ಮಲೆಬೆಟ್ಟುವಿನಲ್ಲಿ ಬೈಕ್ ಪಿಕಪ್ ಅಪಘಾತ ವಿದ್ಯಾರ್ಥಿಗೆ ಗಂಭೀರ ಗಾಯ
ಬೆಳ್ತಂಗಡಿ: ಬೈಕ್-ಪಿಕಪ್ ಅಪಘಾತ- ಬೈಕ್ ಸವಾರ ಗಂಭೀರಬೆಳ್ತಂಗಡಿ: ಮಲೆಬೆಟ್ಟು ನಿನ್ನಿಕಲ್ಲು ರಸ್ತೆ ಬಳಿ ಬೈಕ್ ಮತ್ತು ಪಿಕಪ್ ವಾಹನ ಅಪಘಾತದಲ್ಲಿ ಕಾಲೇಜು ವಿಧ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಆ.13ರಂದು ಬೆಳಿಗ್ಗೆ ನಡೆದಿದೆ.ಅಪಘಾತದಲ್ಲಿ ಗುರುವಾಯನಕೆರೆ ಖಾಸಗಿ ಕಾಲೇಜು ವಿದ್ಯಾರ್ಥಿ ಬೆಳಾಲು ಗ್ರಾಮದ ಮಂಜೂತ್ತು ಉಮೇಶ್ ಎಂ.ಜಿ. ಯವರ ಪುತ್ರ ಜೀವ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿಸಲಾಗಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಲಾಯಿಲದಲ್ಲಿ ನೆರೆಗೆ ಕಾರಣವಾಗಿದ್ದ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ತೆರವು
ಬೆಳ್ತಂಗಡಿ; ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣವಾಗಿದ್ದ ನದಿ ಒತ್ತುವರಿ ಅಕ್ರಮ ತಡೆಗೋಡೆ ಕೊನೆಗೂ ಒತ್ತುವರಿದಾರರೇ ತೆರವುಗೊಳಿಸಿದ್ದಾರೆ. ಇತ್ತೀಚೆಗೆ ಸುರಿದ ಬಾರಿ ಮಳೆಗೆ ಗುರಿಂಗಾನ ಎಂಬಲ್ಲಿ ನೆರೆ ಬಂದು ಸ್ಥಳೀಯ 14 ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬ ನದಿ ಸೇರಿದಂತೆ ಪರಂಬೋಕು ಸ್ಥಳವನ್ನು ಅತಿಕ್ರಮಣ ಮಾಡಿ ಅದಕ್ಕೆ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಸೇರಿದಂತೆ ಕಂದಾಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಇತ್ತೀಚೆಗೆ ನೆರೆ ಪೀಡಿತ ಗುರಿಂಗಾನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ...
ರಕ್ಷಿತ್ ಶಿವರಾಂ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ
ಬೆಳ್ತಂಗಡಿ: ಪುಂಜಾಲಕಟ್ಟೆ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ನಾಗರಿಕರನ್ನು ಕತ್ತಲಲ್ಲಿರಿಸಿರುವ ಇಲಾಖೆಯ ಧೋರಣೆಯನ್ನು ಖಂಡಿಸಲು ಹಾಗೂ ಆಗುವ ರಸ್ತೆ ಕಾಮಗಾರಿಯ ಬಗ್ಗೆ ನಿಗಾ ಇರಿಸಲು ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯನ್ನು ರಕ್ಷಿತ್ ಶಿವರಾಂ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಆಗಸ್ಟ್ 12ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯನ್ನು ರಚಿಸಲಾಯಿತು. ವೇದಿಕೆಯ ಪ್ರಥಮ ಸಭೆಯಲ್ಲಿ ಕಾಮಗಾರಿಯ ಗುತ್ತಿಗೆ ಹಾಗೂ ಒಡಂಬಡಿಕೆ ಮತ್ತು ಒಳ ಒಪ್ಪಂದಗಳ ಬಗ್ಗೆ ಕಾನೂನು ಹೋರಾಟ ನಡೆಸಲು ತಜ್ಞರ ಜೊತೆ...
ಕಾರ್ಮಿಕರ ಹಕ್ಕು ಕಸಿಯುವ ಬಂಡವಾಳಶಾಹಿಗಳೇ ದೇಶ ಬಿಟ್ಟು ತೊಲಗಿ; ಸಿಐಟಿಯು ಪ್ರತಿಭಟನೆ
ಬೆಳ್ತಂಗಡಿ; ಅಂದು ಭಾರತೀಯರನ್ನು ಗುಲಾಮರನ್ನಾಗಿರಿಸಿದ, ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟೀಶರನ್ನು ಬಾರತ ಬಿಟ್ಟು ತೊಲಗಲು ಕರೆ ನೀಡಿ ಯಶಸ್ವಿಯಾದ ದೇಶದ ದುಡಿಯುವ ವರ್ಗಕ್ಕೆ, ಇಂದು ಶ್ರಮಜೀವಿಗಳನ್ನು ಶೋಷಿಸುವ, ಅವರ ಬದುಕನ್ನು ಕಸಿಯುವ ಕಾರ್ಪರೇಟು ಸಂಸ್ಥೆಗಳ ಮಾಲಕರೇ ಭಾರತ ಬಿಟ್ಟು ತೊಲಗಿರಿ ಎಂದು ಹೋರಾಡುವುದು ಅನಿವಾರ್ಯವಾಗಿದೆ ಎಂದು ಸಿಐಟಿಯು ಜಿಲ್ಲಾ ಉಪಾದ್ಯಕ್ಷರಾದ ಬಿ.ಎಂ.ಭಟ್ ಹೇಳಿದರು.ಅವರು ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆಯ ಭಾಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟುಯು ನೇತೃತ್ವದಲ್ಲಿ ಕಾರ್ಮಿಕರ ಹಕ್ಕು ಕಸಿಯುವವರೇ ಭಾರತ ಬಿಟ್ಟು ತೊಲಗಿರಿ ಎಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ...
ಕಸ್ತೂರಿ ರಂಗನ್ ವರದಿ; ಕೃಷಿಕರಿಗೆ ತೊಂದರೆ ಯಾಗದಂತೆ ಕ್ರಮಕ್ಕೆ ಕೆ.ಎಸ್.ಎಂ.ಸಿ.ಎ ಒತ್ತಾಯ
ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ ಮಲೆನಾಡಿನ ಕೃಷಿಕರಲ್ಲಿ ಗೊಂದಲ ಹಾಗೂ ಭಯಮೂಡಿದೆ ಈ ಬಗ್ಗೆ ಕೃಷಿಕರಲ್ಲಿ ಮೂಡಿರುವ ಭಯ ಹೋಗಲಾಡಿಸಿ ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಎಸ್.ಎಂ.ಸಿ. ಎ ವತಿಯಿಂದ ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ತಮ್ಮ ಬದುಕನ್ನು ಕೃಷಿಭೂಮಿಯನ್ನು ಕಳೆದುಕೊಳ್ಳಬೇಕಾಗಲಿದೆ ಎಂಬ ಭಯದಲ್ಲಿ ಸಾವಿರಾರು ಮಂದಿ ಕೃಷಿಕರಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಮರು...
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ ಕುತಂತ್ರ ಮಾಡುತ್ತಿದೆ; ಐವನ್ ಡಿಸೋಜ
ಬೆಳ್ತಂಗಡಿ : ‘ದೇಶದಲ್ಲಿ ದ್ವೇಷದ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯಪಾಲರು ಬಿಜೆಪಿ ಏಜೆಂಟ್ ಆಗಿ ವರ್ತಿಸಿದ್ದೇ ಆದರೆ ಕಾರ್ಯಕರ್ತರು ಸರಕಾರವನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ದರಾಗಿರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ‘ರಾಜ್ಯದ ಸಿದ್ದರಾಮಯ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಕಂಗೆಟ್ಟು ಹೋಗಿದೆ. ಬಡವರ ಪರವಾಗಿ ಕೆಲಸ ಮಾಡುವವರನ್ನು ಬಿಜೆಪಿಯವರು ಒಪ್ಪುವುದಿಲ್ಲ. ಹಾಗಾಗಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಬೇಕು...
ಮಡಂತ್ಯಾರಿನಲ್ಲಿ ಐವನ್ ಡಿ ಸೋಜ ಅವರಿಗೆ ಸನ್ಮಾನ
ಬೆಳ್ತಂಗಡಿ : ‘ಸಮಾಜದಲ್ಲಿ ರಾಜಕಾರಣಕ್ಕೆ ತನ್ನದೇ ಆದ ಮಹತ್ವ ಮತ್ತು ಗೌರವಗಳಿವೆ. ಯುವಕರು ಹೆಚ್ಚಾಗಿ ರಾಜಕೀಯಕ್ಕೆ ಬರುವ ಕಾರ್ಯವನ್ನು ಮಾಡಬೇಕು, ರಾಜಕೀಯ ವ್ಯಕ್ತಿಗಳ ತೀರ್ಮಾನಗಳು ಇಡೀ ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ರಾಜಕಾರಣಿ ಸರಿಯಾಗಿ ವಿಚಾರ ಮಂಡನೆ ಮಾಡಿದರೆ ಸಮಾಜಕ್ಕೆ ಪ್ರಯೋಜನವಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಅವರು ಭಾನುವಾರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ನಲ್ಲಿ ಸಂಯುಕ್ತ ಕ್ರೈಸ್ತ ಸಂಘಟನೆಗಳ ವತಿಯಿಂದ ದ್ವಿತೀಯ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದುದಕ್ಕಾಗಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ...
ಕಾಶಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಸಿಲುಕಿಕೊಂಡ ಲಾರಿ; ವಾಹನ ಸಂಚಾರ ಅಸ್ತವ್ಯಸ್ತ
ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಶನಿವಾರ ಬೆಳಿಗ್ಗೆ ಲಾರಿಯೊಂದು ಹೊಂಡದಲ್ಲಿ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು ಜನ ರಸ್ತೆಯಲ್ಲಿ ಪರದಾಡುವಂತಾಗಿದೆ. ಆ.10ರಂದು ಬೆಳಗ್ಗೆ ಸುಮಾರು 8:30 ರ ಹೊತ್ತಿಗೆ ಹೊಂಡಮಯವಾಗಿರುವ ಕಾಶಿಬೆಟ್ಟುವಿನ ಹೆದ್ದಾರಿಯಲ್ಲಿ ಲಾರಿ ಜಾಮ್ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಎರಡೂ ಬದಿಯಲ್ಲಿ ನೂರಾರು ವಾಹನಗಳು ಕಾದು ನಿಲ್ಲುವಂತಾಗಿದೆ. ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಬಾರೀ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸಿನಲ್ಲಿ ಕುಳಿತ ವಿದ್ಯಾರ್ಥಿಗಳು ಕ್ಲಾಸ್ ಮಿಸ್ ಮಾಡಿಕೊಳ್ಳುವ ಚಿಂತೆಯಲ್ಲಿದ್ದರೆ ಕೆಲಸಕ್ಕೆ...
ಬೆಳ್ತಂಗಡಿ; ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿ ಸಭೆ; ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂಘಟನೆಯಾಗಿರುವ ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿಯ ಸಭೆ ಬೆಳ್ತಂಗಡಿಯ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ ಲಾರೆನ್ಸ್ ಮುಕ್ಕುಯಿ ಅವರು ಕೆ.ಎಸ್.ಎಂ.ಸಿ ಎ ಕೇಂದ್ರೀಯ ಸಮಿತಿ ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿ ವಿವಿಧ ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಕೆ.ಎಸ್.ಎಂ ಸಿ ಎ ನಿರ್ದೇಶಕರಾದ ಫಾ. ಆದರ್ಶ್ ಪುದೀಯೇಡತ್ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಕೆ.ಎಸ್.ಎಂ.ಸಿ ಎ ಅಧ್ಯಕ್ಷ ಬೆಟ್ಟಿ ನೆಡುನಿಲಂ ಹಾಗೂ ಕೇಂದ್ರೀಯ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಅ.ವಂ ಬಿಷಪ್...
ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ದತಿ ನಿರ್ಮೂಲನಾ ಸಮಿತಿಗೆ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ನೇಮಕ
ಬೆಳ್ತಂಗಡಿ; ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನ ಸಮಿತಿಗೆ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಅವರನ್ನು ನೇಮಕ ಮಾಡಲಾಗಿದೆ. ಬೆಳ್ತಂಗಡಿ , ಪುತ್ತೂರು, ಸುಳ್ಯ, ಕಡಬ ತಾಲೂಕುಗಳನ್ನು ಒಳಗೊಂಡ ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನ ಸಮಿತಿಗೆ ನೇಮಕ ಮಾಡಲಾಗಿದೆ. ಶೇಖರ್ ಲಾಯಿಲ ರವರು ಕಳೆದ 26 ವರ್ಷಗಳಿಂದ ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲಿ ಬೀಡಿ ಕಾರ್ಮಿಕ ಸಂಘ , ಅಕ್ಷರ ದಾಸೋಹ ನೌಕರರ ಸಂಘ , ಅಂಗನವಾಡಿ ನೌಕರರ ಸಂಘಟನೆ , ಅಟೋ ರಿಕ್ಷಾ ಚಾಲಕ- ಮಾಲೀಕರ ಸಂಘಟನೆಗಳ...















