರಿನ ತಾಯಿ ಮಗ ಮೃತ್ಯು
ಬೆಳ್ತಂಗಡಿ; ಶಿರಾಡಿ ಘಾಟಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ತಾಯಿ ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಈಡಾಗಿದೆ. ಕಾರಿನಲ್ಲಿದ್ದ ತಾಯಿ-ಮಗ ಮೃತಪಟ್ಟುದ್ದಾರೆ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬಿರ್ ಎಂಬವರ ಪತ್ನಿ ಸಫಿಯಾ(50), ಹಾಗೂಮಗ ಮೊಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ...
ಪತ್ನಿಯೊಂದಿಗೆ ಜಗಳವಾಡಿ ಮನೆಬಿಟ್ಟ ಪತಿ; ನಾಪತ್ತೆ ಪ್ರಕರಣ ದಾಖಲು
ಬೆಳ್ತಂಗಡಿ; ಪತ್ನಿಯೊಂದಿಗೆ ಜಗಳಮಾಡಿಕೊಂಡು ಮನೆಯಿಂದ ಹೋದ ವ್ಯಕ್ತಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ತಾಲೂಕಿನ ಪುತ್ತಿಲ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ (35)ಎಂಬಾತನೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.ಈ ಬಗ್ಗೆ ಅವರ ಪತ್ನಿ ಝೊಹರಾ ಪೊಲೀಸರಿಗೆ ದೂರು ನೀಡಿದ್ದಾರೆ.ಅಬ್ದುಲ್ ಹಮೀದ್ ಕೂಲಿ ಕಾರ್ಮಿಕರಾಗಿದ್ದು ಇವರು ಕೆಲಸಕ್ಕೆ ಹೋಗದೆ ಮನೆಗೆ ಖರ್ಚಿಗೆ ಹಣ ನೋಡದೆಇದ್ದು ಇದೇ ವಿಚಾರವಾಗಿ ಮೇ 15ರಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳಾಡಿದ್ದಾರೆ. ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಬಳಿಕ ಅವರ ಮೊಬೈಲ್ ಗೆ ಕರೆಮಾಡಿದಾಗ ತಾನು...
ಗುರಿಪಳ್ಳದಲ್ಲಿ ರಸ್ತೆಗೆ ಬಿದ್ದ ಮರ ವ್ಯಕ್ತಿಗೆ ಗಾಯ
ಬೆಳ್ತಂಗಡಿ; ರಸ್ತೆ ಬದಿಯ ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದು ವ್ಯಕ್ತಿ ಗಾಯಗೊಂಡ ಘಟನೆ ನಡದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ಟವರ್ ಮೇಲೆ ಉರುಳಿದೆ.ಈ ಸಂದರ್ಭ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಕನ್ಯಾಡಿಯ ರಮೇಶ್ ಎಂಬವರು ಅದೇ ರಸ್ತೆಯಲ್ಲಿ ಇಂದಬೆಟ್ಟು ಕಡೆ ಹೋಗುತ್ತಿದ್ದು ಮರದ ಭಾಗ ತಲೆಗೆ ಬಡಿದಿದೆ. ಕೂದಲೆಳೆಯ ಅಂತರದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಿಂದ ಒಂದು ಗಂಟೆಗಿಂತ ಅಧಿಕಕಾಲ ಗುರಿಪಳ್ಳ-ಇಂದಬೆಟ್ಟು...
ಕಾರ್ಯಕರ್ತರನ್ನು ಮುಟ್ಟಿದರೆ ಬೆಳ್ತಂಗಡಿಯಲ್ಲಿ ಡಿ.ಜೆ ಹಳಿ ಕೆಜೆ ಹಳ್ಳಿ ಸ್ದಿತಿ ಹರೀಶ್ ಪೂಂಜ ಎಚ್ಚರಿಕೆ
ಬೆಳ್ತಂಗಡಿ:ಪೊಲೀಸರಿಗೆ ಹೆದರುವವರು ನಾವಲ್ಲ ಬಿಜೆಪಿಯಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಪೋಲೀಸ್ ಠಾಣೆಗೆ ನುಗ್ಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ದನಾಗಿದ್ದೇನೆ, ನನ್ನ ಮೇಲೆ ಎರಡು ಬಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದೀರಿ ತಾಕತ್ತಿದ್ದರೆ ಬಂಧಿಸಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು.ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರುಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರ ವಿರುದ್ದ ಪ್ರಕರಣ ದಾಖಲಿಸಿದನ್ನು ವಿರೋಧಿಸಿ ಬೆಳ್ತಂಗಡಿ ಬೆಜೆಪಿ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು...
ಇಂದು ಬೆಳ್ತಂಗಡಿಯಲ್ಲಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ.
ಬೆಳ್ತಂಗಡಿ, ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿರೋದನ್ನು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಶಾಸಕರ ಮೇಲೆ ಕೇಸ್ ಹಾಕಿರೋದನ್ನು ಖಂಡಿಸಿ ಸೋಮವಾರ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಮೇ.20 ರಂದು ಬೆಳಗ್ಗೆ ಬೆಳ್ತಂಗಡಿ ಅಯ್ಯಪ್ಪ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಮಿನಿ ವಿಧಾನಸೌಧದ ಬಳಿ ಸಾಗಿ ಅಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ಹೇಳಿದೆ.
ಪದ್ಮುಂಜದಲ್ಲಿ ರಿಕ್ಷಾ ಮಗುಚಿ ಬಿದ್ದು ಚಾಲಕ ಮೃತ್ಯು
ಪದ್ಮುಂಜ: ಆಟೊ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ರವಿವಾರ ರಾತ್ರಿ ಬೆಳ್ತಂಗಡಿಯ ಪದ್ಮುಂಜದಲ್ಲಿ ನಡೆದಿದೆ. ಇಳಂತಿಲ ಗ್ರಾಮದ ಗಂಡಿಬಾಗಿಲು ನಿವಾಸಿ ದಿನೇಶ್ (29) ಮೃತಪಟ್ಟವರು. ಪದ್ಭುಂಜಕ್ಕೆ ಬಾಡಿಗೆಗೆಂದು ತೆರಳಿದ ಇವರ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಪರಿಣಾಮದಿನೇಶ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆಟೊ ರಿಕ್ಷಾ ಚಾಲನೆಯೊಂದಿಗೆ ಉಪ್ಪಿನಂಗಡಿಯಸಹಕಾರಿ ಬ್ಯಾಂಕೊಂದರಲ್ಲಿ ಫಿಗ್ಗಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಾ...
ನಮ್ಮ ಸಂಸ್ಕೃತಿಯನ್ನು ಉಳಿಸಿ – ಬೆಳೆಸೋಣ – ಸೋನಿಯಾ ಯಶೋವರ್ಮ.
ಬೆಳ್ತಂಗಡಿ; " ನಾವಿಂದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕಾಗಿದೆ. ಇಂದು ಪ್ರತಿ ಮನೆಯವರು ತಮ್ಮ ಮಕ್ಕಳಿಗೆ ಈ ರೀತಿಯ ಸಂಸ್ಕಾರವನ್ನು ಕಳಿಸಿದರೆ ಖಂಡಿತವಾಗಿಯೂ ನಮ್ಮ ಸಮಾಜದ ಯಾವುದೇ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ. ಅಂತಹ ಕಾರ್ಯವನ್ನು ನಾವೆಲ್ಲ ಜೊತೆ ಸೇರಿ ಮಾಡೋಣ. ಇನ್ನೊಂದು ಮುಖ್ಯ ವಿಚಾರವೆಂದರೆ ಇದೇ ತಿಂಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಮ್ಮ ಮಹಿಳಾ ಒಕ್ಕೂಟದ ವಿಶೇಷ ಸಮ್ಮೇಳನವು ನಡೆಯಲಿದೆ. ಈ ಸಮ್ಮೇಳನದಲ್ಲಿ ತಾವೆಲ್ಲರೂ ಪಾಲ್ಗೊಂಡು ತಮ್ಮ ಸಂಘಟನೆಯ ಬಲವನ್ನು ಇನ್ನಷ್ಟು ವೃದ್ಧಿಸಿಕೊಳ್ಳಿ " ಎಂದು ಶ್ರೀಮತಿ...
ನಗರದಲ್ಲಿ ಕಾರುಗಳ ನಡುವೆ ಅಪಘಾತ
ಬೆಳ್ತಂಗಡಿ: ಸಂತಕಟ್ಟೆ ಬಳಿ ಕಾರು ಕಾರುಗಳ ನಡುವೆ ಡಿಕ್ಕಿ ನಡೆದ ಘಟನೆ ಮೇ 19ರಂದು ಸಂಜೆ ನಡೆದಿದೆ. ಅಪಘಾತದಲ್ಲಿ ಓರ್ವ ಸ್ಥಿತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದಿಂದಾಗಿ ಘಟನಾ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.ಅಪಘಾತದ ತೀವ್ರತೆಗೆ ಎರಡು ಕಾರುಗಳು ಜಖಂಗೊಂಡಿದ್ದು ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ಮೇ 21 ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ
ಬೆಳ್ತಂಗಡಿ; ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೇ 21ಮಂಗಳವಾರ ಬೆಳ್ತಂಗಡಿ ಗೆ ಆಗಮಿಸಲಿದ್ದಾರೆ.ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆಯ ಮೂಲಕ ಗುರುವಾಯನಕೆರೆಗೆಬಂದು ಇಲ್ಲಿನ ಎಫ್.ಎಂ ಗಾರ್ಡನ್ ನಲ್ಲಿ ನಡೆಯುವ ದಿ ಕೆ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.















