ಚಾರ್ಮಾಡಿಯಲ್ಲಿ ವಿದ್ಯುತ್ ಲೈನಿನ ಮೇಲೆ ಮರ ಉರುಳಿಸಿದ ಕಾಡಾನೆ, ವಿದ್ಯುತ್ ವ್ಯತ್ಯಯ
ಬೆಳ್ತಂಗಡಿ; ಚಾರ್ಮಾಡಿಯಲ್ಲಿ ಕಾಡಾನೆ ರಸ್ತೆಬದಿಯಲ್ಲಿದ್ದ ಮರವನ್ನು ವಿದ್ಯುತ್ ಲೈನಿನ ಮೇಲೆ ದೂಡಿಹಾಕಿದ ಪರಿಣಾಮ ಈ ಪರಿಸರದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.ಶನಿವಾರ ರಾತ್ರಿಯವೇಳೆ ಚಾರ್ಮಾಡಿ ಮಠದಮಜಲು ಸಮೀಪ ಕಾಡಾನೆ ರಸ್ತೆಬದಿಯಲ್ಲಿದ್ದ ಈಚಲು ಮರವನ್ನು ಉರುಳಿಸಿದೆ. ಮರ 33ಕೆ.ವಿ ತ್ರಿನೇತ್ರ ಲೈನಿನ ಮೇಲೆ ಹಾಗೂ 11ಕೆ.ವಿ ಲೈನ್ ಚಾರ್ಮಾಡಿ ಫೀಡರಿನ ಮೇಲೆ ಬಿದ್ದಿದ್ದು ಲೈನಿಗೆ ಹಾನಿಯುಂಟಾಗಿದ್ದು ಕೆಲವು ಬಿಡಿ ಭಾಗಗಳು ಸುಟ್ಟು ಹೋಗಿದೆ. ಮೆಸ್ಕಾಂ ಸಿಬ್ಬಂದಿಗಳು ಪರಿಶ್ರಮಪಟ್ಟು ವಿದ್ಯುತ್ ಪೂರೈಕೆಗೆ ವ್ಹವಸ್ಥೆ ಮಾಡಿದ್ದಾರೆ.
ಕೊಕ್ಕಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಸಾವು
ಬೆಳ್ತಂಗಡಿ : ಸಂಶಯಾಸ್ಪದವಾಗಿ ಯುವಕನೋರ್ಮ ಸಾವನ್ನಪ್ಪಿರುವ ಘಟನೆ ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ನಡೆದಿದೆ. ಹರೀಶ್ (35) ಎಂಬಾತನೇ ಸಂಶಯಾಸ್ಪದ ವಾಗಿ ಮೃತಪಟ್ಟ ಯುವಕನಾಗಿದ್ದಾನೆ . ಘಟನೆ ಏ.25ರಂದು ಮಧ್ಯಾಹ್ನ ನಡೆದಿದೆ, ತಡವಾಗಿ ಬೆಳಕಿಗೆ ಬಂದಿದೆ. ಮೃತ ಹರೀಶ್(35) ಮತ್ತು ಆತನ ತಂದೆ ಚೋಮ ಎಂಬವರು ಮನೆಯಲ್ಲಿ ಇಬ್ಬರೆ ವಾಸವಾಗಿದ್ದು, ತಾಯಿ ಈ ಹಿಂದೆ ನಿಧನ ಹೊಂದಿದ್ದರು.ಹರೀಶ್ ಏ.25ರಂದು ಮಧ್ಯಾಹ್ನ ಮೃತಪಟ್ಟಿದ್ದರು. ತಂದೆ ಚೋಮರವರು ಯಾರನ್ನು ಹತ್ತಿರಕ್ಕೆ ಬಿಡದ ಕಾರಣ ಎ.26 ರಂದು ಮಧ್ಯಾಹ್ನ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ...
ಕಟ್ಟದಬೈಲು ಸಂತಾನಪ್ರದ ನಾಗಕ್ಷೇತ್ರದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪುನರ್ ಪ್ರತಿಷ್ಠೆ
ಧರ್ಮಸ್ಥಳ; ಸಂತಾನ ಪ್ರದ ನಾಗಕ್ಷೇತ್ರ ಕಟ್ಟದಬೈಲು ಇಲ್ಲಿ ಎ 26 ಶುಕ್ರವಾರದಂದು ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ಹಾಗೂ ಡೆಕ್ಕರತ್ತಾಯ (ರಕ್ತೇಶ್ವರಿ ), ಪಂಜುರ್ಲಿ ದೈವಗಳ ಪುನರ್ಪ್ರತಿಷ್ಠೆ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಹಿರಿಯಮುಖಂಡರೂ ವಿಧಾನ ಪರುಷತ್ ಸದಸ್ಯರೂ ಆದ ಪ್ರತಾಪ್ ಸಿಂಹ ನಾಯಕ್ ಅವರು ಶ್ರೀ ನಾಗಸನ್ನಿದಿ ಕಟ್ಟದಬೈಲು ಶ್ರೀ ನಾಗಕ್ಷೇತ್ರಕ್ಕೆ ಆಗಮಿಸಿ ಅರ್ಚಕರಾದ ರವಿ ಕುಮಾರ್ ಭಟ್ ಪಜೀರಡ್ಕ ಅವರಿಂದ ಶ್ರೀ ನಾಗದೇವರ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದೆಯೂ...
ತಾಲೂಕಿನಲ್ಲಿ ಶೇ 81.34 ಮತದಾನ
ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ತಾಲೂಕಿನಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34ಶೇ ಮತದಾನವಾಗಿದೆ.ತಾಲೂಕಿನಲ್ಲಿ 115331ಮಂದಿ ಪುರುಷ ಮತದಾರರಿದ್ದು ಅವರಲ್ಲಿ 93,728ಮತ ಚಲಾಯಿಸಿದ್ದಾರೆ. 1,17,485ಮಂದಿ ಮಹಿಳಾ ಮತದಾರರಿದ್ದು ಅವರಲ್ಲಿ 95,568ಮಂದಿ ಮತಚಲಾಯಿಸಿದ್ದಾರೆ. ಒಟ್ಟು 2,32,817 ಮತದಾರರಿದ್ದು ಅವರಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34 ಶೇ ಮತದಾನವಾಗಿದೆ.ಬೆಳಗ್ಗಿನಿಂದಲೇ ತಾಲೂಕಿನ 241ಮತಗಟ್ಟೆಗಳಲ್ಲಿಯೂ ಮತದಾರ ಸರತಿಯ ಸಾಲು ಕಂಡುಬಂದಿತ್ತು. ಜನರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾದರು.
ಶಾಸಕ ಹರೀಶ್ ಪೂಂಜ ಅವರಿಂದ ತಾಲೂಕಿನಾದ್ಯಂತ ಕಾರ್ಯಕರ್ತರ ಭೇಟಿ
ಬೆಳ್ತಂಗಡಿ; ಲೋಕಸಭಾ ಚಿನಾವಣೆಯ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ನಡೆಸಿದರು. ತಾಲೂಕಿನ ವಿವಿಧ ಬೂತ್ ಗಳಿಗೆ ಭೇಟಿ ನೀಡಿದ ಶಾಸಕರು ಕಾರ್ಯಕರ್ತರು, ಮುಖಂಡರುಗಳೊಂದಿಗೆ ಮಾತುಕತೆ ನಡೆಸಿದರು. ಬೂತ್ ಗಳಿಗೆ ತರಳಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಗೌಡ ಹಾಗೂ ಅಭಿನಂದನ್ ವಿವಿಧ ಬೂತ್ ಗಳಿಗೆ ಭೇಟಿ
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಶ್ರೀ ರಂಜನ್ ಜಿ ಗೌಡ ರವರು ಹಾಗೂ ಕಾರ್ಯದರ್ಶಿಯಾದ ಅಭಿನಂದನ್ ಹರೀಶ್ ಕುಮಾರ್ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸ್ವೀಕರಿಸಿ, ಕಾರ್ಯಕರ್ತರನ್ನು ಹುರಿತುಂಬಿಸಿದರು.
ಬಾಂಜಾರುಮಲೆಯಲ್ಲಿ ಶೇ 100ಮತದಾನದ ದಾಖಲೆ
ಬೆಳ್ತಂಗಡಿ: ನೆರಿಯ ಗ್ರಾಮದ ಅತ್ಯಂತದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನವಾದ ದಾಖಲೆ ನಿರ್ಮಾಣವಾಗಿದೆ.ಆದಿವಾಸಿ ಮಲೆಕುಡಿಯ ಸಮುದಾಯಸವರು ವಾಸಿಸುತ್ತಿರುವ ಬಾಂಜಾರು ಮಲೆ ಬೂತ್ ನಲ್ಲಿ ಎಲ್ಲರೂ ಉತ್ಸಾಹದಿಂದ ಮತದಾನದಲ್ಲಿ ಭಾಗಿಗಳಾದರು.ಬಾಂಜಾರುಮಲೆ ಮತಗಟ್ಟೆ ಸಂಖ್ಯೆ 86ರಲ್ಲಿ 111 ಮಂದಿ ಮತದಾರರಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಇಲ್ಲಿ 51 ಮಂದಿ ಪುರುಷರು ಮತ್ತು 60 ಮಂದಿ ಮಹಿಳಾ ಮತದಾರರು ಇದ್ದು, ಎಲ್ಲರೂ ಮತ ಚಲಾಯಿಸಿದ್ದಾರೆ.ಅನನ್ಯ ಮತಗಟ್ಟೆಯೆಂದು ಗುರುತಿಸಲಾಗಿದ್ದ ಬಾಂಜಾರು ಮಲೆ ಮತಗಟ್ಟೆಯಲ್ಲಿ...
ಪಡುಬಿದ್ರೆಯಲ್ಲಿ ಅಪಘಾತ ಅರಸಿನಮಕ್ಕಿಯ ಮಹಿಳೆ ಸಾವು
ಬೆಳ್ತಂಗಡಿ; ಪಡುಬಿದ್ರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅರಸಿನಮಕ್ಕಿ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮೃತ ಮಹಿಳೆ ಅರಸಿನಮಕ್ಕಿ ನಿವಾಸಿ ಪುರುಷೋತ್ತಮ ಅಭ್ಯಂಕರ್ ಅವರ ಪತ್ನಿ ಸುಮಂಗಲ(55)ಎಂಬವರಾಗಿದ್ದಾರೆ. ಮಂಗಳೂರಿನಿಂದಪಡುಬಿದ್ರೆಗೆ ಬರುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಸುಮಂಗಳ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪುರುಷೋತ್ತಮ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ನಡ ಗ್ರಾಮದಲ್ಲಿ ಮತ ಚಲಾಯಿಸಿದ ಹರೀಶ್ ಕುಮಾರ್
ಬೆಳ್ತಂಗಡಿ; ವಿಧಾನ ಪರಿಷತ್ ಸದಸಸ್ಯರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಅವರು ನಡ ಗ್ರಾಮದ ಮತಗಟ್ಟೆ ಸಂಖ್ಯೆ 36ರಲ್ಲಿ ಮತ ಚಲಾಯಿಸಿದರು.
ಎಸ್.ಡಿ.ಪಿ.ಐ ಮುಖಂಡರಿಂದ ಮತದಾನ
ಬೆಳ್ತಂಗಡಿ; 2024ರ ಲೊಕಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ. ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಯವರು ಬೂತ್ ಸಂಖ್ಯೆ 106 ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಯಲ್ಲಿ ಮತದಾನ ಮಾಡಿದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಯವರು ತಮ್ಮ ಪತ್ನಿಯೊಂದಿಗೆ ತೆಂಕಕಾರಂದೂರು 2ನೇ ವಾರ್ಡ್, ಪೆರಾಲ್ದರ ಕಟ್ಟೆಯಲ್ಲಿ ಮತದಾನ ಮಾಡಿದರು.















