Home ಸ್ಥಳೀಯ ಸಮಾಚಾರ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ;  ಸಾಧನೆಗೆ...

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ;  ಸಾಧನೆಗೆ ಪ್ರಯತ್ನವೇ ಮುಖ್ಯ; ಮೋಹನ್ ಕುಮಾರ್.

29
0

ಉಜಿರೆ : ಮೊದಲಿಗೆ ನಾವು ಮಾಡುವ ಕೆಲಸದಲ್ಲಿ ಶೃದ್ದೆ ಇರಬೇಕು. ಬರುವ ಗ್ರಾಹಕರನ್ನು ಗೌರವದಿಂದ ಮತ್ತು ಪ್ರೀತಿಯಿಂದ ನೋಡಿಕೊಂಡಾಗ ಅದೇ ದೊಡ್ಡ ಪ್ರಚಾರಕ್ಕೆ ಕಾರಣವಾಗುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಮಾಡಿಕೊಡುವ ಜಾಣ್ಮೆಯನ್ನು ನಾವು ಬೆಳೆಸಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯತ್ತುಮವಾದ ತರಬೇತಿಯನ್ನು ಪಡೆದುಕೊಂಡಿದ್ದೀರಿ ಅದನ್ನು ಜೀವನದಲ್ಲಿ ಮತ್ತು ಉದ್ಯಮದಲ್ಲಿ ಉಪಯೋಗಿಸಿಕೊಂಡು ಯಶಸ್ವಿಯಾಗಿ ಎಂದು ಉಜಿರೆಯ ಲಕ್ಷ್ಮೀ ಗ್ರೂಪ್ಸ್ ಮತ್ತು ಕನಸಿನ ಮನೆಯ ಮಾಲಕರಾದ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದೆ *ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ಮತ್ತು ತರಬೇತಿ ಕಿಟ್ ನೀಡಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿ ಯಾಗಬೇಕು. ಗ್ರಾಹಕರನ್ನು ದೇವರಂತೆ ಕಾಣಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ನಿವೃತ್ತ ಉಪಮಹಾಪ್ರಬಂಧಕರಾದ ಶ್ರೀ ಉದಯ ಕುಮಾರ್ ಮಾತನಾಡಿ ನಿಮ್ಮ ಸ್ವ ಉದ್ಯೋಗ ಮತ್ತು ಉದ್ಯೋಗಕ್ಕೆ ಇರುವ ವ್ಯತ್ಯಾಸವನ್ನು ತಿಳಿದು ಸ್ವ ಉದ್ಯೋಗಕ್ಕೆ ಮನಸ್ಸು ಮಾಡಿರುವುದೇ ಒಂದು ಉತ್ತಮ ನಿರ್ಧಾರವಾಗಿದೆ. ನಿಮ್ಮ ವೃತ್ತಿಯಲ್ಲಿ ಶ್ರಮ ಮತ್ತು ನಿಷ್ಠೆ ಇದ್ದರೆ ಯಶಸ್ಸು ಖಂಡಿತ ಎಂದು ಶುಭಹಾರೈಸಿ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ *ಕಾರ್ಯನಿರ್ವಾಹಕ ನಿರ್ದೇಶಕರಾದ *ಶ್ರೀ ಬಿ.ಪಿ.ವಿಜಯ ಕುಮಾರ್* ವಹಿಸಿ, ಮಾತನಾಡಿದರು ಒಂದು ನಿಗಧಿತ ಸಮಯದ ಒಳಗೆ ಉದ್ದೇಶಿಸಿದ ಗುರಿಯನ್ನು ತಲುಪಲು ಸತತವಾದ ಹೊಸ ಹೊಸ ಅವಿಷ್ಕಾರಗಳ ಜೊತೆಗೆ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ಬೆಳೆಸಿ. ಆರ್ಥೀಕ ನೆರವಿಗಾಗಿ ನಿಮ್ಮ ಸಮೀಪ ಕೆನರಾ ಬ್ಯಾಂಕ್ ಅನ್ನು ಸಂಪರ್ಕಿಸಿ, ಜೊತೆಗೆ ಡಿಜಿಟಲ್ ಮಾಧ್ಯಮಾ ಮೂಲಕ ಬ್ಯಾಂಕ್ ವ್ಯವಹಾರ ನಡೆಸಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಕೌಶಲ್ಯ ತರಬೇತಿಯನ್ನು ನೀಡಿದ ಅತಿಥಿ ಉಪನ್ಯಾಸಕರಾದ ಶ್ರೀ ಗುರುರಾಜ್ ಉಪಸ್ಥಿತರಿದ್ದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ  ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು  ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ವಂದಿಸಿದರು. ಸುಮಾರು 35 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು ಅಭಯ ಮತ್ತು ಬಳಗ ಪ್ರಾರ್ಥನೆ ಮಾಡಿದರು, ದರ್ಶನ ಮತ್ತು ತ್ರಿಶೋನ್ ತರಬೇತಿಯ ಅನುಭವ ಹಂಚಿಕೊಂಡರು.

LEAVE A REPLY

Please enter your comment!
Please enter your name here