ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸಿನ ಮತದಾನವಾಗುತ್ತಿದೆ.
ಮಧ್ಯಾಹ್ನ 1 ಗಂಟೆಯ ವರೆಗೆ ತಾಲೂಕಿನಲ್ಲಿ ಶೇ 51.29 ಮತದಾನವಾಗಿರುವುದಾಗಿ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದೆ.
ಬೆಳಗ್ಗೆ 7ಗಂಟೆಗೆ ಮತದಾನದ ಪ್ರಕ್ರಿಯ ಆರಂಭಗೊಂಡಿತ್ತು. ಆರಂಭದಿಂದಲೇ ಮತಗಟ್ಟೆಗಳ ಎದುರು ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಮೊದಲ ಎರಡು ಗಂಟೆಯಲ್ಲಿ ತಾಳುಕಿನಲ್ಲಿ 15.28 ಶೇ ಮತದಾನವಾಗಿತ್ತು. 11ಗಂಟೆಯ ವೇಳೆಗೆ ಶೇ 32.39 ಮತದಾನವಾಗಿತ್ತು.
ಮದ್ಯಾಹ್ನ 1 ಗಂಟೆಯ ವೇಳೆಗೆ ಶೇ 51.29 ಮತದಾನವಾಗಿದೆ.