ಧರ್ಮಸ್ಥಳದಲ್ಲಿ ರುಡ್ ಸೆಟ್ ಸಂಸ್ಥೆಯ ವಾರ್ಷಿಕ ಸಮ್ಮೇಳನ
ಬೆಳ್ತಂಗಡಿ: ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ದೇಶದಾದ್ಯಂತ ಇರುವ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ತರಬೇತಿ ಪಡೆದವರು ಸ್ಥಳೀಯ ಸಂಪನ್ಮೂಲ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಸ್ವ-ಉದ್ಯೋಗ ಪ್ರಾರಂಭಿಸಿ, ಸಾಲದ ಹಣವನ್ನು ಸದುಪಯೋಗ ಮಾಡಿ, ಕೌಲಾಭಿವೃದ್ಧಿಯೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಸಕಾಲಿಕ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕು. ಯಾವುದೇ ಸಮಸ್ಯೆಗಳು, ಸವಾಲುಗಳು...
ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ: ಅಲ್ಪೋನ್ಸ್ ಫ್ರಾಂಕೊ ಖಂಡನೆ
ಬೆಳ್ತಂಗಡಿ; ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮಂಗಳೂರಿನ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಖಂಡನೀಯ ಎಂದು ಕರ್ನಾಟಕ ಕ್ರೈಸ್ತ ಸಂಘದ (KCS) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಓರ್ವ ಜನಪ್ರತಿನಿಧಿಯನ್ನೇ ಗುರಿಯಾಗಿಸಿ ಇಂತಹ ಕೃತ್ಯ ನಡೆಸುವುದರಲ್ಲಿ ಫ್ಯಾಸಿಸ್ಟರ ಇಂತಹ ಕೃತ್ಯ ಸಮಾಜಕ್ಕೆ ಮಾರಕವಾಗಿದೆ.ಈ ದೇಶದಲ್ಲಿ ಕಾನೂನು ಎಲ್ಲರಿಗೂ ಅನ್ವಯ.ನೇರ ಎದುರಿಸಲು ತಯಾರಿಲ್ಲದ ಸಂಘ ಪರಿವಾರದ ಮನಸ್ಥಿತಿಯ ಜನರು...
ರಬ್ಬರ್ ಕೃಷಿಕರು ಆತ್ಮವಿಶ್ವಾಸ ಕಳೆದುಕೊಳ್ಳದೆ ಮುಂದುವರಿಯಿರಿ; ಶ್ರೀಧರ ಜಿ ಭಿಡೆ
ಬೆಳ್ತಂಗಡಿ; ಪ್ರಸಕ್ತ ವರ್ಷ ರಬ್ಬರ್ ಬೆಳೆಗೆ ಬೆಲೆ ಏರಿಳಿತಗಳನ್ನು ಕಂಡಿದ್ದರೂ, ರಬ್ಬರ್ ಬೆಳೆಗಾರರು ಭರವಸೆ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ರಬ್ಬರ್ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ" ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರುಅವರು ಗುರುವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯ ಲ್ಲಿ ಮಾತನಾಡಿದರು.ರಬ್ಬರ್ ಗೆ ಉತ್ತಮ ಬೇಡಿಕೆ ಇದ್ದು, ಪ್ರಸ್ತುತ ಉತ್ಪಾದನೆ ಕಡಿಮೆ ಇದೆ. ಈ ಕಾರಣದಿಂದ ಮುಂದಿನ ಕೆಲವು ವರ್ಷ ದರ ತೀರಾ ಕುಸಿಯುವ ಸಾಧ್ಯತೆ...
ವೇಣೂರು ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ : ನಿಟ್ಟಡೆ ಗ್ರಾಮದ ಬೂತೆರ್ ಎಂಬಲ್ಲಿನ ನಿವಾಸಿ ಸತೀಶ್ ಪೂಜಾರಿ (36) ಎಂಬವರು ಬುಧವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹತ್ತಿರದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಟೆಸುತ್ತಿದ್ದಾರೆ.ಮೃತರು ಅವಿವಾಹಿತರಾಗಿದ್ದು, ಮೇಸ್ತ್ರಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಬೆಳಾಲು ನಿವೃತ್ತ ಶಿಕ್ಷಕನ ಹತ್ಯೆ ಪ್ರಕರಣ; ತನಿಖೆಗಾಗಿ ನಾಲ್ಕು ತಂಡಗಳ ರಚನೆ, ಹಿರಿಯ ಅಧಿಕಾರಿಗಳ ಭೇಟಿ
ಬೆಳ್ತಂಗಡಿ : ಬೆಳಾಲಿನಲ್ಲಿ ಮನೆಗೆ ನುಗ್ಗಿ ನಿವೃತ್ತ ಶಿಕ್ಷಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಬುಧವಾರ ಪಶ್ಚಿಮ ವಲಯ ಐಜಿಪಿ ಅಮೀತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಪಡೆದು ಕೊಂಡರು. ಘಟನೆ ನಡೆದು 24ಗಂಟೆಗಳು ಕಳೆದಿದ್ದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ.ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಭಟ್ (83)...
ಉಜಿರೆಯಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ಉಜಿರೆಯ ಸೆಬಾಸ್ಟಿನ್ ಆಟೋ ಇಂಜಿನಿಯರಿಂಗ್ ವರ್ಕ್ ಇದರ ಹಿಂಭಾಗದ ನಿವಾಸಿ ಸುರೇಶ (38ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ 21 ಬುಧವಾರ ನಡೆದಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಂದು ಇವರ ಮೃತದೇಹ ಪತ್ತೆಯಾಗಿದೆ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಇವರು ಅವಿವಾಹಿತರಾಗಿದ್ದರು. ಮೃತರು ತಾಯಿಯನ್ನು ಅಗಲಿದ್ದಾರೆ.
ಪ್ರಧಾನಿಯವರ ವಿರುದ್ದ ಅವಹೇಳನಕಾರಿ ಹೇಳಿಕೆ ರಕ್ಷಿತ್ ಶಿವರಾಂ ವಿರುದ್ದ ಪೊಲೀಸರಿಗೆ ದೂರು
ಬೆಳ್ತಂಗಡಿ; ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ವಿರುಧ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಿರುಧ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಮಂಡಲ ಉಪಾಧ್ಯಕ್ಷರಾದ ಕೊರಗಪ್ಪ ಚಾರ್ಮಾಡಿ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್, ನಗರ ಬೂತ್ ಕಾರ್ಯದರ್ಶಿ ಮಂಜುನಾಥ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಪ್ರಧಾನಿ ಬಗೆಗಿನ ರಕ್ಷಿತ್ ಶಿವರಾಂ ಹೇಳಿಕೆ ಖಂಡನೀಯ; ಶ್ರೀನಿವಾಸ ರಾವ್
ಬೆಳ್ತಂಗಡಿ;"ಬಾಂಗ್ಲಾದೇಶದಲ್ಲಿ ಹಾಸಿಗೆ ದಿಂಬು ಹಿಡಿದುಕೊಂಡು ಓಡಿದ ಪ್ರಸಂಗ ಭಾರತದ ಪ್ರಧಾನಿಯವರಿಗೂ ಅತಿ ಶೀಘ್ರ ಬರಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ಪುಂಜಾಲಕಟ್ಟೆ- ಚಾರ್ಮಾಡಿ ಹಿತರಕ್ಷಣ ಸಮಿತಿಯ ಜನಾಗ್ರಹ ಸಭೆಯಲ್ಲಿ ಹೇಳಿರುವುದು ಖಂಡನೀಯ" ಎಂದು ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾಸರಾವ್ ಹೇಳಿದರು.ಅವರು ಮಂಗಳವಾರ ಗುರುವಾಯನಕೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ಇಂತಹ ಹೇಳಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದರ ಜತೆ ದೇಶದ ಶಾಂತಿ ಕದಡಲು ಕಾರಣವಾಗುತ್ತದೆ" ಎಂದರು.ಶಾಸಕ ಹರೀಶ್ ಪೂಂಜಾ ಅವರ ಕುರಿತು ಭ್ರಷ್ಟಾಚಾರ ಆರೋಪ ಮಾಡಿದ ಬಗ್ಗೆ ಈಗಾಗಲೇ...
ಬೆಳಾಲಿನಲ್ಲಿ ನಿವೃತ್ತ ಶಿಕ್ಷಕನ ಭೀಕರ ಕೊಲೆ
ಬೆಳ್ತಂಗಡಿ: ಮನೆಯ ಅಂಗಳದಲ್ಲಿಯೇ ವ್ಯಕ್ತಿಯನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ ಕಾಂಪೌಂಡಿನಲ್ಲಿ ನಡೆದಿದೆ.ಎಸ್.ಪಿ.ಬಾಲಕೃಷ್ಣ ಭಟ್ (73) ಕೊಲೆಯಾದ ವ್ಯಕ್ತಿ.ಮಂಗಳವಾರ ಮಧ್ಯಾಹ್ನದ ಬಳಿಕ ಘಟನೆ ಸಂಭವಿಸಿದೆ ಕೊಲೆಗಾರರು ಯಾರು ಕೊಲೆಗೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿಲ್ಲಈ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದೌಡಾಯಿಸಿದ್ದು ತನಿಖೆ ನಡೆಸುತ್ತಿದ್ದಾರೆ
ಶಾಸಕ ಹರೀಶ್ ಪೂಂಜ ಅವರಿಂದ ಮಳೆಹಾನಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ
ಬೆಳ್ತಂಗಡಿ; ಸೋಮವಾರ ಸಂಜೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದು ಹಲವೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲವಂತಿಗೆ ಗ್ರಾಮದ ಮಲ್ಲ ನಂದಿಕಾಡು ರಸ್ತೆ, ಕೊಟರಿಮಾರ್ ಅರ್ತಿದಡಿ ಹರೀಶ್ ಗೌಡ ಅವರ ಮನೆ, ಕಜಕೆ ನೇಲೆಕ್ಕಿಲ್ ನಾರಾಯಣ ಮಲೆಕುಡಿಯ ಮನೆಗೆ, ಕಜಕೆ ಶಾಲೆ, ಪಂಚಾಯತ್, ಮಿತ್ತಬಾಗಿಲು ಗ್ರಾಮದ ಬಿರ್ಮನೊಟ್ಟು ತಡೆಗೋಡೆ ಹಾನಿ ಸ್ಥಳ, ರಾಜಪ್ಪ ಗೌಡರ ಮನೆ, ಮಿತ್ತಬಾಗಿಲು ಗುತ್ತು ಮನೆಯಿಂದ ತೋಟಕ್ಕೆ ಹಾನಿ, ಕೂಡಬೆಟ್ಟು ಸದಾಶಿವ ದೇವಸ್ಥಾನ, ಪಿಲತ್ತಡಿ ದಡ್ಡು,...















