ಸಿಯೋನ್ ಆಶ್ರಮ: ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಬೆಳ್ತಂಗಡಿ; ಸಿಯೋನ್ ಆಶ್ರಮ ಗಂಡಿಬಾಗಿಲು, ಬೆಳ್ತಂಗಡಿ ತಾಲೂಕು ಇಲ್ಲಿ ದಿನಾಂಕ:25.01.2026 ರಂದು ಯೆನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಡಾ.ಆಲ್ಫಿಯ ದಂತವೈದ್ಯರು, ಡಾ.ಆಯಿಷಾ ವೈದ್ಯಕೀಯ ಅಧಿಕಾರಿ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಹಾಗೂ ಯೆನಪೋಯ ಆಸ್ಪತ್ರೆಯ ವೈದ್ಯರುಗಳ ತಂಡ ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿದರು....
ಬೆಳ್ತಂಗಡಿ; ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ
ಬೆಳ್ತಂಗಡಿ; ನಾಲ್ಕು ಕಾರ್ಮಿಕ ವಿರೊದಿ ವೇತನ ಸಂಹಿತೆಗಳು, ರೈತ ವಿರೋದಿ ಬೀಜ ಕಾಯ್ದೆ, ವಿದ್ಯುತ್ ತಿದ್ದುಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳ ಜಾರಿ ಮಾಡಿದ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಕತ್ತು ಹಿಸುಕಿ ಕೊಂದಿದೆ ಎಂದು ರೈತ-ಕಾರ್ಮಿಕ ರಾಜ್ಯ ಮುಖಂಡರಾದ ಕೆ. ಯಾಧವ ಶೆಟ್ಟಿ ಅವರು ಹೇಳಿದರು.ಅವರು ಇಂದು ಬೆಳ್ತಂಗಡಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ - ಮಂಗಳೂರು ನಾಲ್ಕು ದಿನಗಳ ಕಾಲ್ನಡಿಗೆ ಜಾತಾವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕೇಂದ್ರ ಸರಕಾರದ ರೈತ- ಕಾರ್ಮಿಕ ವಿರೋದಿ ದೋರಣೆಯ ಖಂಡಿಸಿ ಎಲ್ಲಾ ಕೇಂದ್ರ...
ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಬಂದಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ
ಉರುವಾಲು: ಜ 25 ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು. ಉರುವಾಲು, ಕಣಿಯೂರು, ಬಂದಾರು ಗ್ರಾಮಗಳನ್ನೊಳಗೊಂಡ ಬಂದಾರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮ ಜ.25 ರಂದು ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನ ದಲ್ಲಿ ನೆರವೇರಿತು. ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಕುಣಿತ ಭಜನೆ, ಗೊಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮವಿಕಾಸ ಪ್ರಾಂತ ಸಂಯೋಜಕರಾದ ಜಗದೀಶ್ ಕಲ್ಲಡ್ಕರವರು ಪುರಾತನ ಭಾರತೀಯ ಸಂಸ್ಕೃತಿ ಮೇಲೆ ಹೇಗೆ ಪಾಶ್ಚಾತ್ಯ ಸಂಸ್ಕೃತಿ...
ಮದ್ದಡ್ಕ;ಯುವಕ ನೇಣುಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ಯುವಕನೋರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ಮದ್ದಡ್ಕದಲ್ಲಿ ನಡೆದಿದೆ.ಮದ್ದಡ್ಕ ಸಹನಾ ಕ್ಲಿನಿಕ್ ವೈದ್ಯರಾದ ಹರೀಶ್ ಶೆಣೈ ರವರ ಪುತ್ರ ಹೇಮಂತ್ ಶೆಣೈ (28ವ) ಭಾನುವಾರ ಸಂಜೆ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣವೆಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ವರ್ಷ ಗ್ರಾ ಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಚಿವ ದಿನೇಶ್ ಗುಂಡೂರಾವ್
ಬೆಳ್ತಂಗಡಿ: ಇದೇವರ್ಷ ರಾಜ್ಯದಲ್ಲಿ ಗ್ರಾಮಪಂಚಾಯತುಗಳಿಗೆ ತಾಲೂಕು,ಜಿಲ್ಲಾ ಪಂಚಾಯತು ಹಾಗೂ ಬೆಂಗಳೂರು ಸೇರಿದಂತೆ ನಗರಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿಬೇಶ್ ಗುಂಡೂರಾವ್ ಹೇಳಿದರುಅವರು ಕುಕ್ಕೇಡಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು.ಗ್ರಾಮಪಂಚಾಯತು ಚುನಾವಣೆಗಳನ್ನು ಮೊದಲು ನಡೆಸಿ ಬಳಿಕ ಇತರ ಚುನಾವಣೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಕೇಂದ್ರವಾದ ಬೆಳ್ತಂಗಡಿಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೂರು ಕೋಟಿ ಅನುದಾನ ಈಗಾಗಲೇ ಮಂಜೂರಾಗಿದೆ ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಶಾಸಕರು ಬೇರೆಯೇ ಆಲೋಚನೆಯನ್ನು ಹೇಳುತ್ತಿದ್ದಾರೆ ಇದರಿಂದಾಗಿ...
ಕುಕ್ಕೇಡಿ; ಅಂಬೇಡ್ಕರ್ ಭವನ ಉದ್ಘಾಟನೆ ರಾಜ್ಯ ಸರಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ ದಿನೇಶ್ ಗುಂಡೂರಾವ್
ಬೆಳ್ತಂಗಡಿ.ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು, ಹಲವು ಯೋಜನೆಗಳ ಮೂಲಕ ಪರಿಶಿಷ್ಟರ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನವನ್ನು ಮೀಸಲಿಟ್ಟಿದೆ.ನೊಂದವರ ಮೀಸಲಾತಿ, ಭೂಮಿ ರಹಿತರಿಗೆ ನಿವೇಶನ ಕೊಡುವ ಕಾರ್ಯ, ಬಡವರ ಶೋಷಿತರ ಪರವಾದ ಕಾರ್ಯ ಕ್ರಮಗಳೆಲ್ಲವು ಕಾಂಗ್ರೆಸ್ ಸರಕಾರಗಳ ಕೊಡುಗೆಯಾಗಿದೆ ಎಂದುಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಅವರು ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತ, ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕುಕ್ಕೇಡಿ ಡಾ.ಬಿ.ಆರ್.ಅಂಬೇಡ್ಕರ್ ಭವನವದ ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಹಾಗೂ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.ಸಂವಿಧಾನ ಮೂಲಕ...
ಕನ್ಯಾಡಿ ವಿದ್ಯುತ್ ಆಘಾತಕ್ಕೆ ವ್ಯಕ್ತಿ ಬಲಿ
ಬೆಳ್ತಂಗಡಿ: ನಡ ಗ್ರಾಮಪಂಚಾಯತು ವ್ಯಾಪ್ತಿಯ ಕನ್ಯಾಡಿ ಗ್ರಾಮದ ನಿವಾಸಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.ಮೃತವ್ಯಕ್ತಿ ಕನ್ಯಾಡಿ ಬಯಲು ಕಡ್ತ್ಯಾರು ನಿವಾಸಿ ಶಿವಪ್ರಸಾದ್ ಅಡಪ(48) ಎಂಬವರಾಗಿದ್ದಾರೆ.ಇವರು ಇಂದು ಮುಂಜಾನೆ ತೋಟದ ಪಂಪ್ ಷೆಡ್ ನಲ್ಲಿ ಪಂಪ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಅವರನ್ನು ಕೂಡಲೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.ಮೃತರು ತಾಯಿ ಪತ್ನಿ ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬೆಳ್ತಂಗಡಿ ರಾಷ್ಟ್ರೀಯ ಮತದಾರರ ದಿನಾಚರಣೆ
ಬೆಳ್ತಂಗಡಿ; ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಚುನಾವಣಾ ಉಪತಹಸೀಲ್ದಾರ್ ರಂಜನ್ ವಹಿಸಿದ್ದರು.ತಾಲೂಕು ಕಚೇರಿಯ ವಿಷಯ ನಿರ್ವಾಹಕರಾದ ಮೃತ್ಯುಂಜಯರವರು ಮತದಾರರ ದಿನಾಚರಣೆಯ ಮಹತ್ವವನ್ನು ವಿವರಿಸಿದರು .ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮತದಾರ ದಿನಾಚರಣೆಯ ಪ್ರಯುಕ್ತ ನಡೆಸಲಾದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದರವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ತಾಲೂಕು ಮಟ್ಟದ,ಪದವಿ ಪೂರ್ವ ಕಾಲೇಜು ವಿಭಾಗದ, ಪ್ರಬಂಧ ಸ್ಪರ್ಧೆಯಲ್ಲಿ ಕು. ಕೀರ್ತನ, ಪದವಿ ಪೂರ್ವ ಕಾಲೇಜು ಬೆಳ್ತಂಗಡಿ(ಪ್ರಥಮ), ಕು.ರಕ್ಷಿತಾ,ಪದವಿ ಪೂರ್ವ ಕಾಲೇಜು ಉಜಿರೆ (ದ್ವಿ),ಕು.ಶ್ರಾವ್ಯ, ಸ್ರೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜ್,ಮಡಂತ್ಯಾರು(ತೃ) ಹಾಗೂ...
ಮಡಂತ್ಯಾರು ಬೈಕ್ ಗೆ ಕಾರು ಡಿಕ್ಕಿ ವ್ಯಕ್ತಿ ಸ್ಥಳದಲ್ಲಿಯೇ ಸಾವು
ಬೆಳ್ತಂಗಡಿ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ. 24ರಂದು ಮಡಂತ್ಯಾರಿನಲ್ಲಿ ನಡೆದಿದೆ. ಕಾವಳಮೂಡೂರು ಕಾರಿಂಜ ಪಡಿ ನಿವಾಸಿ ಪದ್ಮನಾಭ ದೇವಾಡಿಗ(45) ಮೃತಪಟ್ಟ ವ್ಯಕ್ತಿ.ಅವರು ಉಪ್ಪಿನಂಗಡಿ ಹೋಟೆಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ಕರಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜ.23ರಂದು ರಾತ್ರಿ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಸುಮಾರು 11.30ರ ವೇಳೆ ಬರುತ್ತಿದ್ದಾಗ ಮಡಂತ್ಯಾರು ಸಮೀಪ ಮಂಗಳೂರಿನಿಂದ ಬರುತ್ತಿದ್ದ ಕಾರು ಅವರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ...
ಜ 25 ಸಚಿವ ದಿನೇಶ್ ಗುಂಡೂರಾವ್ ಬೆಳ್ತಂಗಡಿಗೆ; ಕುಕ್ಕೇಡಿ ಅಂಬೇಡ್ಕರ್ ಭವನ ಉದ್ಘಾಟನೆ
ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜ25ರಂದು ಆಗಮಿಸಲಿದ್ದಾರೆ.ಬೆಳಿಗ್ಗೆ 10 ಗಂಟೆಗೆಕಾಶಿಪಟ್ನ ಗ್ರಾಮ ಪಂಚಾಯತ್ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲಿರುವ ಸಚಿವರುಬಳಿಕ 11 ಗಂಟೆಗೆಕುಕ್ಕೆಡಿಯಲ್ಲಿ ನವೀಕೃತ ಡಾ. ಬಿ.ಆರ್ ಅಂಬೇಡ್ಕರ್ ಭವನದ ಉದ್ಘಾಟನೆ ಮತ್ತು ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಮಧ್ಯಾಹ್ನ 12:30ಕನ್ಯಾಡಿ ಗ್ರಾಮದ ಪಡ್ಪು ಎಂಬಲ್ಲಿ ಮೂರು ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಧ್ಯಾಹ್ನ 1.15ನಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದುಮಧ್ಯಾಹ್ನ 2 ಗಂಟೆಗೆಕಾಜೂರು...















