ತಾಲೂಕು ಭೂ ನ್ಯಾಯಮಂಡಳಿಗೆ ಸದಸ್ಯರ ನೇಮಕ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಗೆ ಸರಕಾರ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿದೆ.ಶಿರ್ಲಾಲು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ನೆಲ್ಲಿಗುಡ್ಡೆ ಶಿರ್ಲಾಲು ಇದರ ಆಡಳಿತ ಸಮಿತಿಯ ಅಧ್ಯಕ್ಷರು,ಜನ ಶಿಕ್ಷಣ ನಿಲಯದ ಮಾಜಿ ಜಿಲ್ಲಾ ಅಧ್ಯಕ್ಷರು ಸಾಮಾಜಿಕ ಕಾರ್ಯಕರ್ತರಾದ ಬಾಬು ಎ ಎರ್ಮೆತ್ತೋಡಿ, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ,ಪುದುವೆಟ್ಟು ಮಿಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಬೊಮ್ಮಣ್ಣ ಗೌಡ, ಮಾಜಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು ,ತೊಟತ್ತಾಡಿ ಕಾಂಗ್ರೆಸ್ ಗ್ರಾಮ...

ಕೇಅಮದ್ರದಿಂದ ರಾಜ್ಯಕ್ಕೆ ಅನ್ಯಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

0

ನವದೆಹಲಿ: ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ 2017-18 ರಿಂದ ಕರ್ನಾಟಕಕ್ಕೆ 1,87,867 ಕೋಟಿ ರೂ.ಗಳ ನಷ್ಟವಾಗಿದ್ದು ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಎಸಗಿರುವ ಆರ್ಥಿಕ ದೌರ್ಜನ್ಯದ ಕೇಂದ್ರ ದ ವಿರುದ್ಧ ಜಂತರ್ ಮಂತರ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಹಂಚಿಕೆಯಲ್ಲಿ ಇಳಿಕೆ, ಮೂಲಸೌಕರ್ಯ ಬದ್ಧತೆಗಳ ಈಡೇರಿಕೆಯಲ್ಲಿ ಮತ್ತು ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣೆಗೆ ಅನುದಾನ ಬಿಡುಗಡೆಯಲ್ಲಿನ ವಿಳಂಬದ ಕುರಿತು...

ರೈಲಿನಲ್ಲಿ ಮಹಿಳೆಯ ಕೊಲೆ ತನಿಖೆಗೆ ಒತ್ತಾಯಿಸಿ ಮನವಿ

0

ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಕೆಶಿವಮೊಗ್ಗ-ಬೆಂಗಳೂರು ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಜ. 30ರಂದು ಮಹಿಳೆಯೊಬ್ಬರನ್ನು ಕೊಲೆ ಮಾಡಿ ದರೋಡೆ ನಡೆಸಿದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಕುರಿತು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಬೆಳ್ತಂಗಡಿ ತಹಸೀಲ್ದಾರ್ ಮೂಲಕ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸಮಾಜದ ಅನ್ನಪೂರ್ಣ ರಾನಡೆಯವರು ಶಿವಮೊಗ್ಗದಲ್ಲಿ ಇಲಾಖೆ ನಡೆಸಿದ ಸ್ಟೆನೋಗ್ರಾಫರ್ ಪರೀಕ್ಷೆ ಮೇಲ್ವಿಚಾರಕಿಯಾಗಿ...

ಕಡಿರುದ್ಯಾವರದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ ನಗದು ಕಳವು

0

ಬೆಳ್ತಂಗಡಿ: ಕಡಿರುದ್ಯಾವರ ಮುಸ್ತಾಫ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆ ಹಂಚು ತೆಗೆದು ಒಳನುಗ್ಗಿ ರೂಮಿನ ಗಾಡೇಜ್ ನಲ್ಲಿರಿಸಿದ್ದ ರೂ 1,71,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ 1,20,000/- ಹಣವನ್ನು ಕಳವು ಮಾಡಿಕೊಂಡ ಘಟನೆ ನಡೆದಿದೆರಂದು ನಡೆದಿದೆ.ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಮುಸ್ತಾಪ್ (30) ಎಂಬವರ ದೂರಿನಂತೆ, ಫೆ;05 ರಂದು ತನ್ನ ಬಾಬು ಗೂಡ್ಸ್‌ ವಾಹನದ ಸರ್ವಿಸ್ ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದವರು, ಆ ದಿನ ಅಲ್ಲಿಯೇ ತಂಗಿರುತ್ತಾರೆ. ಬೆಳ್ತಂಗಡಿಯ ಮನೆಯಲ್ಲಿದ್ದ ಅವರ ತಾಯಿ ಕೂಡಾ ಇದಿನ ರಾತ್ರಿ,...

ಸಾಲದ ಆಪ್ ಗಳ ವಿರುದ್ದ ಕೇಂದ್ರ ಸರಕಾರದಿಂದ ಕಠಿಣ ಕ್ರಮ

0

ನವದೆಹಲಿ : ಸಾಲ ನೀಡುವ ಆಯಪ್‌ ಗಳ ಬಗ್ಗೆ ಕೇಂದ್ರ ಸರ್ಕಾರವು ಗೂಗಲ್‌ ನೊಂದಿಗೆ ಮಹತ್ವದ ಕ್ರಮ ಕೈಗೊಂಡಿದ್ದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಮತ್ತು ಗೂಗಲ್ ಕಳೆದ 2.5 ವರ್ಷಗಳಲ್ಲಿ ಪ್ಲೇ ಸ್ಟೋರ್‌ ನಿಂದ 4,700 ಮೋಸದ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿದೆ. ಹಣಕಾಸು ಖಾತೆ ರಾಜ್ಯ ಸಚಿವ ಭಗವತ್ ಕರದ್ ಅವರು ಸಂಸತ್ತಿನಲ್ಲಿ ಈ ಮಾಹಿತಿ ನೀಡಿದ್ದಾರೆ. ಅಕ್ರಮ ಸಾಲ ಅಪ್ಲಿಕೇಶನ್ಗಳ ಹಾವಳಿಯನ್ನು ನಿಗ್ರಹಿಸಲು ಸರ್ಕಾರವು ಆರ್ಬಿಐ ಮತ್ತು ಇತರ ನಿಯಂತ್ರಕ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿದೆ.ಆರ್‌ ಬಿಐ...

ಸಂವಿಧಾನ ಜಾಗೃತಿ ಜಾಥಾಕ್ಕೆ ಬೆಳ್ತಂಗಡಿಗೆ ಸ್ವಾಗತ

0

ದ.ಕ ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ ಬೆಳ್ತಂಗಡಿ,ತಾಲೂಕು ಪಂಚಾಯತ್ ಬೆಳ್ತಂಗಡಿ, ,ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಹೊಸಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾವು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ಮೂಲಕ ತಾಲೂಕಿಗೆ ಆಗಮಿಸಿತು ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳು ತಾಲೂಕು ದಂಡಾಧಿಕಾರಿಗಳಾದ ಶ್ರೀ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವಾನಿ ಶಂಕರ್ ಎನ್ , ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಹೇಮಚಂದ್ರ,ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರಶಾಂತ್ ಬಳಂಜ, ತಾಲೂಕು...

ಲೊಕಸಭಾ ಚುನಾವಣೆ ಜೆ.ಡಿ.ಎಸ್. ಉಸ್ತುವಾರಿಗಳ ನೇಮಕ

0

ಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದ 28 ಕ್ಷೇತ್ರಗಳಿಗೆ ಜೆಡಿಎಸ್ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.ಯಾವೆಲ್ಲ ಜಿಲ್ಲೆಗಳಿಗೆ ಯಾರೆಲ್ಲ ಉಸ್ತುವಾರಿಗಳು ಇಲ್ಲಿದೆ ಮಾಹಿತಿಬಾಗಲಕೋಟೆಉಸ್ತುವಾರಿ: ಹನುಮಂತ ಮವಿನಮರದಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿವಿಜಯಪುರಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್ಚಿಕ್ಕೋಡಿಉಸ್ತುವಾರಿ: ಕೆ.ಪಿ.ಮೇಗಣ್ಣನವರಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿಬೆಳಗಾವಿಉಸ್ತುವಾರಿ: ಶಂಕರ ಮಾಡಳಗಿಸಹ ಉಸ್ತುವಾರಿ: ನಾಜೀರ್...

ದೆಹಲಿ ಪ್ರತಿಭಟನೆಯ ಬಗ್ಗೆ ಸಿದ್ದರಾಮಯ್ಯ ಅವರು ಏನು ಹೇಳಿದರು?

0

ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸರಕಾರದ ಧೋರಣೆಯ ವಿರುದ್ದದ ರಾಜ್ಯ ಸರಕಾರದ ಪ್ರತಿಭಟನೆಯ ಬಗ್ಗೆ ತಾಜ್ಯದ ಮುಖ್ಯಮಂತ್ರಿ ಸಿದ್ದರಯ್ಯ ಅವರು ತಮ್ಮ ಅನಿಸಿಕೆಗಳನ್ನು ಈರೀತಿ ಹಂಚಿಕೊಂಡಿದ್ದಾರೆ"ನಮ್ಮ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 07ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ. ಬಿಜೆಪಿ ಶಾಸಕರು, ಸಂಸದರು, ನಾಯಕರಿಗೂ ಈ ಮೂಲಕ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾವು ಬಿಜೆಪಿ ವಿರುದ್ಧ ಪ್ರತಿಭಟನೆ...

ಕುಕ್ಕೇಡಿ ಪಟಾಕಿ ದುರಂತ ನಾಲ್ಕನೇ ಆರೋಪಿ ಬಂಧನ

0

ಬೆಳ್ತಂಗಡಿ : ವೇಣೂರು ಸಮೀಪ ಕುಕ್ಕೇಡಿಯಲ್ಲಿ ನಡೆದಿದ್ದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.ಜ.28 ರಂದು ಸಂಜೆ ವೇಣೂರಿನ ಕುಕ್ಕೇಡಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಕೆ ವೇಳೆ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮೂವರನೇ ಆರೋಪಿ ದುರಂತದಲ್ಲಿ ಸಾವನ್ನಪ್ಪಿದ ವರ್ಗೀಸ್ ಆಗಿದ್ದಾರೆ. ನಾಲ್ಕನೇ ಆರೋಪಿ ಬೆಂಗಳೂರು ಉತ್ತರದ ದಿವಾನರ ಪಾಳ್ಯ ಗೋಕುಲ ನಿವಾಸಿ ಅನಿಲ್ ಎಂ ಡೇವಿಡ್(49)ಆಗಿದ್ದು, ಈತನನ್ನು ಫೆ 4 ರಂದು ಬೆಂಗಳೂರಿನಿಂದ ಬಂಧಿಸಿ ಫೆ 5 ರಂದು ಬೆಳ್ತಂಗಡಿ...

ಕುಕ್ಹಕೇಡಿ ಸ್ಪೋಟ ಹರೀಶ್ ಕುಮಾರ್ ಅವರಿಂದ ಪರಿಶೀಲನೆ

0

ಬೆಳ್ತಂಗಡಿ ತಾಲ್ಲೂಕಿನ ಕುಕ್ಕೇಡಿಯಲ್ಲಿ ಪಟಾಕಿ ಸ್ಪೋಟದಿಂದ ಮೂರು ಕಾರ್ಮಿಕರನ್ನು ಬಲಿ ತೆಗೊಂಡ ಸ್ಥಳಕ್ಕೆ ಭೇಟಿ ನೀಡಿ, ನಂತರ ಸ್ಪೋಟದಿಂದ ಭಾದಿತರಾದ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ಬೆಳ್ತಂಗಡಿ ತಹಸೀಲ್ದಾರನ್ನು ಸಂಪರ್ಕಿಸಿ ಪರಿಹಾರದ ಬಗ್ಗೆ ಮಾತನಾಡಿದ ಸಂದರ್ಭ. ಸರಕಾರಕ್ಕೆ ವರದಿ ನೀಡಿ ಪರಿಹಾರದ ಭರವಸೆಯನ್ನು ನೀಡಲಾಯಿತು.