Home ಸ್ಥಳೀಯ ಸಮಾಚಾರ ಕಸ್ತೂರಿ ರಂಗನ್ ವರದಿ; ಕೃಷಿಕರಿಗೆ ತೊಂದರೆ ಯಾಗದಂತೆ ಕ್ರಮಕ್ಕೆ ಕೆ.ಎಸ್.ಎಂ.ಸಿ.ಎ ಒತ್ತಾಯ

ಕಸ್ತೂರಿ ರಂಗನ್ ವರದಿ; ಕೃಷಿಕರಿಗೆ ತೊಂದರೆ ಯಾಗದಂತೆ ಕ್ರಮಕ್ಕೆ ಕೆ.ಎಸ್.ಎಂ.ಸಿ.ಎ ಒತ್ತಾಯ

316
0

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ ಮಲೆನಾಡಿನ ಕೃಷಿಕರಲ್ಲಿ ಗೊಂದಲ ಹಾಗೂ ಭಯಮೂಡಿದೆ ಈ ಬಗ್ಗೆ ಕೃಷಿಕರಲ್ಲಿ ಮೂಡಿರುವ ಭಯ ಹೋಗಲಾಡಿಸಿ ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಎಸ್.ಎಂ.ಸಿ. ಎ ವತಿಯಿಂದ ಸಂಘಟನೆಯ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.


ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ತಮ್ಮ ಬದುಕನ್ನು ಕೃಷಿಭೂಮಿಯನ್ನು ಕಳೆದುಕೊಳ್ಳಬೇಕಾಗಲಿದೆ ಎಂಬ ಭಯದಲ್ಲಿ ಸಾವಿರಾರು ಮಂದಿ ಕೃಷಿಕರಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಮರು ಚಿಂತನೆ ನಡೆಸಿ ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಡಂತ್ಯಾರಿನಲ್ಲಿ ನಡೆದ ಐವನ್ ಡಿಸೋಜ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಸಂಘಟನೆಯ ವತಿಯಿಂದ‌ಸನ್ಮಾನಿಸಿ ಬಳಿಕ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಕೆ.ಎಸ್.ಎಂ.ಸಿ ಎ ಮುಖಂಡರುಗಳು ಉಪಸ್ಥಿತರಿದ್ದರು. ಈಬಗ್ಗೆ ಸರಕಾರದ ಮಟ್ಟದಲ್ಲಿ ಸಚಿವರುಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಐವನ್ ಡಿಸೋಜ ಅವರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here