ಭಾರೀ ಮಳೆಗೆ ಮನೆ ಕಳೆದುಕೊಂಡ ಚೋಮು ಅಜ್ಜಿಗೆ ಮನೆ ದುರಸ್ತಿ ಮಾಡಿಕೊಟ್ಟು ಆಸರೆಯಾದ ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ : ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ದಲಿತ ಸಮುದಾಯದ ಚೋಮು ನಲಿಕೆ ಎಂಬವರ ಮನೆಯ ಹಿಂಬದಿ ಗೋಡೆ ಸಂಪೂರ್ಣವಾಗಿ ಧರಾಶಾಹಿಯಾಗಿತ್ತು ಮೇಲ್ಛಾವಣಿಗೂ ಹಾನಿಯಾಗಿತ್ತು . ಈ ನಡುವೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಶಾಸಕ ಹರೀಶ್ ಪೂಂಜಾರವರು ಚೋಮು ನಲಿಕೆಯವರ ಮನೆಗೂ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತಾನೇ ಮುಂದೆ ನಿಂತು ಮನೆಯ ಸಂಪೂರ್ಣ ದುರಸ್ಥಿಗೊಳಿಸಿ ವಾಸಯೋಗ್ಯ ಹೊಸ ಮನೆಯಂತೆ ನಿರ್ಮಾಸಿ ಕೊಡಲಾಗಿದ್ದು ಚೋಮು ಅಜ್ಜಿಯ ಮುಖದಲ್ಲಿ ಸಂತಸ ಮೂಡುವಂತೆ...
ಜಮಲಾಬಾದ್ ಕೋಟೆಗೆ ರೋಪ್‌ವೇ ನಿರ್ಮಾಣಕ್ಕೆ : ಯು.ಟಿ. ಖಾದರ್ ಅವರಿಗೆ ರಕ್ಷಿತ್ ಶಿವರಾಂ ಮನವಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ (ಗಡಾಯಿ ಕಲ್ಲು) ಪ್ರವಾಸಿ ತಾಣಕ್ಕೆ ರೋಪ್‌ವೇ ನಿರ್ಮಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಗಳು ಬಗ್ಗೆ ಮತ್ತು ಕುಟುಂಬ ಕಲ್ಯಾಣ ಸಚಿವರು ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು. ಜಮಲಾಬಾದ್ ಕೋಟೆ ಐತಿಹಾಸಿಕ ಹಿನ್ನೆಲೆ ಹಾಗೂ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರಮುಖ ಪ್ರವಾಸಿ ತಾಣವಾಗಿದ್ದು, ಕೋಟೆಯನ್ನು ತಲುಪಲು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಮಕ್ಕಳು, ಹಿರಿಯ ನಾಗರಿಕರು, ದಿವ್ಯಾಂಗರು...
ಉಜಿರ ನೀರಚಿಲುಮೆ ಅಪಘಾತದಲ್ಲಿ ಯುವಕ ಸಾವು; ಅಜಾಗರೂಕ ಚಾಲನೆಗೆ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಉಜಿರೆ ನೀರಚಿಲುಮೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಬಸ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ಆ11 ರಂದು ನಡೆದಿದ್ದು ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದನ್ನು ಕಂಡುಕೊಂಡ ಪೊಲೀಸರು ಬಸ್ ಚಾಲಕ ಬಸಪ್ಪ ರಾಯಪ್ಪ ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋಮನಾಥ್ ಚಲಾಯಿಸುತ್ತಿದ್ದ ಬೈಕಿಗೆ ನೀರಚಿಲುಮೆ ಯಲ್ಲಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಸೋಮನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದ .ಬೆಳ್ತಂಗಡಿ ಪೊಲೀಸರು ಒಟ್ಟು ಅಪಘಾತದ ಬಗ್ಗೆ ಪರಿಶೀಲನೆ ನಡೆಸಿದ್ದು ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕಿಗೆ...
ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸರಿಯಲ್ಲ: ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲಾ
ದಕ್ಷಿಣ ಕನ್ನಡ ಅಥವಾ ಕರಾವಳಿ ಜಿಲ್ಲೆಯ ಜನತೆಗೆ ಪ್ರಕೃತಿಯೇ ಮಾತೆ, ಪ್ರಕೃತಿ ದೇವರಿಗೆ ಸಮಾನ. ಇಲ್ಲಿನ ಜನತೆಯ ಆಚಾರ, ವಿಚಾರಗಳು, ಕೃಷಿ, ಸಂಸ್ಕೃತಿ, ಆರಾಧನೆ ಪ್ರಕೃತಿಯೊಂದಿಗೆ ಬೆರೆತು ಹೋಗಿವೆ. ಅದರಲ್ಲೂ ಬೆಳ್ತಂಗಡಿಯ ಜನತೆ ತಲೆ ತಲಾಂತರದಿಂದ ಕಾಡಂಚಿನಲ್ಲಿ ದುಡಿದು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಕುಗ್ರಾಮದ ಪಟ್ಟಿಯಲ್ಲಿ ತಾಲೂಕಿನ ಕೆಲ ಗ್ರಾಮಗಳೂ ಇದ್ದದ್ದು ಇದಕ್ಕೆ ಸಾಕ್ಷಿ. ಇದೀಗ ಕೇಂದ್ರ ಸರಕಾರ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆತಂಕದ ವಿಚಾರ. ಇದು ಜಾರಿಯಾದಲ್ಲಿ ಬೆಳ್ತಂಗಡಿಯ...
ಬೆಳ್ತಂಗಡಿ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಬೆಳ್ತಂಗಡಿ : ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಕಂದಾಯ ಇಲಾಖೆ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಂದ ಲಂಚ ಪಡೆದು ಕೆಲಸ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಆ.12 ರಂದು ಬೆಳಗ್ಗೆ 11:30 ಕ್ಕೆ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ಏಳು ಮಂದಿಯ ತಂಡ ದಾಳಿ ಮಾಡಿ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕುತ್ತಿದ್ದು ತಾಲೂಕು ಕಚೇರಿಯ ಒಳಗೆ ವಿವಿಧ ಇಲಾಖೆಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ...
ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಆಟಿಡ್ ಒಂಜಿ ವಿಶೇಷ ತಿನಸ್ ಕಾರ್ಯಕ್ರಮ
ಬೆಳ್ತಂಗಡಿ; ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್ ಅನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ವಸಂತಿ ಮಚ್ಚಿನ ಇವರು ಜಿಲ್ಲಾ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಲಕಿತ ಶೆಟ್ಟಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಹಾಗೂ ಬೆಳ್ತಂಗಡಿ ಮಂಡಲದ ಪ್ರಭಾರಿಯಾದ ಶ್ರೀಮತಿ ಕಮಲಾಕ್ಷಿ ಇವರು ಹಾಗೂ ಮಹಿಳಾಮೋರ್ಚಾದ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ಇವರು ಹಾಗೂ ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ ಹಾಗೂ ಪ್ರಧಾನ...
ಕೆ.ಪಿ.ಸಿ.ಸಿ ಮಾನವ ಹಕ್ಕು ವಿಭಾಗದ ರಾಜ್ಯ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆ
ಬೆಳ್ತಂಗಡಿ: ಕೆ ಪಿ ಸಿ ಸಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆಯಾಗಿದ್ದಾರೆ.ಕೆ ಪಿ ಸಿ ಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಅವರ ಸೂಚನೆಯಂತೆ ಕೆಪಿಸಿಸಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಇದರ ಅಧ್ಯಕ್ಷರಾದ ಸಿ ಎಂ ದನಂಜಯ ರವರು ಇವರನ್ನು ಆಯ್ಕೆ ಗೊಳಿಸಿದ್ದು ಈ ಆಯ್ಕೆ ಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಮತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಯಾದ...
ವಿಮೆನ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಪ್ರತಿನಿಧಿ ಸಭೆ; ಜನರನ್ನು ಒಗ್ಗೂಡಿಸುವುದೇ ನಾಯಕತ್ವ; ಅಬ್ದುಲ್ ಖಾದರ್ ನಾವೂರು
ಬೆಳ್ತಂಗಡಿ, ಆ. 11: ವಿಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ಬೆಳ್ತಂಗಡಿ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬೆಳ್ತಂಗಡಿಯ ಜಮಿಯತುಲ್ ಫಲಾಹ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ವಿಮ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷೆ ಶಮಾ ಉಜಿರೆ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ನಾವೂರು, “ನಾಯಕತ್ವ ಎನ್ನುವುದು ಕೇವಲ ಹುದ್ದೆ ಅಥವಾ ಅಧಿಕಾರವನ್ನು ಹೊಂದುವುದಲ್ಲ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರನ್ನು...
ಗುರುವಾಯನಕೆರೆ ಆ. 18 ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್
ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಮ್‌ಜೆ), ಸುನ್ನೀ ಯುವಜನ ಸಂಘ(ಎಸ್‌ವೈಎಸ್), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್), ಸುನ್ನೀ ಜಂ ಇಯ್ಯತುಲ್ ಉಲಮ (ಎಸ್‌ಜೆಯು), ಸುನ್ನೀ ಜಂಇಯ್ಯತುಲ್ ಮುಅಲ್ಲಮೀನ್ (ಎಸ್‌ಜೆಎಮ್), ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ) ಇವುಗಳ ಸಂಯುಕ್ತ ಒಕ್ಕೂಟವಾದ ಸುನ್ನೀ ಕೋ ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕುವತಿಯಿಂದ ಆ.18 ರಂದು ಗುರುವಾಯನಕೆರೆ ಎಫ್.ಎಂ ಗಾರ್ಡನ್ ಸಭಾಂಗಣದಲ್ಲಿ ಮಗ್ರಿಬ್ ಬಳಿಕ ಪ್ರವಾದಿಯವರ 1501 ನೇ ಜನ್ಮದಿನದ ಅಂಗವಾಗಿ ಗ್ರ್ಯಾಂಡ್ಹುಬ್ಬುರ್ರಸೂಲ್ ಮಜ್ಲಿಸ್ ನಡೆಯಲಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ತಿಳಿಸಿದ್ದಾರೆ. ಕೇರಳ ಮುಸ್ಲಿಂ ಜಮಾಅತ್...
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಮತ್ತು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ರಕ್ಷಿಸಲು ಸರಕಾರ ಮುಂದಾಗಲಿ ಬಿ.ಎಂ ಭಟ್
ಬೆಳ್ತಂಗಡಿ; ಮಲೆನಾಡಿನ ಸಾವಿರಾರು ರೈತರ ಬದುಕನ್ನು ಬೀದಿಪಾಲು ಮಾಡುವ ದುರುದ್ದೇಶ ಹೊಂದಿರುವ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ನಿರ್ಧಾರ ರೈತ ವಿರೋದಿಯಾಗಿದೆ ವರದಿ ಜಾರಿ ಮಾಡುವುದನ್ನು ಸರಕಾರ ಕೂಡಲೇ ಕೈಬಿಡಬೇಕು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಒತ್ತಾಯಿಸಿದ್ದಾರೆ.ಡಾ, ಕಸ್ತೂರಿ ರಂಗನ್ ವರದಿಯನ್ನು ಮತ್ತೆ ಜಾರಿ ಮಾಡಲು ಹೊಸ ನೋಟಿಫಿಕೇಶನ್ ಹೊರಡಿಸಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎನ್ನವುದು ಸಾಬೀತಾಗುತ್ತಿದೆ, ಪರಿಸರ ರಕ್ಷಣೆ, ಅರಣ್ಯ ರಕ್ಷಣೆ, ಕಾಡು ಪ್ರಾಣಿಗಳ ರಕ್ಷಣೆಗೆ...















