ಶಾಸಕರು ದಲಿತರ ಮನೆಗೆ ಹೋಗಿ ಊಟ ಮಾಡಿದ್ರೆ ಸಂವಿಧಾನ ವಿರೋಧಿನಾ? ರಕ್ಷಿತ್ ಶಿವರಾಂ ವಿರುದ್ಧ ಬಿಜೆಪಿ ಎಸ್.ಸಿ ಮೋರ್ಚಾ ಮುಖಂಡರ ಆಕ್ರೋಶ

0

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರ 'ಸಾಮರಸ್ಯ ಸಂಕ್ರಾಂತಿ' ಅಭಿಯಾನದ ಬಗ್ಗೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಹೇಳಿರುವ ಮಾತುಗಳು ಸರಿಯಾಗಿಲ್ಲ ಶಾಸಕರು ನಮ್ಮ ಮನೆಗೆ ಬಂದು ಊಟ ಮಾಡಿದರೆ ಅದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ ಇದು ಸಮಾಜವನ್ನು ಕುಗ್ಗಿಸುವ ಕೆಲಸವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ಮುಖಂಡ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿದ್ದಾರೆ.ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನೂರನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಾಲೂಕಿನಾದ್ಯಂತ 'ಸಾಮರಸ್ಯ ಸಂಕ್ರಾಂತಿ' ಹಮ್ಮಿಕೊಂಡಿದ್ದರು. ತಾಲೂಕಿನ 129...

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ

0

ಬೆಳ್ತಂಗಡಿ. ತಾಲೂಕಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾರ್ಚ್ 1ರಿಂದ 9ರವರೆಗೆ ಅದ್ದೂರಿಯಾಗಿ ನಡೆಯಲಿದ್ದು. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಗೌರವ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಕಾರ್ಯಕ್ರಮಕ್ಕೆ ಭಕ್ತಿಯಿಂದ ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ, ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ವ್ಯವಸ್ಥಾಪನಾ ಸಮಿತಿಯ , ಎನ್ ದಿವಾಕರ ಭಂಡಾರಿ, ಲಕ್ಷ್ಮಣ್ ಬಂಗೇರ,...

ಕಳಿಯ ಸುಮಂತ್ ಹಾಗೂ ಶ್ರೀಧರ ಕೊಲೆ ಪ್ರಕರಣ ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ

0

ಬೆಳ್ತಂಗಡಿ: ಕಳಿಯ ಪರಿಸರದಲ್ಲಿ ನಡೆದ ಶ್ರೀಧರ ಮುಗೇರ ಹಾಗೂ ಸುಮಂತ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಿಪಿಐಎಂ ಪಕ್ಷ ಹಾಗು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯನ್ನು ಊದ್ದೇಶಿಸಿ ಮಾತನಾಡಿದ ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಬಿ. ಎಂ ಭಟ್ ಬೆಳ್ತಂಗಡಿ ತಾಲೂಕಿನಲ್ಲಿ ಜನರ ಜೀವಕ್ಕೆ ರಕ್ಷಣೆಯಿಲ್ಲವಾಗಿದೆ. ಕೊಲೆಗಾರರಿಗೆ ಭಯವಿಲ್ಲದಾಗಿದೆ. ಯಾವುದೇ ಕೊಲೆ ಪ್ರಕರಣಗಳು ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಬೆಳ್ತಂಗಡಿ ತಾಲೂಕು ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿ ಮಾರ್ಪಡುತ್ತಿದೆ. ಕಳಿಯ...

ಸೌಜನ್ಯ ತಾಯಿ ಕುಸುಮಾವತಿ ಅರ್ಜಿ ವಿಚಾರಣೆ ಫೆ. 19 ಕ್ಕೆ ಮುಂದೂಡಿದ ಹೈ ಕೋರ್ಟ್

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ತಾಯಿ ಕುಸುಮಾವತಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಫೆ.3 ರಂದು ನಡೆದು ನ್ಯಾಯಾಲಯ ವಿಚಾರಣೆಯನ್ನು ಫೆ 19 ಕ್ಕೆ ಮುಂದೂಡಿದೆ.ಪ್ರಕರಣದ ವಿಚಾರಣೆ ವೇಳೆ ಸರಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತುದ್ದು ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಆಕ್ಷೇಪವಿಲ್ಲ ಈ ಬಗ್ಗೆ ಒಂದುವಾರದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದ್ದು ನ್ಯಾಯಾಲಯ...

ಧರ್ಮಸ್ಥಳ ಭಗವಾನ್ ಬಾಹುಬಲಿ ಸ್ವಾಮಿಯ ಪಾದಾಭಿಷೇಕ

0

ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಮಂಗಳವಾರ ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಪಾದಾಭಿಷೇಕ ನಡೆಸಲಾಯಿತು.ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಪಾದಾಭಿಷೇಕ ಮಾಡಿದರು.ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಪಾದಾಭಿಷೇಕ ನೆರವೇರಿಸಿದರು.ಪೂಜಾಮಂತ್ರ ಪಠಣ, ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಸುಶ್ರಾವ್ಯ ಜಿನಭಕ್ತಿ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ೨೧೬...

ಬೆಳ್ತಂಗಡಿ : ಕೃಷಿಕರ ವಿರೋಧಿ, ಪರಿಶಿಷ್ಟ ವರ್ಗ ಕಡೆಗಣಿಸಿದ ಬಜೆಟ್ ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ 

0

ಬೆಳ್ತಂಗಡಿ : ಯುವಕರಿಗೆ ಉದ್ಯೋಗ, ಕೃಷಿಕರಿಗೆ ಅನುಕೂಲ, ಗ್ರಾಮೀಣ ಪ್ರದೇಶಕ್ಕೆ ಸೌಲಭ್ಯ ನೀಡುವ ರೀತಿ ಬಜೆಟ್ ಇರಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಯಾರೂ ಊಹಿಸದ ರೀತಿಯಲ್ಲಿ ಕಳಪೆ ಮಟ್ಟದಲ್ಲಿ ಬಜೆಟ್ ಮಂಡಿಸಲಾಗಿದೆ. ಎಂದು ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇಂದ್ರದ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ದಕ್ಷಿಣ ಭಾರತವನ್ನು ಅದರಲ್ಲೂ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮುಖ್ಯವಾಗಿ ಕೃಷಿಗೆ ಕಳೆದ ಬಾರಿಗಿಂತಲೂ ಕಡಿಮೆ ಬಜೆಟ್ ನಿಗದಿ‌ಮಾಡಿ ಅನ್ಯಾಯ ಮಾಡಿದೆ. ಯೂರಿಯಾ ಸಬ್ಸಿಡಿ ಕಡಿತ ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿದೆ....

ಕಣಿಯೂರು ಮಹಾಮಾಯಿ ದೇವಸ್ಥಾನದಲ್ಲಿ ರಕ್ಷಿತ್ ಶಿವರಾಮ್ ರವರ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

0

ಬೆಳ್ತಂಗಡಿ : ಕಣಿಯೂರು ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ನೀರಿನ ವೆವಸ್ಥೆಗೆ ಸಹಾಯಧನಕ್ಕೆ ಸಹಕರಿಸಿದ ಶ್ರೀ ರಕ್ಷಿತ್ ಶಿವರಾಂ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿಗಳ ಅಭಿನಂದನೆ ಬ್ಯಾನರ್,ಮಹಮ್ಮಾಯಿ ದೇವಸ್ಥಾನದ ಸಮಿತಿಯಿಂದ ವತಿಯಿಂದ ಅಳವಡಿಸಲಾಗಿತ್ತು ಈ ಬ್ಯಾನರ್ ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಈ ಬ್ಯಾನರನ್ನು ಹರಿದು ಹಾಕಿದ್ದವರು ಯಾರು ಎಂಬುದನ್ನು ಆದಷ್ಟು ಬೇಗನೆ ತಿಳಿಯಬೇಕು ಎಂದು ದೇವಸ್ಥಾನದ ಸಮಿತಿಯವರು ಮತ್ತು ಊರಿನ ಭಕ್ತರು ಪ್ರಾರ್ಥನೆ ಮಾಡಲಾಯಿತು.

ದ್ವೇಷ ಭಾಷಣ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಮಂಜೂರು

0

ಬೆಳ್ತಂಗಡಿ; ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರೆಂಟ್ ಜಾರಿಯಾಗಿದ್ದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಮಂಜೂರು ಮಾಡಿ ಬಂಟ್ವಾಳ ನ್ಯಾಯಾಲಯ ಆದೇಶ ಹೊರಡಿಸಿದೆ.ದ್ವೇಷ ಭಾಷಣ ಮಾಡಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಹಿನ್ನಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯ ಮಹೇಶ್ ಶೆಟ್ಟಿ ಅವರ ವಿರುದ್ದ ವಾರೆಂಟ್ ಜಾರಿ ಮಾಡಿತ್ತು. ಇದೀಗ ಬಂಟ್ವಾಳ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ....

ಮುಗೆರಡ್ಕ ನಿವೃತ್ತ ಯೋಧ ದೇವಪ್ರಸಾದ್ ಅವರಿಗೆ ಭವ್ಯ ಸ್ವಾಗತ

0

ಬೆಳ್ತಂಗಡಿ; ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು,ಅಖಿಲ ಕರ್ನಾಟಕ  ಮಾಜಿ ಸೈನಿಕರ ಸಂಘ ಹಾಗೂ ಊರವರ ಸಹಕಾರದಲ್ಲಿ ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದಿ ಫೆ1 ರಂದು ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ದೇವಪ್ರಸಾದ್ ಗೌಡ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ, ಕಲ್ಲೇರಿ,...

ಕೇಂದ್ರ ಬಜೆಟ್ ನಲ್ಲಿ ಕರಾವಳಿಯ ಅವಗಣನೆ ಖಂಡನಾರ್ಹ: ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿಯ ಬಜೆಟ್ ನಲ್ಲಿ ಕರಾವಳಿಗೆ ಯಾವುದೇ ಹೊಸ ಯೋಜನೆಗಳನ್ನಾಗಲಿ, ಅನುದಾನಗಳನ್ನು ಘೋಷಿಸದೆ ಅವಗಣನೆ ಮಾಡಿರುವುದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಅನ್ಯಾಯ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಕಳೆದ ಸುಮಾರು 25 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಸದರನ್ನೇ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿಕೊಡುತ್ತಿದ್ದರೂ ಕೇಂದ್ರ ಸರಕಾರ ಸತತವಾಗಿ ಕರಾವಳಿ ಭಾಗಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲಸಾಧ್ಯವಾಗಿದೆ. ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.