ಬೆಳ್ತಂಗಡಿ:ಚಾರ್ಮಾಡಿ ಪೋಲಿಸ್ ಚೆಕ್ ಪೋಸ್ಟ್ ಬಳಿ ಲಾರಿ ಚರಂಡಿಗೆ ಬಿದ್ದು ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಚಾರ್ಮಾಡಿ ಘಾಟಿಯಲ್ಲಿ ಆರು ಚಕ್ರಕ್ಕಿಂತ ಅಧಿಕ ಸಾಮರ್ಥ್ಯದ ಘನವಾಹನಗಳಿಗೆ ಪ್ರವೇಶ ಇರುವುದಿಲ್ಲ. ಈ ವೇಳೆ 12 ಚಕ್ರದ ಲಾರಿ ಚಾರ್ಮಾಡಿ ಗೇಟ್ ಮೂಲಕ ಪ್ರವೇಶಿಸಲು ಯತ್ನಿಸಿದಾಗ ಹಿಂದೆ ಕಳಿಸಲಾಯಿತು. ಇಲ್ಲಿ ಲಾರಿ ತಿರುವು ಪಡೆಯುತ್ತಿದ್ದ ಸಂದರ್ಭ ಚರಂಡಿಗೆ ಇಳಿಯಿತು. ಸ್ಥಳೀಯರು ಹಾಗೂ ಪ್ರಯಾಣಿಕರು ಸೇರಿ ಲಾರಿಯನ್ನು ತೆರವುಗೊಳಿಸಿದ ಬಳಿಕ ಇತರ ವಾಹನಗಳು ಸಂಚರಿಸಿದವು.
