ಬಾರ್ಯಾ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ
ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರು ಪಂಥ ವಲಯದ ಬಾರ್ಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಶ್ರೀ ರಾಮಾಂಜನೇಯ ಬಜನಾ ಮಂದಿರದ ಸಬಾಭವನದಲ್ಲಿ ಜರಗಿತು ಬಾರ್ಯಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅದ್ಯಕ್ಷರಾದ ಪ್ರವೀಣ್ ರೈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಜೀವನ ಪದ್ಧತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಸೇವೆ ಅನನ್ಯವಾಗಿದೆ ಅರ್ಥಿಕ ವಾಗಿ, ಸಾಮಾಜಿಕವಾಗಿ ಹಾಗು ಧಾರ್ಮಿಕವಾಗಿ ಯಾವ ರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಶ್ರೀ ಕ್ಷೇತ್ರ...
ಶ್ರೀ ಕ್ಷೇತ್ರ ಚಂದ್ರಪುರ. ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ಶಿಶಿಲದಲ್ಲಿ ಅಷ್ಟಾಹಿನಿಕ. ಪರ್ವ ಪೂಜಾ ಪ್ರಾರಂಭ
ಬೆಳ್ತಂಗಡಿ;: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ೧00೮. ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪರಮಪೂಜ್ಯ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಕಾರ್ಕಳ ಇವರ ಶುಭ ಆಶೀರ್ವಾದದೊಂದಿಗೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಅಷ್ಣಹಿನಿಕಾ ಪೂಜಾ ಕಾರ್ಯಕ್ರಮ ಬಹುವಿಜೃಂಭಣೆಯಿಂದ ಪ್ರಾರಂಭವಾಯಿತು. ಉಜಿರೆಯ ಪ್ರಗತಿ ರಾಜಿತ್ ಶೆಟ್ಟಿ ಯವರು ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು ಕೊಲ್ಲಾಪುರ ಸಮೀಪ ಉದ್ಗಾವ್ ನಲ್ಲಿ ಆಚಾರ್ಯ ಶ್ರೀ ೧೦೮ ವಿಶುದ್ದ ಸಾಗರ...
ತೆಕ್ಕಾರಿನಲ್ಲಿ ರಸ್ತೆಗೆ ಉರುಳಿದ ಮರ; ವಿದ್ಯುತ್ ಕಂಬಗಳಿಗೆ ಹಾನಿ
ಬೆಳ್ತಂಗಡಿ; ತೆಕ್ಕಾರು ಗ್ರಾಮದ ಕುಟ್ಟಿಕಳ ಶಾಲೆಯ ಸಮೀಪ ಮರವೊಂದು ಉರುಳಿ ಬಿದ್ದು ವಿದ್ಯತ್ ಕಂಬಗಳು ಉರುಳಿ ಬಿದ್ದ ಘಟನೆ ಸಂಭವಿಸಿದೆ.ಸೋಮವಾರ ಬೆಳಿಗ್ಗೆಮರ ವಿದ್ಯುತ ಲೈನಿನ ಮೇಲೆ ಉರುಳಿ ಬಿದ್ದಿದ್ದಿದೆ. ಇದರಿಂದಾಗಿ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕೆಲವು ಕಂಬಗಳು ಉರುಳಿ ಬಿದ್ದಿದೆ. ರಸ್ತೆಗೆ ಬಿದ್ದ ಮರವನ್ನು ಗ್ರಾಮ ಪಂಚಾಯತು ಸದಸ್ಯರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಲಾಗಿದೆ.
ಜು.15 ಸೋಮವಾರ ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ; ಜಿಲ್ಲಾಧಿಕಾರಿ ಘೋಷಣೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜು.15ರ ಸೋಮವಾರ ರಜೆಯನ್ನು ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಘೋಷಿಸಿದ್ದಾರೆ.
ಉಪಚುನಾವಣೆ; ಬಿಜೆಪಿಗೆ ಮುಖಭಂಗ, ಇಂಡಿಯಾ ಒಕ್ಕೂಟಕ್ಕೆ ಗೆಲುವು
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಬಳಿಕ ಇದೀಗ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆಗಳಲ್ಲಿಯೂ ಬಿಜೆಪಿ ಹಾಗೂ ಎನ್ ಡಿ.ಎ ಗೆ ತೀವ್ರ ಹಿನ್ನಡೆಯಾಗಿದೆ. ಏಳು ರಾಜ್ಯಗಳ 13 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಗಳು 10 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿಗೆ ಕೇವಲ ಎರಡು ಸ್ಥಾನಗಳು ಲಭಿಸಿದೆ ಒಂದು ಸ್ಥಾನ ಪಕ್ಷೇತರರ ಪಾಲಗಿದೆ.ಉಪಚುನಾವಣೆ ನಡೆದಪಶ್ಚಿಮ ಬಂಗಾಳದ 4, ಹಿಮಾಚಲ ಪ್ರದೇಶದ 3, ಉತ್ತರಾಖಂಡದ 2 ಹಾಗೂ ಪಂಜಾಬ್, ಮಧ್ಯಪ್ರದೇಶ, ಬಿಹಾರ, ತಮಿಳುನಾಡಿನ ತಲಾ 1 ಕ್ಷೇತ್ರಗಳಿಗೆ ಬುಧವಾರ (ಜುಲೈ 10)...
ಬೆಳ್ತಂಗಡಿ ಧರ್ಮಾಧ್ಯಕ್ಷರ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜ ಭೇಟಿ
ಬೆಳ್ತಂಗಡಿ; ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜ ಅವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಬೆಳ್ತಂಗಡಿ ಧರ್ಮಾಧ್ಯ ಕ್ಷರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಐವಾನ್ ಡಿಸೋಜ ಅವರನ್ನುವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವತಿಯಿಂದ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಸನ್ಮಾನಿಸಿಸದರು.ಈ ಸಂದರ್ಭದಲ್ಲಿ ಐವಾನ್ ಡಿ ಸೋಜ ಅವರು ಬಿಷಪ್ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಕಾರ್ ಜನರಲ್ ಅ.ವಂ. ಫಾ, ಜೋಸ್ ವಲಿಯಪರಂಬಿಲ್ ಹಾಗೂ ಧರ್ಮಗುರುಗಳು ಸ್ಥಳೀಯ ಮುಖಂಡರುಗಳು...
ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡ “ಶ್ರೀ ಗುರುಸಾನ್ನಿಧ್ಯ” ಉದ್ಘಾಟನೆ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 'ಶ್ರೀ ಗುರು ಸಾನಿಧ್ಯ' ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಮತ್ತು ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.ಉದ್ಘಾಟನೆ ನೆರವೇರಿಸಿದಬೆಂಗಳೂರು ಸೋಲೂರು ಮಠ ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ" ಕರಾವಳಿಯಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳಿದ್ದು ಇನ್ನೊಬ್ಬರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಅವೆಲ್ಲವೂ ಸೇವೆ ನೀಡುತ್ತಿವೆ" ಎಂದರು. "ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗದ ಸೇವೆ ಸಹಕಾರಿ ಸಂಘಗಳ ಮೂಲಕ ಸಿಗುತ್ತಿದ್ದು ಜನಸಾಮಾನ್ಯರಿಗೆ ಸರಳವಾಗಿ ತ್ವರಿತ...
ಜಿಲ್ಲೆಯಲ್ಲಿ ಪ್ರತಿ ನಿತ್ಯ ವಂಚನಾ ಜಾಲಗಳಿಗೆ ಬಲಿಯಾಗಿ ಲಕ್ಷಾಂತರ ಹಣ ಕಳೆದು ಕೊಳ್ಳುತ್ತಿರುವ ಜನರು
ಬೆಳ್ತಂಗಡಿ; ವಂಚನೆ ಜಾಲಗಳಿಗೆ ಬಲಿಯಾಗಿ ಜನರು ಪ್ರತಿನಿತ್ಯ ಲಕ್ಷಾಂತರ ಹಣ ಕಳೆದುಕೊಂಡು ವಂಚಿತರಾಗುತ್ತಿದ್ದರೂ ಮತ್ತೆ ಮತ್ತೆ ಇಂತಹ ಜಾಲಗಳಿಗೆ ಬಲಿಯಾಗುತ್ತಿರುವ ಘಟನೆಗಳು ಸಂಭವಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿದ್ದು ಈಬಗ್ಗೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಹಾಗೂ ಸಿ.ಎನ್.ಎನ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಾಲಗಿದೆ. ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದೆರೆ ಲಕ್ಷಾಂತರ ಹಣವನ್ನು ಕಳೆದುಕೊಂಡಿರುವುದು ಕಂಡುಬರುತ್ತಿದೆ.ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮೀಶೋದಲ್ಲಿ ನಗದು ಬಹುಮಾನ ಬಂದಿರುವುದಾಗಿ ತಿಳಿಸಿ ಹಣ ಪಡೆಯಬೇಕಾದರೆ ಟಿ.ಡಿ ಎಸ್. ಜಿ.ಎಸ್.ಟಿ ಸೇರಿದಂತೆ ವಿವಿಧ ರೀತಿಯ ಚಾರ್ಜುಗಳಿಗೆ...
ಧರ್ಮಸ್ಥಳ ಪೊಲೀಸ್ ಠಾಣೆಯ ಪಿ ಎಸ್.ಐ ಅನಿಲ್ ಕುಮಾರ್ ವರ್ಗಾವಣೆ; ಕಿಶೋರ್ ಪಿ ನೇಮಕ
ಬೆಳ್ತಂಗಡಿ: ಪಶ್ಚಿಮ ವಲಯ ಐಜಿಪಿ ಪೊಲೀಸ್ ಇಲಾಖೆಯ 24 ಸಬ್ ಇನ್ಸ್ ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಜು.10 ರಂದು ಆದೇಶಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳೆದ 1 ವರ್ಷ 11 ತಿಂಗಳು ಕರ್ತವ್ಯ ನಿರ್ವಹಿಸಿದ್ದ ಸಬ್ ಇನ್ಸ್ ಪೆಕ್ಟರ್ -1 ಅನಿಲ್ ಕುಮಾರ್ ಡಿ ಅವರನ್ನು ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್-1 ಕಿಶೋರ್.ಪಿ ಅವರನ್ನು ನೇಮಕ ಮಾಡಲಾಗಿದೆ
ಮಂಗಳೂರು ಕಳ್ಳತನ; ಚಡ್ಡಿ ಗ್ಯಾಂಗನ್ನು ಮಟ್ಟಹಾಕಿದ ಪೊಲೀಸರು; ನಾಲ್ವರ ಬಂಧನ
ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ಎಂಬಲ್ಲಿನ ಮನೆಯೊಂದಕ್ಕೆ ಮಂಗಳವಾರ ಮುಂಜಾವ ನುಗ್ಗಿ ಸುಲಿಗೆಗೈದ ಚಡ್ಡಿಗ್ಯಾಂಗ್‌ನ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಪ್ರದೇಶದ ರಾಜು ಸಿಂದ್ವಾನಿಯ (24), ಮಯೂರ್ (30), ಬಾಲಿ (22), ವಿಕಿ (21) ಆರೋಪಿಗಳಾಗಿದ್ದಾರೆ. ಇವರಿಂದ ಸುಲಿಗೆ ಮಾಡಿದ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್‌ಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.















