Home ಸ್ಥಳೀಯ ಸಮಾಚಾರ ಉಜಿರೆ ಹಳೆಪೇಟೆಯಲ್ಲಿ ರಸ್ತೆಗೆ ಉರುಳಿದ ಹೆಮ್ಮರ

ಉಜಿರೆ ಹಳೆಪೇಟೆಯಲ್ಲಿ ರಸ್ತೆಗೆ ಉರುಳಿದ ಹೆಮ್ಮರ

413
0

ಉಜಿರೆ. ಟಿ.ಬಿ ಕ್ರಾಸ್ ಬಳಿ ಮುಖ್ಯ ರಸ್ತೆಗೆ ಬೃಹತ್ ಆಕಾರದ ಮರ ಬಿದ್ದ ಘಟನೆ ಜೂ.8ರಂದು ನಡೆದಿದೆ.

ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಇರುವ ಅಪಾಯಕಾರಿ ಮರಗಳು ರಸ್ತೆಗೆ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮರ ಮುರಿದು ಬಿದ್ದಾಗ ರಸ್ತೆಯಲ್ಲಿದ್ದ ಬೈಕ್ ಮೇಲೆ ಮರ ಬಿದ್ದಿದ್ದು ಪ್ರಯಾಣಿಕ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆಮೇಲೆ ಬಿದ್ದ ಮರವನ್ನು ತೆರವುಗೊಳಿಸಲು ಎಸ್.ಟಿ.ಡಿ.ಯು ಆಟೋಚಾಲಕರ ಸಂಘದವರು ಸಹಕರಿಸಿದರು

ಇಂತಹ ಅನೇಕ ಮರಗಳು ಆ ಪರಿಸರದಲ್ಲಿ ಇದ್ದು ಇದನ್ನು ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಘಟನೆಯಲ್ಲಿ ಬೈಕ್ ಹಾಗೂ ಕಾರು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here