ಡಿ16 ಬೆಳ್ತಂಗಡಿಯಲ್ಲಿ ಕೊಂದವರು ಯಾರು ಮಹಿಳಾ ಅಭಿಯಾನ
ಬೆಳ್ತಂಗಡಿ: ಧರ್ಮಸ್ಥಳ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ, ಕೊಲೆ, ಅಸಹಜ ಸಾವುಗಳಿಗೆ ಕಾರಣ ಯಾರು ಎಂದು ಪತ್ತೆಹಚ್ಚಲು ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಕೊಂದವರು ಯಾರು ಅಭಿಯಾನ ಸಮಿತಿಯ ವತಿಯಿಂದ ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಡಿ 16 ರಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳಿಂದ 1,000ದಷ್ಟು ಮಹಿಳೆ ಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಿಯಾನದ ಪ್ರಮುಖರಾದ ಜ್ಯೋತಿ ಎ. ತಿಳಿಸಿದ್ದಾರೆ. ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನಲ್ಲಿ...
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 9ರವರೆಗೆ ಅಷ್ಟಬಂಧಬ್ರಹ್ಮಕಲಶೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ.
ಬೆಳ್ತಂಗಡಿ. ತಾಲೂಕಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 9ರವರೆಗೆ ಅಷ್ಟಬಂಧಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು. ಇದರ ವಿಜ್ಞಾಪನ ಪತ್ರವನ್ನು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು,ದೇವಸ್ಥಾನದ ಪ್ರಧಾನ ಅರ್ಚಕರಾದ ವಿ ಕೃಷ್ಣತಂತ್ರಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿವಾಕರ ಭಂಡಾರಿ, ಜಗದೀಶ್ ಹೆಗಡೆ,ಲಕ್ಷ್ಮಣ್ ಬಂಗೇರ, ಶಂಕರ ಶ್ರೀಮತಿ ಯಶೋಧ, ಶ್ರೀಮತಿ ರಶ್ಮಿ,ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಜಗದೀಶ್, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಹೆಗ್ಡೆ, ಜೊತೆ...
ಜಾತಕ ತೋರಿಸಲು ಬಂದ ಯುವತಿಯ ನ್ನು ಮದುವೆ ಮಾಡಿಸಿ ಕೊಡುವಂತೆ ಬೆನ್ನು ಬಿದ್ದ ಅರ್ಚಕ, ಮಧ್ಯರಾತ್ರಿ ಮನೆಗೆ ನುಗ್ಗಿ ವಾಮಾಚಾರ ಪ್ರಕರಣ ದಾಖಲು
ಬೆಳ್ತಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಅರ್ಚಕ & ಜ್ಯೋತಿಷಿಯೊಬ್ಬ ಯುವತಿಗೆ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ್ದಲ್ಲದೆ ಅವರ ಮನೆಗೆ ತೆರಳಿ ವಾಮಾಚಾರ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ಮನೆಯವರು ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ. ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ ಶೇಷಾದ್ರಿ ಎಂಬಾತನೇ ಆರೋಪಿ ಜ್ಯೋತಿಷಿಯಾಗಿದ್ದಾನೆ.ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ತೆಕ್ಕಾರಿನ ಯುವತಿಯೊಬ್ಬಳ ಜಾತಕ ಪರಿಶೀಲಿಸಲು ಹಾಗೂ ದೇವಸ್ಥಾನದಲ್ಲಿ...
ನಿರಂತರ ಚಿರತರ ಕಾಟ ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಡಲು ಅಧಿಕಾರಿಗಳಿಗೆ ಮನವಿ
ಬೆಳ್ತಂಗಡಿ : ಮೇಲಂತಬೆಟ್ಟು ಮತ್ತು ಕಲ್ಕಣಿ ಚರ್ಚ್ ರೋಡ್ ಪರಿಸರದಲ್ಲಿ ನಾಯಿಗಳನ್ನು ಚಿರತೆ ಹಿಡಿದುಕೊಂಡು ಕೊಂದು ಹಾಕಿರುವ ಬಗ್ಗೆ ಗ್ರಾಮಸ್ಥರು ಮನವಿ ಪತ್ರ ನೀಡಿದ್ದಾರೆ. ಚಿರತೆಗಳು ಸಾಲು ಮರದ ತಿಮ್ಮಕ್ಕ ಉದ್ಯಾನವನದಿಂದ ಕೆಳಗಡೆ ಇಳಿದು ಮೇಲಂತಬೆಟ್ಟು ಕ್ರೈಸ್ ಪರಿಸರದಿಂದ ಹಾಗೂ ಕಲ್ಕಣಿ ವಠಾರದಲ್ಲಿ ಹಲವಾರು ಸಾಕು ನಾಯಿಗಳನ್ನು ಕೊಂದು ತಿಂದಿವೆ. ಇನ್ನು ಹೆಚ್ಚಾಗಿ ಈ ಪರಿಸರದಲ್ಲಿ ಅಂಗನವಾಡಿ ಕೇಂದ್ರ ಮತ್ತು ಶಾಲಾ ಮಕ್ಕಳು ಸೇರಿದಂತೆ ಅನೇಕ ನಾಗರಿಕರು ದಿನನಿತ್ಯ ತಮ್ಮ ವ್ಯವಹಾರಕ್ಕೆ ನಡೆದುಕೊಂಡು ಹೋಗುತ್ತಾರೆ. ಮುಂದೆ ಈ ಚಿರತೆ ದಾಳಿ ಮಾನವರ ಮೇಲೆ ಆಗಬಹುದು...
ಉಪ್ಪಿನಂಗಡಿ; ಬೈಕ್ ಕಾರು ನಡುವೆ ಅಪಘಾತ ಬೈಕ್ ಸವಾರನಿಗೆ ಗಂಭೀರ ಗಾಯ
ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಡಿ.11ರಂದು ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ. ಮಠ ನಿವಾಸಿ ಬದ್ರುದ್ದೀನ್ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಸವಾರನನ್ನು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
ಬೆಳ್ತಂಗಡಿ: ಅಂಗಡಿಗೆ ಬಂದಿದ್ದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ತಡವಾಗಿ ಪೋಕೋ ಪ್ರಕರಣ ದಾಖಲಾಗಿದೆ. ನೊಂದ ಬಾಲಕಿ ಅಂಗಡಿಗೆ ಹೋದಾಗ ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಮೂರ್ನಾಲ್ಕು ಬಾರಿ ಇದೇ ರೀತಿ ದೌರ್ಜನ್ಯ ಮಾಡಿ, ಇದನ್ನು ಯಾರಿಗಾದರೂ ಹೇಳಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಕಳೆದ ತಿಂಗಳು ಬೆಳಿಗ್ಗೆ ಬಾಲಕಿ ಬೀಗ ತೆರೆದಿದ್ದ ಅಂಗಡಿ ಒಳಗೆ ಹೋಗಿ ಬರುವ ಸಮಯ ದಾಖಲಾದ ಸಿ ಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆರೋಪಿ ಬೇರೆಯವರಿಗೆ ಕಳುಹಿಸಿ ಬಾಲಕಿ ಕಳ್ಳಿ ಎಂದು...
ಪಡಂಗಡಿ: ಕರು ಕೊಂದ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ.
ಬೆಳ್ತಂಗಡಿ; ಪಡಂಗಡಿ ಗ್ರಾಮದ ಕೊಡಿಯೇಲು ಎಂಬಲ್ಲಿ ಕರುವನ್ನು ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಡಂಗಡಿ ಪರಿಸರದಲ್ಲಿ ಚಿರತೆ ಸಂಚಾರದ ಮಾಹಿತಿಯನ್ನು ಕಲೆಹಾಕಿ ಚಿರತೆ ಸೆರೆಗೆ ಗೂಡು ಇರಿಸುವ ಕಾರ್ಯ ಮಾಡಿದ್ದಾರೆ.ದೇಜಪ್ಪ ಮೂಲ್ಯ ಎಂಬುವವರ ಕರುವನ್ನು ಚಿರತೆ ಕೊಂದ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್ ಅವರ ಮಾರ್ಗದರ್ಶನದಂತೆ ಇಲಾಖೆಯಿಂದ ದೊರಕುವ ಸೂಕ್ತ ಪರಿಹಾರವನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಸಹಾಯಕ ವಲಯ ಅರಣ್ಯಾಧಿಕಾರಿ ಕಿರಣ್ ಪಾಟೀಲ್, ಬೀಟ್ ಫಾರೆಸ್ಟರ್ ಪರಶುರಾಮ್,...
ಕಳೆದು ಸಿಕ್ಕಿದ್ದ 2.50ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಮರಳಿಸಿ ಪ್ರಾಮಾಣಿಕತೆ ಮೆರೆದ ವಿನಯ್ ನಿವೇದಿತಾ
ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಅಂಡಿಲ ನಿವಾಸಿ ರಕ್ಷಿತ್ ಇವರ ಪತ್ನಿ ಶ್ರೀಮತಿ ದೀಕ್ಷ ರಕ್ಷಿತ್ ರವರ ರೂ 2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ಉಪ್ಪಿನಂಗಡಿ ಹೋಟೆಲ್ ನಲ್ಲಿ ಡಿಸೆಂಬರ್ ಸಂಜೆ 10 ರಂದು ಕೈ ತಪ್ಪಿ ಕಳೆದು ಹೋಗಿತ್ತು. ಮನೆಗೆ ಹೋಗಿ ನೋಡುವಾಗ ಚಿನ್ನ, ನಗದು ಕಳೆದುಹೋಗಿರುವ ಬಗ್ಗೆ ಅರಿವಾಗುತ್ತೆ, ತಕ್ಷಣ ತನ್ನ ಸಂಬಂಧಿಕರಲ್ಲಿ ತಿಳಿಸಿ ಹೋಟೆಲ್ ನಲ್ಲಿ ವಿಚಾರಿಸಲು ತಿಳಿಸಿದಾಗ ನಂತರ ಚೆಕ್ ಮಾಡಿದಾಗ ಯಾರಿಗೆ ಸಿಕ್ಕಿದೆ ಅನ್ನೋದು...
ಪಡಂಗಡಿ; ಚಿರತೆ ದಾಳಿಗೆ ಕರು ಬಲಿ
ಬೆಳ್ತಂಗಡಿ; ಚಿರತೆಯೊಂದು ದಾಳಿ ಮಾಡಿ ಕರುವನ್ನು ಕೊಂದು ತಿಂದು ಹಾಕಿದ ಘಟನೆ ಪಡಂಗಡಿಯ ದೇಜಪ್ಪ ಎಂಬವರ ಮನೆಯಲ್ಲಿ ನಡೆದಿದೆ. ಚಿರತೆಯು ಕರುವಿನ ಹೊಟ್ಟೆಯ ಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಫಾರೆಸ್ಟ್ ಇಲಾಖೆ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಕೊಟ್ಟು ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಚಿರತೆಯನ್ನು ಆದಷ್ಟು ಶೀಘ್ರವಾಗಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಡಿ.13: ಕಡಬದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ
ಮಂಗಳೂರು: ವಿಜಯ್ ದಿವಸ್ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ ಡಿ.13ರಂದು ಕಡಬದ ನೆಲ್ಯಾಡಿಯ ಬಿರ್ವ ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ನಡೆಯಲಿದೆ ಎಂದು ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ನೋಬರ್ಟ್ ರೋಡ್ರಿಗಸ್ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ 1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗಿಯಾದ ದ.ಕ. ಜಿಲ್ಲೆಯ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ., ಮಾಜಿ ಸಂಸದೆ ತೇಜಸ್ವಿನಿ ಗೌಡ, ಪುತ್ತೂರು ಶಾಸಕರಾದ...














