ಹರೀಶ್ ಪೂಂಜ ಬಂಧನಕ್ಕೆ ಕ್ಷಣಗಣನೆ; ಮನೆ ಮುಂದೆ ಪೊಲೀಸರ ತಂಡ

0

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾವರು ಪೊಲೋಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಅವರನ್ನು ಬಂದಿಸಲು ಬೆಳ್ತಂಗಡಿ ಪೊಲೀಸರು ಹರೀಶ್ ಪೂಂಜ ಅವರ ಮನೆಗೆ ಆಗಮಿಸಿದ್ದು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮನೆಯತ್ತ ಧಾವಿಸಿದ್ದಾರೆ.ಬೆಳ್ತಂಗಡಿ ಪೊಲೀಸರ ತಂಡ ಶಾಕರ ಮನೆಯಲ್ಲಿದ್ದು ಅವರನ್ನು ಬಂಧಿಸುವ ನಿರೀಕ್ಷೆಯಿದೆ. ಪೊಲೀಸ್ ಅಧಿಕಾರಿಗಳು ಮನೆಯ ಒಳಗೆ ಇದ್ದು ಮಾತುಕತೆ ನಡೆಯುತ್ತಿದೆ.ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಆಗಮಿಸುತ್ತಿದ್ದು ಮನೆಗೆ ಬರುವ ರಸ್ತೆ ಬಹುತೇಕ ಬಂದ್ ಆದಂತಾಗಿದೆ. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದು ಸ್ಥಳದಲ್ಲಿ ಬಿಗುವಿನ ಸ್ಪರಿಸ್ಥಿತಿ...

ಬಳೆಂಜದಲ್ಲಿ ತಾಯಿ ಮಗನ ಮೇಲೆ ಹಲ್ಲೆ ಪ್ರಕರಣ ‌ದಾಖಲು

0

ಬೆಳ್ತಂಗಡಿ; ಬಳೆಂಜ ಗ್ರಾಮದ ಮೂಡಾಯಿಬೆಟ್ಟ ಎಂಬಲ್ಲಿ ತಾಯಿ ಹಾಗೂ ಮಗನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿಯ ವಿರುದ್ದ ಬೆಳ್ತಂಗಡಿ ಪೊಲೋಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬಳೆಂಜ ಗ್ರಾಮದ ನಿವಾಸಿ ಅಶ್ವಿನ್ ಪೂಜಾರಿ ಹಾಗೂ ಆತನ ತಾಯಿಯೇ ಹಲ್ಲೆಗೆ ಒಳಗಾದವರಾಗಿದ್ದಾರೆ. ಸ್ಥಳೀಯ ನಿವಾಸಿ ಪ್ರಕಾಶ್ ಶೆಟ್ಟಿ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ಪೂರ್ವದ್ವೇಷದ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿರುವ ಆಶ್ವಿನ್ ಹಾಗೂ ಬಿಜೆಪಿ ಕಾರ್ಯ ಕರ್ತ ಪ್ರಕಾಶ್ ಶೆಟ್ಟಿ ನಡುವೆ ರಾಜಕೀಯ ವೈಷಮ್ಯವಿದ್ದು ಇದೂ ಹಲ್ಲೆಗೆ ಕಾರಣವಾಗಿದೆ...

ಪೊಲೀಸರಿಗೆ ಜೀವ ಬೆದರಿಕೆ ಶಾಸಕ ಹರೀಶ್ ಪೂಂಜ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ; ಪೊಲೀಸ್ ಜಾಲಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ರೌಡಿ ಶೀಟರ್ ಶಶಿರಾಜ್ ಶೆಟ್ಟಿಯ ಬಂಧನ ವಿರೋಧಿಸಿ ಬೆಳ್ತಂಗಡಿ ವಿಕಾಸ ಸೌಧದ ಎದುರು ಸೋಮವಾರ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಇಲಾಖೆಯಿಂದ ಯಾವುದೇ ಅನುನತಿ ಪಡೆಯದೆ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಲಾಗಿತ್ತು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ...

ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು ಸಿ.ಎಂ ಸಿದ್ದರಾಮಯ್ಯ ಘೋಷಣೆ

0

ಬೆಳ್ತಂಗಡಿ; ವಸಂತ ಬಂಗೇರರದ್ದು ನಿಷ್ಟುರ ನೇರ ನಡೆನುಡಿಯ ವ್ಯಕ್ತಿತ್ವ. ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದವರಲ್ಲ, ಯಾವುದೆ ಸನ್ನವೇಶ ಸಂದರ್ಭಗಳಿರಲಿ ಸತ್ಯವನ್ನು ನೇರವಾಗಿ ಹೇಳುವುದು ಅವರ ವಿಶೇಷಗುಣವಾಗಿತ್ತು.ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರ ಅವರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬೆಳ್ತಂಗಡಿಯಲ್ಲಿ ಮಂಗಳವಾರ ಮಾಜಿ ಶಾಸಕ ಕೆ ವಸಂತ ಬಂಗೇರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ಬಂಗೇರರು ಬಡವರ ಪರವಾಗಿ ಕೆಲಸ ಮಾಡಿದರೇ ಹೊರತು ತನಗಾಗಿ ಏನೂ ಮಾಡಿದವರಲ್ಲ ಅವರು ಐದು ಬಾರಿ ಶಾಸಕರಾದರೂ ಎಂದೂ ಮಂತ್ರಿ ಆಗಲು ಪ್ರಯತ್ನಿಸಿದವರಲ್ಲ. ಮೊದಲಬಾರಿಗೆ 1983 ರಲ್ಲಿ ನಾವು ಒಟ್ಟಿಗೆ...

ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ ಮಂಗಳೂರಿನ ತಾಯಿ ಮಗ ಮೃತ್ಯು

0

ಬೆಳ್ತಂಗಡಿ; ಶಿರಾಡಿ ಘಾಟಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ತಾಯಿ ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ‌ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಈಡಾಗಿದೆ. ಕಾರಿನಲ್ಲಿದ್ದ ತಾಯಿ-ಮಗ ಮೃತಪಟ್ಟುದ್ದಾರೆ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬಿರ್ ಎಂಬವರ ಪತ್ನಿ ಸಫಿಯಾ(50), ಹಾಗೂಮಗ ಮೊಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ...

ಪತ್ನಿಯೊಂದಿಗೆ ಜಗಳವಾಡಿ ಮನೆಬಿಟ್ಟ ಪತಿ; ನಾಪತ್ತೆ ಪ್ರಕರಣ ದಾಖಲು

0

ಬೆಳ್ತಂಗಡಿ; ಪತ್ನಿಯೊಂದಿಗೆ ಜಗಳಮಾಡಿಕೊಂಡು ಮನೆಯಿಂದ ಹೋದ ವ್ಯಕ್ತಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ತಾಲೂಕಿನ ಪುತ್ತಿಲ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ (35)ಎಂಬಾತನೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.ಈ ಬಗ್ಗೆ ಅವರ ಪತ್ನಿ ಝೊಹರಾ ಪೊಲೀಸರಿಗೆ ದೂರು ನೀಡಿದ್ದಾರೆ.ಅಬ್ದುಲ್ ಹಮೀದ್ ಕೂಲಿ ಕಾರ್ಮಿಕರಾಗಿದ್ದು ಇವರು ಕೆಲಸಕ್ಕೆ ಹೋಗದೆ ಮನೆಗೆ ಖರ್ಚಿಗೆ ಹಣ ನೋಡದೆ‌ಇದ್ದು ಇದೇ ವಿಚಾರವಾಗಿ ಮೇ 15ರಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳಾಡಿದ್ದಾರೆ. ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಬಳಿಕ ಅವರ ಮೊಬೈಲ್ ಗೆ ಕರೆಮಾಡಿದಾಗ ತಾನು...

ಗುರಿಪಳ್ಳದಲ್ಲಿ ರಸ್ತೆಗೆ ಬಿದ್ದ ಮರ ವ್ಯಕ್ತಿಗೆ ಗಾಯ

0

ಬೆಳ್ತಂಗಡಿ; ರಸ್ತೆ ಬದಿಯ ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದು ವ್ಯಕ್ತಿ ಗಾಯಗೊಂಡ ಘಟನೆ ನಡದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ಟವರ್ ಮೇಲೆ ಉರುಳಿದೆ.ಈ ಸಂದರ್ಭ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಕನ್ಯಾಡಿಯ ರಮೇಶ್ ಎಂಬವರು ಅದೇ ರಸ್ತೆಯಲ್ಲಿ ಇಂದಬೆಟ್ಟು ಕಡೆ ಹೋಗುತ್ತಿದ್ದು ಮರದ ಭಾಗ ತಲೆಗೆ ಬಡಿದಿದೆ. ಕೂದಲೆಳೆಯ ಅಂತರದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಿಂದ ಒಂದು ಗಂಟೆಗಿಂತ ಅಧಿಕಕಾಲ ಗುರಿಪಳ್ಳ-ಇಂದಬೆಟ್ಟು...

ಕಾರ್ಯಕರ್ತರನ್ನು ಮುಟ್ಟಿದರೆ ಬೆಳ್ತಂಗಡಿಯಲ್ಲಿ‌ ಡಿ.ಜೆ ಹಳಿ ಕೆಜೆ ಹಳ್ಳಿ ಸ್ದಿತಿ ಹರೀಶ್ ಪೂಂಜ ಎಚ್ಚರಿಕೆ

0

ಬೆಳ್ತಂಗಡಿ:ಪೊಲೀಸರಿಗೆ ಹೆದರುವವರು ನಾವಲ್ಲ ಬಿಜೆಪಿಯಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಪೋಲೀಸ್ ಠಾಣೆಗೆ ನುಗ್ಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ದನಾಗಿದ್ದೇನೆ, ನನ್ನ ಮೇಲೆ ಎರಡು ಬಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದೀರಿ ತಾಕತ್ತಿದ್ದರೆ ಬಂಧಿಸಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು.‌ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರುಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರ ವಿರುದ್ದ ಪ್ರಕರಣ ದಾಖಲಿಸಿದನ್ನು ವಿರೋಧಿಸಿ ಬೆಳ್ತಂಗಡಿ ಬೆಜೆಪಿ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು...

ಇಂದು ಬೆಳ್ತಂಗಡಿಯಲ್ಲಿ ‌ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ.

0

ಬೆಳ್ತಂಗಡಿ, ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿರೋದನ್ನು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಶಾಸಕರ ಮೇಲೆ ಕೇಸ್ ಹಾಕಿರೋದನ್ನು ಖಂಡಿಸಿ ಸೋಮವಾರ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಮೇ.20 ರಂದು ಬೆಳಗ್ಗೆ ಬೆಳ್ತಂಗಡಿ ಅಯ್ಯಪ್ಪ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಮಿನಿ ವಿಧಾನಸೌಧದ ಬಳಿ ಸಾಗಿ ಅಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ಹೇಳಿದೆ.

ಪದ್ಮುಂಜದಲ್ಲಿ ರಿಕ್ಷಾ ಮಗುಚಿ ಬಿದ್ದು ಚಾಲಕ ಮೃತ್ಯು

0

ಪದ್ಮುಂಜ: ಆಟೊ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ರವಿವಾರ ರಾತ್ರಿ ಬೆಳ್ತಂಗಡಿಯ ಪದ್ಮುಂಜದಲ್ಲಿ ನಡೆದಿದೆ. ಇಳಂತಿಲ ಗ್ರಾಮದ ಗಂಡಿಬಾಗಿಲು ನಿವಾಸಿ ದಿನೇಶ್ (29) ಮೃತಪಟ್ಟವರು. ಪದ್ಭುಂಜಕ್ಕೆ ಬಾಡಿಗೆಗೆಂದು ತೆರಳಿದ ಇವರ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಪರಿಣಾಮದಿನೇಶ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆಟೊ ರಿಕ್ಷಾ ಚಾಲನೆಯೊಂದಿಗೆ ಉಪ್ಪಿನಂಗಡಿಯಸಹಕಾರಿ ಬ್ಯಾಂಕೊಂದರಲ್ಲಿ ಫಿಗ್ಗಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಾ...